ವಿಜಯ ಸಂಘರ್ಷ
ಶಿಕಾರಿಪುರ: ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಗೋಣಿ ಸಂದೀಪ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಕುಸ್ತಿ ಪಂದ್ಯಾವಳಿಗೆ ಗೌರವ ಅಧ್ಯಕ್ಷ ಹಾಗೂ ಜಿಲ್ಲಾ ಜೆಡಿಎಸ್ ಮುಖಂಡ ರಾದ ಶ್ರೀಕಾಂತ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕುಸ್ತಿ ಅಖಾಡದಲ್ಲಿ ಹೊರ ರಾಜ್ಯಗಳಿಂದ ಆಗಮಿಸಿರುವ ಕುಸ್ತಿ ಪಟುಗಳು ಯಾವುದೇ ಗೊಂದಲ ಮಾಡಿ ಕ್ಕೊಳ್ಳದೆ ಗೆಲುವು ಸೋಲು ಸಮಾನ ವಾಗಿ ಸ್ವೀಕರಿಸಿ ಎಂದರು.
ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ ಕುಸ್ತಿಯಲ್ಲಿ ಹೆಸರು ಮಾಡಿದ್ದ ಶಿಕಾರಿಪುರದಲ್ಲಿ ಇಂದು ಮಾರಿ ಹಬ್ಬದಲ್ಲಿ ಮಾತ್ರ ಕುಸ್ತಿ ಆಯೋಜಿಸಲಾಗುತಿತ್ತು ಆದರೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿದ ಗೋಣಿ ಸಂದೀಪ್ ಹಾಗೂ ಸಮಿತಿ ಸದಸ್ಯರು ಸೇರಿ ಪ್ರತಿ ವರ್ಷ ಪುನೀತ್ ರಾಜಕುಮಾರ್ ರವರ ಸವಿನೆನಪಿನಲ್ಲಿ ಕುಸ್ತಿ ಆಯೋ ಜನೆ ಮಾಡುವ ಮೂಲಕ ಗ್ರಾಮೀಣ ದೇಶೀ ಕ್ರೀಡೆಗಳಿಗೆ ಉತ್ತೇಜನ ನೀಡಿ ಯುವ ಸಮೂಹ ಸದೃಢರಾಗ ಬೇಕೆಂದು ಆಯೋಜಕರಿಗೂ ಕುಸ್ತಿ ಪಟುಗಳಿಗೂ ಶುಭ ಹಾರೈಸಿದರು.
ಕುಸ್ತಿ ಸಮಿತಿ ಅಧ್ಯಕ್ಷ ಗೋಣಿ ಸಂದೀಪ್ ಮಾತನಾಡಿ ಈ ಬಾರಿಯ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಯಲ್ಲಿ ಮೊದಲ ಬಹುಮಾನ ವಿಜೇತ ಹರಿಯಾಣ ಕುಸ್ತಿ ಪಟು ರೋಹಿತ್ ಚೌದ್ರಿ ರವರಿಗೆ 1 ಲಕ್ಷ ನಗದು ಬೆಳ್ಳಿಗದೆ ಹಾಗೂ ಆಕರ್ಷಕ ಟ್ರೋಪಿ, ಎರಡನೇ ಬಹುಮಾನ ಕೊಲ್ಲಾಪುರದ ಕುಸ್ತಿ ಪಟು ಉಮೇಶ್ ಚೌಹಾನ್ ಗೆ 80 ಸಾವಿರ ನಗದು ವೀರ ಕೇಸರಿ ಗೌರವ ಹಾಗೂ ಆಕರ್ಷಕ ಟ್ರೋಫಿ, ಮೂರನೇ ಬಹುಮಾನ ಸ್ಥಳೀಯ ಶಿಕಾರಿಪುರದ ಸುಹಾಸ್ ಗೆ 60 ಸಾವಿರ ಬಹುಮಾನ ಬೆಳ್ಳಿಗದೆ ಆಕರ್ಷಕ ಟ್ರೋಫಿ ಮತ್ತು ಉಳಿದ ಕುಸ್ತಿ ಪಟುಗಳಿಗೂ ನಗದು ಬಹುಮಾನ ಟ್ರೋಫಿ ನೀಡಿ ಗೌರವಿಸಲಾಗಿದೆ ಹಾಗೂ ರಾಜ ಮಹಾರಾಜರ ಕಾಲದಿಂದಲೂ ಕುಸ್ತಿ ಕಾಳಗ ಜಟ್ಟಿ ಕಾಳಗ ನಡೆಸಿ ಹಳ್ಳಿ ಹಳ್ಳಿ ಗಳಲ್ಲಿ ಪೈಲ್ವಾನ್ ಗಳನ್ನು ತಯಾರು ಮಾಡಲು ಗರಡಿ ಮನೆಗಳು ಇರುತ್ತಿದ್ದವು, ಆದರೆ ಇಂದು ಗರಡಿ ಮನೆಗಳು ಕುಸ್ತಿ ಕ್ರೀಡೆಗಳು ನಶಿಸುತ್ತಿದ್ದು ದುರಂತ, ಯುವಕರು ಸದೃಢ ರಾಗಲು ದೇಶೀ ಕ್ರೀಡೆ ಸಂಸ್ಕೃತಿ ಉಳಿಯಲು ಗರಡಿ ಮನೆಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸರ್ಕಾರ ಅನುದಾನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿ ಈ ಕ್ರೀಡೆ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲಾ ಮುಖಂಡರಿಗೂ ಕ್ರೀಡಾ ಅಭಿಮಾನಿಗಳಿಗೂ ಅಭಿನಂದನೆಗಳು ತಿಳಿಸಿದರು.
ವೇದಿಕೆಯಲ್ಲಿ ವೀರಶೈವ ಸಮಾಜದ ಅಧ್ಯಕ್ಷ ವೀರೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ , ಗೋಣಿ ಪ್ರಕಾಶ್, ಮುಖಂಡರಾದ ಬಂಡಾರಿ ಮಾಲತೇಶ್, ರೋಷನ್ ಸೇರಿದಂತೆ ಕಮಿಟಿಯ ಬಡಗಿ ಪ್ರದೀಪ್, ಬೆಣ್ಣೆ ಜಗದೀಶ್, ನವೀನ್ ಶೆಟ್ಟಿ, ಪ್ರಕಾಶ್, ನಗರದ ಮಾಲತೇಶ್, ಸಂದೀಮನೆ ರೇವಣ್ಣ ಸೇರಿದಂತೆ ಹಲವರಿದ್ದರು.
(ವರದಿ ಹುಲಿಗಿ ಕೃಷ್ಣ )
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795