ಬೀದಿಗೆ ಬೀಳಲಿದ್ದಾರೆಯೇ ಕಾರ್ಮಿಕರು :ಕಾರ್ಮಿಕರೇ ಒಟ್ಟಾಗಿ ಚುನಾವಣೆ ಬಹಿಷ್ಕರಿಸಿ: ಬಿ.ಎನ್.ರಾಜು

 ವಿಜಯ ಸಂಘರ್ಷ



ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರ ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸದೆ ಪ್ರತಿ ವಿಧಾನ ಸಭಾ ಹಾಗೂ ಲೋಕಸಭಾ ಚುನಾ ವಣೆಯಲ್ಲಿ ರಾಜಕಾರಣಿಗಳು ಕೇವಲ ಆಶ್ವಾಸನೆ ನೀಡಿ, ಕಾರ್ಮಿಕ ರಿಂದ ಮತ ಪಡೆದು ನಂತರ ಮಾಯವಾಗುವ ರಾಜಕಾರಣಿಗಳ ಕೇವಲ ಆಶ್ವಾಸನೆ ಬೇಡ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಬಿ ಎನ್ ರಾಜು ಹೇಳಿದರು.


ಭಾನುವಾರ ನಗರದ ಮಾಧವ ಚಾರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಮಾತನಾ ಡಿದ ಅವರು, ರಾಜಕಾರಣಿಗಳ ಇಚ್ಚಾಶಕ್ತಿ ಕೊರತೆಯಿಂದ ವಿಐಎಸ್ ಎಲ್ ಕಾರ್ಖಾನೆ ಮುಚ್ಚುವ ಹಂತ ತಲುಪಿದೆ.


ಈಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಪುನಹ ಅದೇ ರಾಗವಿಡಿದು ಬರುವ ರಾಜಕಾರಣಿ ಗಳಿಗೆ ದೂರವಿಟ್ಟು ಎಲ್ಲರೂ ಒಗ್ಗಟ್ಟಾ ಗಿ ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿದರು.

 ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರು ಸಾರ್ವಜನಿಕರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು