ವಿಜಯ ಸಂಘರ್ಷ
ಶಿಕಾರಿಪುರ : ಹಿಂದೂಗಳ ಬಾವನೆಗೆ ದಕ್ಕೆ ಬಾರದಂತೆ ಕೇಂದ್ರ ಸರ್ಕಾರ ಧರ್ಮ ರಕ್ಷಣೆಗೆ ವಿಶೇಷ ಕಾನೂನು ರಚನೆ ಮಾಡಬೇಕು ಹಾಗೂ ಶ್ರೀ ರಾಮನು ಪ್ರಭು ಸೀತಾ ದೇವಿಗೆ ಮದ್ಯ ಕುಡಿಸುತಿದ್ದ ಎಂದು ವಿವಾದತ್ಮಕ ಹೇಳಿಕೆ ನೀಡಿ ಪದೇ ಪದೇ ಹಿಂದೂ ದೇವರುಗಳಿಗೆ ಅಪಮಾನ ಮಾಡುತ್ತಿ ರುವ ವಿವಾದಾತ್ಮಕ ಲೇಖಕ ಪ್ರೊ: ಭಗವಾನ್ ನನ್ನು ಬಂಧಿಸಿ ಹಾಗೂ ಷರತ್ತಿನ ಮೇಲೆ ಪಡೆದಿರುವ ಜಾಮೀನು ವಜಾ ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣೆ ವೇದಿಕೆಯ ಕಾವೇರಿ ರಾಯ್ಕರ್ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖ ರ್ ರವರು ಸಂತ ತುಳಸಿ ದಾಸರು ಬರೆದ ಶ್ರೀ ರಾಮ ಚರಿತ ಮಾನಸ ವನ್ನು ದ್ವೇಷ ಹುಟ್ಟಿಸುವ ಗ್ರಂಥ ಎಂದು ಹೇಳಿದ್ದಾರೆ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸ್ವಾಮಿ ವಾಸದ್ ಮೌರ್ಯ ಶ್ರೀ ರಾಮ ಮಾನಸ ಗ್ರಂಥ ವನ್ನು ಸರಕಾರ ಮುಟ್ಟುಗೋಲು ಹಾಕಿ ನಾಶ ಮಾಡಬೇಕು ಎಂದಿದ್ದಾರೆ, ಹಿಂದೂಗಳು ಕಾಪಿರಾ ಹಾಗೂ ಮಹಿಳೆಯರು ಸೈತಾನ್ ಎಂದು ಹೇಳುವ ಗ್ರಂಥಗಳ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು ಧರ್ಮ ನಿಂದನೆ ಕಾನೂನು ಜಾರಿಗೊ ಳಿಸಲು ಒತ್ತಾಯಿಸಿದರು.
ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ಪ್ರೊಪೆಸರ್ ಎಂದು ಕರೆಸಿ ಹಿಂದೂ ಕ್ಕೊಳುವ ಹಿಂದೂ ದ್ವೇಷಿನಾಲಾಯಕ್ ಭಗವಾನ್ ಒಬ್ಬ ಮಾನಸಿಕ ರೋಗಿ ಆಗಿರಬಹುದು ಮೊದಲು ಆತನನ್ನು ಮಾನಸಿಕ ಆಸ್ಪತ್ರೆಗೆ ಧಾಖಲು ಮಾಡಿ ಪರೀಕ್ಷೆ ಮಾಡಿಸಲಿ, ಷರತ್ತು ಬದ್ದ ಜಾಮೀನು ವಜಾ ಮಾಡಬೇಕು ಹಾಗೂ ಓಟಿಗಾಗಿ ಹಿಂದೂಗಳ ಬಾವನೆಗೆ ದಕ್ಕೆ ಬರು ವಂತೆ ಶ್ರೀ ರಾಮ ಮಾನಸ ಗ್ರಂಥದ ಬಗ್ಗೆ ಹೇಳಿಕೆ ನೀಡುವವರ ಮೇಲೆ ಕೇಂದ್ರ ಕಾನೂನು ಕ್ರಮ ಜರುಗಿಸಲು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಶ್ರೀ ರಾಮ ಸೇನೆಯ ಶ್ರೀ ರಾಜ್ ಭಜರಂಗಿ, ಪ್ರಕಾಶ್, ವೀರೇಶ್, ಅಜಯ್, ಪರಶುರಾಮ್ ಮತ್ತಿತರರಿದ್ದರು.