ಕಾರ್ಮಿಕ ಇಲಾಖೆ ವತಿ ಯಿಂದ ಬೀದಿ ನಾಟಕ

 ವಿಜಯ ಸಂಘರ್ಷ



ಭದ್ರಾವತಿ :ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ನಿರ್ಮೂಲನೆ ಯೋಜನೆ ಸೊಸೈಟಿ ಆಶ್ರಯದಲ್ಲಿ ಬೀದಿ ನಾಟಕ ಮೂಲಕ ಅರಿವು ಕಾರ್ಯಕ್ರಮ ನಡೆಯಿತು.


ಕೋರ್ಟ್ ರಸ್ತೆಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಬೀದಿ ನಾಟಕ ಕಾರ್ಯಕ್ರಮ ವನ್ನು ಶಿವಮೊಗ್ಗ ಶಾಂತಿ ಸಾಗರ ಜಾಗೃತಿ ಕಲಾತಂಡ ಕಲಾವಿದರಿಂದ ಬಾಲ್ಯಾವಸ್ಥೆ ಹಾಗೂ ಕಿಶೋರ ವಸ್ಥೆ ಕಾರ್ಮಿಕ ಕಾಯ್ದೆ 1986 ಇದರ ಅನ್ವಯ ಉದ್ಯೋಗ ಮತ್ತು ಪ್ರಕ್ರಿಯೆ ಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜನೆ ಮಾಡುವುದು ಅಪಾಯ ಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ಘೋಷಣೆ ಮೂಲಕ ಅರಿವು ಮೂಡಿಸಿದರು.


14 ವರ್ಷದೊಳಗಿನ ಮಕ್ಕಳು ಯಾವು ದೇ ಉದ್ಯೋಗ ಅಥವಾ ಪ್ರಕ್ರಿಯೆ ಗಳು ಹಾಗೂ 18 ವರ್ಷ ವಯಸ್ಸಿನ ವರಿಗೆ. ಕಿಶೋರ. ಅಪಾಯಕಾರಿ ಉದ್ಯೋಗ ಗಳಲ್ಲಿ ತೊಡಗಿಸಿಕೊಂಡಿ ರುವುದು ಕಂಡು ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ. ಬೀದಿ ನಾಟಕಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ,ಕಾರ್ಮಿಕ ಇಲಾಖಾ ಧಿಕಾರಿಗಳು ಭಾಗವಹಿಸಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು