ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಜಗತ್ತಿಗೆ ಇಂದು ಗಾಂಧೀಜಿ -ಶಾಸ್ತ್ರೀಜಿ ಯವರ ಆದರ್ಶ ಗಳ ಪಾಲನೆ ಅಗತ್ಯವಿದೆ ಎಂದು ಯರೇಹಳ್ಳಿಯ ಸರ್ಕಾರಿ ಸರ್ಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
ಅವರು ಶುಕ್ರವಾರ ಶಾಲೆ ಯಲ್ಲಿ ನಡೆದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಯವರ ಜಯಂತಿ ಆಚರಣೆ ಸಂದರ್ಭದಲ್ಲಿ ಪ್ರಾಸ್ತವಿಕ ವಾಗಿ ಮಾತನಾಡಿ, ಆ ಮಹಾನ್ ವ್ಯಕ್ತಿ ಗಳು ಇಟ್ಟು ಕೊಂಡಿದ್ದ ಆದರ್ಶ ಗಳು ಇಂದಿನ ಪ್ರಕ್ಷುಬ್ದ ಜಗತ್ತಿಗೆ ಶಾಂತಿಯ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ ವಾಗಿವೆ ಎಂದರು.
ಸತ್ಯ ಅಹಿಂಸೆ ಶಾಂತಿ ಮೂಲಕ ಬ್ರಿಟಿಷರು ತಾವಾಗಿಯೇ ದೇಶ ಬಿಟ್ಟು ಹೋಗುವಂತೆ ಮಾಡಿದ್ಧು ಬಹುದೊಡ್ಡ ಸಾಧನೆ. ಇವತ್ತಿಗೂ ಜಗತ್ತಿಗೆ ಹೋರಾಟದ ಅಸ್ತ್ರವಾಗಿ ಅಹಿಂಸೆ ಮತ್ತು ಸತ್ಯಾಗ್ರಹ ಗಳು ಮುಖ್ಯ ವಾಗಿರು ವುದು ಗಾಂಧೀಜಿ ಯವರ ಆ ಆದರ್ಶ ಗಳನ್ನು ಎತ್ತಿ ಹಿಡಿಯುತ್ತವೆ ಎಂದರು.
ದೇಶ ಸಂಕಟ ದಲ್ಲಿದ್ದಾಗ ಒಂದು ಹೊತ್ತಿನ ಉಪವಾಸಕ್ಕೆ ಕರೆ ನೀಡಿ ಸ್ವಾಭಿಮಾನದ ಪಾಠ ಹೇಳಿಕೊಟ್ಟ, ಜೈ ಜವಾನ್ ಜೈ ಕಿಸಾನ್ ಘೋಷಣೆ ಮೂಲಕ ರೈತರ ಮತ್ತು ಸೈನಿಕರ ಮಹತ್ವದ ಸಂದೇಶ ಸಾರಿದ್ದ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಯವರ ಸರಳ ಜೀವನ ಇಂದಿಗೂ ಮಾದರಿಯಾಗಿದೆ.
ಇಂತಹ ಮಹಾತ್ಮರ ಜೀವನ ಸಾಧನೆ ಆದರ್ಶಗಳು ನಮಗೆ ಪಾಠ ಆಗಬೇಕು ಎಂದರಲ್ಲದೆ, ಪೋಷಕರು ಮಕ್ಕಳಿಗೆ ನೈತಿಕ ಸ್ಟೈ ರ್ಯ ತುಂಬಬೇಕು ಎಂದು ಕಿವಿಮಾತು ಹೇಳಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶೋಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಲಲಿತ ಕುಮಾರಿ, ಎಸ್ ಡಿ ಎಂ ಸಿ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ, ಹಿರಿಯ ಸದಸ್ಯರಾದ ಬಸವರಾಜ್ ಸೇರಿದಂತೆ ಪೋಷಕರು, ಮಸರಹಳ್ಳಿ, ತಾಷ್ಕೆಂಟ್ ನಗರ, ಮಾರುತಿ ನಗರ ಹಾಗೂ ಎರೇಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
ಶಾಲಾ ಶಿಕ್ಷಕಿ ವಾಣಿಶ್ರೀ ಪಾಟೀಲ್ ಸ್ವಾಗತಿಸಿ, ಸುಮ ನಿರೂಪಿಸಿದರೆ,ಜ್ಯೋತಿ ವಂದಿಸಿದರು.