ನಿರ್ಗತಿಕರ-ಅಶಕ್ತರ ಬಗ್ಗೆ ಅನುಕಂಪ ಬೇಡ ಆಸರೆ ನೀಡಿ: ಬಿ.ಕೆ ಸಂಗಮೇಶ್ವರ್

 ವಿಜಯ ಸಂಘರ್ಷ



ಭದ್ರಾವತಿ: ನಿರ್ಗತಿಕರು, ಅಶಕ್ತರಿಗೆ ಹಾಗು ಶೋಷಣೆಗೆ ಒಳಗಾದವರ ಕುರಿತು ಅನುಕಂಪ ಪಡದೆ ಆಶ್ರಯ ನೀಡುವ ಮನೋಭಾವ ಬೆಳೆಸಿಕೊಳ್ಳಿ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.


ಜನ್ನಾಪುರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿ ದ್ದ ಕಾರ್ಯಕ್ರಮದಲ್ಲಿ ಟ್ರಸ್ಟ್ ಕರಪತ್ರ ಮತ್ತು ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ಪ್ರಸ್ತುತ ಸಮಾಜದಲ್ಲಿ ಬಹಳಷ್ಟು ಕುಟುಂಬ ಗಳಲ್ಲಿ ವಯೋವೃದ್ಧರನ್ನು ಕಡೆಗಣಿಸುವ ಮೂಲಕ ಅವರನ್ನು ಮನೆಯಿಂದ ಹೊರಗಿಡುವ ಮನಸ್ಥಿತಿ ಹೆಚ್ಚಾಗುತ್ತಿದೆ. ಅಲ್ಲದೆ ನಿರ್ಗತಿಕರು, ಅಶಕ್ತರು ಹಾಗು ಶೋಷಣೆಗೆ ಒಳ ಗಾದವರು ಸಹ ಹೆಚ್ಚಾಗಿ ಕಂಡುಬರು ತ್ತಿದ್ದಾರೆ. ಇವರ ನೆರವಿಗೆ ಮುಂದಾಗಿ ಸೇವೆಯಲ್ಲಿ ತೊಡಗಿಸಿಕೊಂಡಿರು ವವರ ಕಾರ್ಯಶ್ಲಾಘನೀಯವಾ ಗಿದ್ದು, ಇದಕ್ಕೆ ಯಾರು ಸಹ ಬೆಲೆ ಕಟ್ಟಲು ಸಾಧ್ಯವಿಲ್ಲ.


 ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಂತಹ ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರಲ್ಲದೆ, ತಾವು ಸಹ ಟ್ರಸ್ಟ್ ಗೆ ಸಹಕಾರ ನೀಡಲು ಬದ್ದವಿದ್ದೇನೆ. ಅಲ್ಲದೆ ವೈಯಕ್ತಿಕವಾಗಿ ಸಹ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು.


ಕೋಮು ಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಮಣಿ ಎಎನ್‌ಎಸ್, ಮಾಜಿ ಸದಸ್ಯ ಬಾಲಕೃಷ್ಣ, ವೈದ್ಯ ಡಾ. ಎಚ್.ಆರ್ ನರೇಂದ್ರ, ಆರ್. ಮೋಸಸ್, ಜೈಪಾಲ್, ರಘು ಸೇರಿದಂತೆ ಇನ್ನಿತರರಿದ್ದರು.


ಇದೆ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣನೀಯ ಸೇವೆ ಸಲ್ಲಿಸಿದ ಸವಿತಾ, ವೈ.ಕೆ ಹನುಮಂತಯ್ಯ, ವಿಲ್ಸನ್ ಬಾಬು ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಟ್ರಸ್ಟ್ ಅಧ್ಯಕ್ಷ ಜಿ. ರಾಜು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು