ವಿಜಯ ಸಂಘರ್ಷ
ಭದ್ರಾವತಿ:ಡಾ:ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನದಿಂದ ಸರ್ವರಿಗೂ ಸಮಾನತೆ ದೊರೆತಿದೆ ಎಂದು ಸರ್ ಮಿರ್ಜಾ ಇಸ್ಮಾಯಿಲ್ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಿಸಾರ್ ಅಹಮದ್ ಹೇಳಿದರು.
ನಗರದ ಅನ್ವರ್ ಕಾಲೋನಿಯ ಸಂಘದ ಕಚೇರಿಯಲ್ಲಿ ಇತ್ತೀಚಿಗೆ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಬಿ. ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಸರ್ವರಿಗೂ ಸಮಾ ನತೆ ನೀಡಿದ ಸಲುವಾಗಿ ಇಂದು ಒಂದಾಗಿ ಬಾಳುವ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ತರೀಕೆರೆಯ ರಾಷ್ಟ್ರಪ್ರಶಸ್ತಿ ವಿಜೇತ ರಾದ ಸಾಜೀದಾ ಭಾನು ಕಾರ್ಯಕ್ರಮ ದಲ್ಲಿ ಭಾಗವಹಿಸಿ ನೆರೆ ಜಿಲ್ಲೆಯಲ್ಲಿ ರುವ ತಮ್ಮನ್ನು ಗುರುತಿಸಿ ನೀಡಿದ ಗೌರವ ತಾವು ದೆಹಲಿ ಯಲ್ಲಿ ಪಡೆದ ರಾಷ್ಟ್ರ ಪ್ರಶಸ್ತಿಗೆ ಸಮಾನ ಎಂದರು.
ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಮುಮ್ತಾಜ್ ಬೇಗಂ,ಸಂಘದ ಗೌರವಾಧ್ಯಕ್ಷ ಅತಾವುಲ್ಲ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795