ಕಾರ್ಮಿಕರ ಹಿತ ಕಾಪಾಡುವ ಜವಾಬ್ದಾರಿ ಸರಕಾರಗಳ ದ್ದಾಗಿದೆ: ಸಿದ್ದಲಿಂಗಯ್ಯ

 ವಿಜಯ ಸಂಘರ್ಷ



ಭದ್ರಾವತಿ :ನಗರದ ವಿಐಎಸ್​ಎಲ್​ ಕಾರ್ಖಾನೆಗೆ ಮುಚ್ಚಲು ಅದೇಶಿಸಿರು ವುದನ್ನು ಖಂಡಿಸಿ ಪ್ರತಿಭಟನೆ ನಡೆ ಯುತ್ತಿದೆ. ಕಾರ್ಖಾನೆಯ ಗುತ್ತಿಗೆ ನೌಕರರು ತಮ್ಮ ಬದುಕಿನ ಭವಿಷ್ಯ ಪ್ರಶ್ನೆ ಕೇಳುತ್ತಾ ಧರಣಿ ಕುಳಿತಿದ್ದಾರೆ. ಇವರ ಈ ಪ್ರತಿಭಟನೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದು ಕೊಳ್ಳುತ್ತಿದೆ.


ಈ ನಡುವೆ ವಿಐಎಸ್ಎಲ್ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಕೈಗೊಂಡಿರುವ ಹೋರಾಟ ಬೆಂಬಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸುವ ಹಾಗು ಕಾರ್ಮಿಕರ ಹಿತ ಕಾಪಾಡುವ ಜವಾಬ್ದಾರಿ ರಾಜ್ಯ ಮತ್ತು ಕೇಂದ್ರ ಸರಕಾರಗಳದ್ದಾಗಿದೆ. ಕೇಂದ್ರ ಸರಕಾರವು ಲಕ್ಷಾಂತರ ಜನರಿಗೆ ಅನ್ನ ನೀಡಿದ ಕಾರ್ಖಾನೆಯನ್ನು ಉಳಿಸಬೇಕಿದೆ.ದೇಶಕ್ಕೆ ಕಬ್ಬಿಣ, ಉಕ್ಕು, ಸಿಮೆಂಟ್, ಸಕ್ಕರೆ, ಕಾಗದ ನೀಡಿದ ಊರನ್ನು ಪ್ರಧಾನಿ, ಮುಖ್ಯಮಂತ್ರಿ, ಸಂಸದರು, ಶಾಸಕರು ಕಾರ್ಖಾನೆಗಳನ್ನು ಉಳಿಸಬೇಕು ಎಂದು ಸಲಹೆ ನೀಡಿದರು.


ಭದ್ರಾವತಿಯಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ದಿನದಿಂದ ದಿನಕ್ಕೆ ಹೋರಾಟ ಪ್ರಬಲಗೊಳ್ಳುತ್ತಿದೆ. ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ರೈತ ಮುಖಂಡ ಎಚ್.ಆರ್ ಬಸವರಾಜಪ್ಪ ಹಾಗು ಆಮ್ ಆದ್ಮಿ ಪಾರ್ಟಿ ಶಿವಮೊಗ್ಗ ವಿಧಾನಕ್ಷೇತ್ರದ ಆಕ್ಷಾಂಕ್ಷಿ ಟಿ. ನೇತ್ರಾವತಿ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಮುಖರು ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ಧಾರೆ. ವಿಐಎಸ್‌ಎಲ್ ಕಾರ್ಖಾನೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಷ್ಟೆ ಅಲ್ಲದೆ ಪಕ್ಷಾತೀತ ಹೋರಾಟಕ್ಕೆ ಸಭೇ ನಡೆಸಲಾಗಿದ್ದು ರಾತ್ರಿ ಪಂಜಿನ ಪ್ರತಿಭಟನೆ ನಡೆಯಿತು.


ಇನ್ನೂ ವಿವಿಧ ಮುಖಂಡರು ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು, ಕಾರ್ಖಾನೆಯನ್ನು ಉಳಿಸಿಕೊಳ್ಳುತ್ತೇವೆ ಎಂದು ಸ್ಥಳೀಯರು ಸಹ ಪ್ರತಿಭಟನೆಗೆ ಸಹಕಾರ ನೀಡುತ್ತಿ ದ್ದಾರೆ.ಇಂದು ಮಧ್ಯಾಹ್ನ ಬಂಜಾರ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ.


ಈ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಸುರೇಶ್,ಎಂ. ನಾರಾಯಣ, ಮಂಜುನಾಥ್, ವಿನೋದ್‌ ಕುಮಾರ್, ಅಂತೋಣಿ ದಾಸ್, ವಿನಯ ಕುಮಾರ್, ಆನಂದ್, ಮಂಜುನಾಥ್, ಅರುಣ್ ಕುಮಾರ್, ಕುಮಾರಸ್ವಾಮಿ, ಧನಂಜಯ, ಸತೀಶ್, ಶಿವರಾಂ, ಐಸಾಕ್‌ ಲಿಂಕನ್ ಸೇರಿದಂತೆ ಪಡಿತರ ವಿತರಕರ ಸಂಘದ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು