ಕಾರ್ಖಾನೆ ಉಳಿವಿಗೆ ಸಾರ್ವ ಜನಿಕರು ಸಲಹೆ ನೀಡಲು ಬನ್ನಿ : ಶಾಸಕ ಸಂಗಮೇಶ್ವರ್

 ವಿಜಯ ಸಂಘರ್ಷ



ಭದ್ರಾವತಿ: ನಗರದ ವಿಐಎಸ್ಎಲ್ ಕಾರ್ಖಾನೆಗಳ ಉಳಿವಿಗಾಗಿ ಹಾಗೂ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲಿಸಿ ಜ :28 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಕಚೇರಿ ರಸ್ತೆಯ ವೀರಶೈವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸಾರ್ವಜನಿಕರು ಸಭೆಗೆ ಆಗಮಿಸಿ ಸಲಹೆ ನೀಡುವಂತೆ ಶಾಸಕ ಬಿ.ಕೆ.ಸಂಗಮೇ ಶ್ವರ್ ಕೋರಿದರು.


ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ಬಿಜೆಪಿ ಪಕ್ಷಕ್ಕೆ ಮತ ಹಾಕಲು ಜನ ಯಾರು ಮುಂದೆ ಬರುವುದಿಲ್ಲ. ಹಿಂದಿನ ಚುನಾವಣೆ ಯಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆಗಳಲ್ಲಿ ಯಾವುದು ಈಡೇರಿ ಸಿಲ್ಲ. ಬಡವರ ಖಾತೆಗೆ 15 ಲಕ್ಷ ರೂ. ನೀಡುವುದಾಗಿ ಹೇಳಿದ್ದ ಪ್ರಧಾನಿಗಳ ಭರವಸೆ ಹುಸಿಯಾಗಿದೆ.


ಹಿಂದಿನ ಇಂದಿರಾ ಗಾಂಧಿ ಕಾಂಗ್ರೆಸ್ ಸರ್ಕಾರ ಬಹುತೇಕ ಕಾರ್ಖಾನೆಗಳನ್ನು ಸರ್ಕಾರಿ ಸಾಮ್ಯದಲ್ಲಿ ಉಳಿಸಿತ್ತು. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಖಾಸಗಿಕರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಡಿಗೆ ಅನಿಲ. ಪೆಟ್ರೋಲ್ ಡೀಸೆಲ್. ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಇದರಿಂದ ಸಾರ್ವಜನಿಕರ ಜೀವನ ದುಸ್ಥಿತಿಯಲ್ಲಿ ಬದುಕುವಂತಾಗಿದೆ ಎಂದರು.

1 ಕಾಮೆಂಟ್‌ಗಳು

  1. ಈಗಾಗಲೇ ಮೈಸೂರು ಕಾಗದ ಕಾರ್ಖಾನೆ ಬಂದಾಗಿ 8ನೇ ವರ್ಷ ನಡಿತಾ ಇದೆ, ಕಾರ್ಮಿಕರಿಗೆ ಇನ್ನು ಬಾಕಿ ಹಣ ಬರಬೇಕು, ಸುಮ್ಮನೆ ಹೋರಾಟ ಮಾಡಿದ ನಾಟಕ ಪ್ರದರ್ಶನ. ಯಾರೂ ಕೂಡ ಸರಿ ಇಲ್ಲ.

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು