ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದರು ತಾಲೂಕು ಆಡಳಿತ ಮೌನ ಏಕೆ..?

 ವಿಜಯ ಸಂಘರ್ಷ



ಶಿಕಾರಿಪುರ : ತಾಲ್ಲೂಕಿನ ಶಿರಾಳ ಕೊಪ್ಪದ ಸುತ್ತ ಮುತ್ತಲಿನಲ್ಲಿ ಅಕ್ರಮ ವಾಗಿ ಟ್ರ್ಯಾಕ್ಟರ್, ಲಾರಿಗಳಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದೆ ಆದರೆ ತಾಲೂಕು ಆಡಳಿತ ಮೌನವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಮುಖಂಡ ಸತೀಶ್ ಬೆಲವಂತನ ಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಸುದ್ದಿಮನೆಯಲ್ಲಿ ಮಾತನಾ ಡಿದ ಅವರು, ರಾಯಲ್ಟಿ ಬಿಲ್ ಪಾವತಿ ಮಾಡದೆ ಶಿರಾಳಕೊಪ್ಪದ ಸುತ್ತ ಮುತ್ತ ಅಕ್ರಮವಾಗಿ ಮರಳು ತುಂಬಿದ ಲಾರಿ ಟ್ರ್ಯಾಕ್ಟರ್ ಗಳು ಓಡಾಡುತ್ತಿವೆ, ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರು ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಅಕ್ರಮ ದಂದೆಯಲ್ಲಿ ಕೆಲವು ಪ್ರಭಾವಿ ಜನಪ್ರತಿನಿಧಿಗಳು ಶಾಮೀಲು ಇರುವ ಅನುಮಾನ ಮೂಡುತ್ತಿದ್ದು, ಬೆಲವಂತ ಕೊಪ್ಪದ ಹತ್ತಿರದಲ್ಲಿ ಅಕ್ರಮ ಮರಳು ಶೇಖರಣೆ ಹಾಗೂ ಲಾರಿ ಗಳಲ್ಲಿ ರಾಯಲ್ಟಿ ಬಿಲ್ ಇರದ ಮರಳು ಸಾಗಣಿಕೆ ನಡಿಯು ತ್ತಿರುವ ಬಗ್ಗೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಗಳಿಗೆ ಇಂದು ದೂರು ನೀಡಿ ಕ್ರಮ ಜರುಗಿಸದಿದ್ದರೆ ರೈತ ಸಂಘಟನೆ ಯಿಂದ ಹೋರಾಟ ಹಮ್ಮಿಕೊಳ್ಳ ಲಾಗುವುದು ಎಂದರು.

ಮುಖಂಡರಾದ ಶೇಕ್ರಪ್ಪ ಹಾಗೂ ಜಯಂತ್ ಸುದ್ದಿ ಘೋಷ್ಟಿಯಲ್ಲಿ ಇದ್ದರು.

(ವರದಿ ಹುಲಿಗಿ ಕೃಷ್ಣ )


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು