ಜಾತಿಯತೆಯನ್ನು ತೊಳೆದು ಸ್ವತಂತ್ರಕ್ಕೆ ಅಡಿಪಾಯ ಹಾಕಿಕೊಟ್ಟವರು ಮಹಾತ್ಮ ಗಾಂಧೀಜಿ: ಸುಧಾಮಣಿ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಜಾತಿಯನ್ನು ತೊಳೆದು ಹಾಕಿ ತತ್ವ ಸಿದ್ಧಾಂತ ಗಳ ಮೂಲಕ ಸಮಾಜವನ್ನು ಉತ್ತಮ ರೀತಿಯಲ್ಲಿ ಸ್ವತಂತ್ರಕ್ಕೆ ಅಡಿಪಾಯವನ್ನು ಹಾಕಿ ಕೊಟ್ಟವರು ಮಹಾತ್ಮ ಗಾಂಧೀಜಿ ಯವರು ಎಂದು ಚುಂಚಾದ್ರಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಸುಧಾಮಣಿ ವೆಂಕಟೇಶ್ ಹೇಳಿದರು.

ಅವರು ಶುಕ್ರವಾರ ನಗರದ ಹಳೇಸಿದ್ದಾ ಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದಿಕೆಯು ಪ್ರತಿ ವರ್ಷವೂ ಮಕ್ಕಳ ಜೊತೆ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿ ಸುವ ಮೂಲಕ ಗಾಂಧೀ ಜಯಂತಿಯನ್ನು ಆಚರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಲಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 

ಎಸ್ ಡಿಎಂಸಿ ಸದಸ್ಯರಾದ ಶೇಖರ್ ಕಲ್ಲಳ್ಳಿ,ಶಾಲೆಯ ಮುಖ್ಯೋಪಾಧ್ಯಾ ಯನಿ ಸರಸ್ವತಿ, ಶಿಕ್ಷಕರು, ವೇದಿಕೆಯ ಸಹ ಕಾರ್ಯದರ್ಶಿ ಶೀಲಾ ರವಿ, ಖಜಾಂಚಿ ಭಾರತಿ ಕುಮಾರ್ ನಿರ್ದೇಶಕರಾದ ಕುಸುಮ, ಸುಧಾ, ಮಂಜುಳಾ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು