ಕಾರ್ಮಿಕರು ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ: ಬಿ.ಕೆ.ಸಂಗಮೇಶ್ವರ್

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಕಾರ್ಮಿಕರು ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಸರ್ಕಾರ ನೀಡಿರುವ ಸುರಕ್ಷತಾ ಕಿಟ್ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಬಿ.ಕೆ. ಸಂಗಮೇಶ್ವರ್ ಸಲಹೆ ವ್ಯಕ್ತಪಡಿಸಿದರು.

    ಅವರು ಭಾನುವಾರ ನಗರದ ಬೈಪಾಸ್ ರಸ್ತೆ ಜೆಪಿಎಸ್ ಕಾಲೋನಿಯ ಕಾರ್ಮಿಕರ ಭವನದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ಇಲಾಖೆಯ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಆಯೋಜಿಸಲಾಗಿದ್ದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಿಟ್‌ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

     ಕಾರ್ಮಿಕರು ಸುರಕ್ಷಿತವಾಗಿ, ಆರೋಗ್ಯ ವಾಗಿರಬೇಕು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ಈ ಹಿನ್ನಲೆಯಲ್ಲಿ ಸರ್ಕಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸುರಕ್ಷತಾ ಕಿಟ್‌ಗಳನ್ನು ವಿತರಿಸ ಲಾಗುತ್ತಿದೆ. ಕರ್ತವ್ಯದ ಸಮಯದಲ್ಲಿ ಇವುಗಳನ್ನು ಕಡ್ಡಾಯವಾಗಿ ಬಳಸಿ ಕೊಳ್ಳಬೇಕೆಂದರು.

    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಾರ್ಮಿಕರ ಸಂಕಷ್ಟಗಳನ್ನು ಶಾಸಕರ ಕುಟುಂಬದವರು ಅರಿತುಕೊಂಡಿ ದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರು ಯಾರೇ ಇರಲಿ ಅವರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದೆ ಎಂಬುದು ಮನಗಂಡಿದ್ದಾರೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಶಾಸಕರು ಈಡೇರಿಸಿದ್ದಾರೆ. ಸದಾ ಕಾಲ ಕಾರ್ಮಿಕರ ಹಿತಕಾಪಾಡಲು ಬದ್ಧರಾಗಿದ್ದಾರೆ ಎಂದರು.   

    ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್. ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಮತ್ತಿತತರರು ಮಾತನಾಡಿದರು.

    ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ವಿ.ವಿನೋದ್, ಪರಮೇಶ್, ಮಧು, ಚಂದ್ರಶೇಖರ್, ನಾರಾಯಣಸ್ವಾಮಿ, ಯಲ್ಲಪ್ಪ, ಮನೋಹರ್, ಇಳಯರಾಜ, ರಾಧಾಕೃಷ್ಣ, ಸಂಜೀವ ಕುಮಾರ್, ಅರಳಿಹಳ್ಳಿ ಸುಧಾಕರ್, ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕುಮಾರ್, ಕಾರ್ಮಿಕ ನಿರೀಕ್ಷಕರಾದ ಬಿ.ಎಂ.ರಕ್ಷಿತ್, ಸುಪ್ರಿತಾ, ಸಚಿನ್ ಉಪಸ್ಥಿತರಿದ್ದರು.

     ಹೆಲ್ಮೆಟ್, ಕನ್ನಡಕ, ಉಸಿರಾಟದ ಮುಖವಾಡ (ರೆಸ್ಪಿರೇಟರಿ ಮಾಸ್ಕ್), ಕೈಗವಸು, ಪ್ರತಿಫಲನಕಾರಕ ಜಾಕೆಟ್, ಬೆಲ್ಟ್/ಹಾರ್ನೆಸ್, ಬೂಟ್, ಗಮ್‌ಬೂಟ್ ಸೇರಿದಂತೆ ಇನ್ನಿತರ ಸುರಕ್ಷತಾ ಸಲಕರಣೆ ಗಳನ್ನು ಕಿಟ್ ಒಳಗೊಂಡಿದೆ. ಒಟ್ಟು ತಾಲೂಕಿಗೆ ಸುಮಾರು 3 ಸಾವಿರ ಕಿಟ್‌ಗಳು ಮಂಜೂರಾಗಿದ್ದು, ಈ ಪೈಕಿ ಹೊಳೆಹೊನ್ನೂರು ಭಾಗದ ಸುಮಾರು 1 ಸಾವಿರ ಕಿಟ್‌ಗಳನ್ನು ಹೊರತುಪಡಿಸಿ ಉಳಿದ 2 ಸಾವಿರ ಕಿಟ್‌ಗಳನ್ನು ಆಯಾ ವೃತ್ತಿಗೆ ಸಂಬಂಧಿಸಿದ ನೋಂದಾಯಿತ ಕಾರ್ಮಿಕರಿಗೆ ವಿತರಿಸಲಾಯಿತು.

     ಕಾರ್ಮಿಕ ಮುಖಂಡರಾದ ಸುಂದರ್ ಬಾಬು ಕಾರ್ಯಕ್ರಮ ನಿರೂಪಿಸಿದರೆ, ಅಭಿಲಾಷ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು