ಭದ್ರಾವತಿ-ಇಸ್ಪೀಟು ಅಡ್ಡೆ ಬಗ್ಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ

ವಿಜಯ ಸಂಘರ್ಷ ನ್ಯೂಸ್ 
ಭದ್ರಾವತಿ: ಅಕ್ರಮ ಇಸ್ಪೀಟು, ತೂರಾ ಬಿಲ್ಲೆ ಜುಗಾರಿ ಅಡ್ಡೆ ಮಾಹಿತಿ ನೀಡಿದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ ಎಂದು ಗೋಕುಲ ಕೃಷ್ಣ ಎಂಬುವವರು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕ್ಷೇತ್ರದ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಒಸಿ, ಇಸ್ಪೀಟು, ತೂರಾ ಬಿಲ್ಲೆ ಅಕ್ರಮದ ಬಗ್ಗೆ ಎಸ್ ಪಿ ಕಚೇರಿಗೆ ಮಾಹಿತಿ ನೀಡಿದ್ದ ಬೆನ್ನಲ್ಲಿ ಅವರ ಮೇಲೆ ಹಲ್ಲೆಯಾಗಿರುವುದಾಗಿ ತಿಳಿದುಬಂದಿದೆ.

ತಾಲ್ಲೂಕಿನ ಕೈ ಮರದ ಹತ್ತಿರ, ತಮ್ಮಡಿಹಳ್ಳಿ, ರಾಮಿನಕೊಪ್ಪ ಹೀಗೆ ಮೂರು ಕಡೆ ಕಾಡಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆ ಬಗ್ಗೆ ಎಂದು ಎಸ್ ಪಿ ಸ್ಕ್ವಾಡ್ ಗೆ ಲೊಕೇಶನ್ ಕೊಟ್ಟಿದ್ದರು. ಲೊಕೇಶನ್ ಹಾಕಿ ವಾಪಸ್ ಬರುವಾಗಲೇ ಫಾಲೋ ಮಾಡಿ ಅಟ್ಯಾಕ್ ಮಾಡಲಾಗಿದೆ. ಸ್ಪಾಟ್ ಗೆ ಹೋಗಿ ಲೊಕೇಶನ್ ಹಾಕಿ ಭದ್ರಾವತಿಗೆ ವಾಪಸ್ ಬರುತ್ತಿದ್ದಾಗ 4 ಜನ ಬೈಕ್ ನಲ್ಲಿ ಫಾಲೋ ಮಾಡಿ ಕಾರಿಗೆ ಅಡ್ಡ ಹಾಕಿ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಕಾರಿನ ರೈಟ್ ಸೈಡ್ ಗ್ಲಾಸ್ ಗೆ ದೊಣ್ಣೆಯಿಂದ ಹೊಡೆತದಿಂದ , ಹಿಂದಿನ ಗ್ಲಾಸ್ ಪುಡಿ, ಪುಡಿಯಾಗಿದೆ. ನಂತರ ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿ ರುವುದಾಗಿ ಹಾಗೂ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದಾರೆ.

 ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಕ್ಕೆ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿ ನ್ಯೂಟೌನ್ ಪೋಲಿಸ್ ಠಾಣೆಯ ವರೆಗೂ ಬೆನ್ನಟ್ಟಿದ ದುಷ್ಕರ್ಮಿಗಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಿಸಿಟಿವಿ ಫೂಟೇಜ್ ಇದ್ದರೂ Arms Act ಹಾಕದೆ ಸಾಮಾನ್ಯ ಕೇಸ್ ಹಾಕಿದ್ದಾರೆ ಎಂದು ಗೋಕುಲ ಕೃಷ್ಣ ಪೊಲೀಸರ ನಿರ್ಲಕ್ಷ್ಯ ಎಂದು ಆರೋಪ ಮಾಡಿದ್ದಾರೆ.

ಕಾಡಲ್ಲಿ ಜಿಂಕೆ ಹೊಡೆದು ಅಡ್ಡೆಯಲ್ಲಿ ಪಾರ್ಟಿ, ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 ಸುಲ್ತಾನ್ ಮಟ್ಟಿಯಿಂದ 2-3 ಕಿ.ಮೀ ದೂರದಲ್ಲಿ ನಡೆಯುವ ಈ ಅಡ್ಡೆಗೆ ಕಾಲೇಜು ಹುಡುಗರು, ಕೂಲಿ ಕಾರ್ಮಿಕರು ಹೋಗುತ್ತಿದ್ದಾರೆ ಇವರುಗಳು ಇದಕ್ಕೆ ಬಲಿಯಾಗುತ್ತಿರು ವುದಾಗಿ ಆರೋಪಿಸಿ ದ್ದಾರೆ.ಹಾಗೂ ಇಲ್ಲಿ ಕಾಯುವವರಿಗೆ ದಿನಕ್ಕೆ 1000 ರೂ, ಅಡ್ಡೆ ನಡೆಸುವವರಿಗೆ 1.5 ಲಕ್ಷ ಲಾಭ ಎಂದು ಆರೋಪಿಸಿದ್ದಾರೆ. ಇದೆಲ್ಲ ವಿಚಾರ ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಅಟ್ಯಾಕ್ ಆಗಿದೆ ಎಂದು ಗೋಕುಲ್ ಕೃಷ್ಣ ಆಕ್ರೋಶ ಹೊರಹಾಕಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು