ವಿಜಯ ಸಂಘರ್ಷ
ಹೊಸನಗರ: ಪಶುವೈದ್ಯ ಸಿಬ್ಬಂದಿ ಗಳ ಕಾರ್ಯವೈಖರಿ ಖಂಡಿಸಿ ರೈತನೋರ್ವನಿಂದ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಘಟನೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ನಡೆದಿದೆ.
ಸತ್ತ ಕುರಿಯನ್ನು ಆಸ್ಪತ್ರೆ ಕಟ್ಟಡದ ತೊಲೆಗೆ ಕಟ್ಟಿ ತಾಲೂಕಿನ ಮತ್ತೂರಿನ ರೈತ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾನೆ. ತಾನು ಸಾಕಿದ್ದ ಮೂರು ಕುರಿಗಳು ಅನಾರೋಗ್ಯ ಪೀಡಿತವಾದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಫೋನ್ ಮೂಲಕ ಆಸ್ಪತ್ರೆ ಸಂಪರ್ಕಿಸಿದ್ದಾನೆ. ಹೊಟ್ಟೆ ಉಬ್ಬರಿಸಿ ಒಂದು ಕುರಿ ಸಾವು ಕಂಡ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರೈತ ತಂದಿ ದ್ದಾನೆ. ಆದರೆ ಅಷ್ಟರೊಳಗೆ ಪಶುವೈದ್ಯ ಸಿಬ್ಬಂದಿಗಳು ಆಸ್ಪತ್ರೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ.
ಮಧ್ಯಾಹ್ನ 3:30ಕ್ಕೆ ಪಶುವೈದ್ಯ ಆಸ್ಪತ್ರೆಗೆ ಬಂದಿದ್ದ ಕುರಿ ಮಾಲೀಕ ಮರಣೋತ್ತರ ಪರೀಕ್ಷೆ ಕೈಕೊಟ್ಟ ಆಸ್ಪತ್ರೆ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕಿ ಕುರಿಯ ಮೃತದೇಹವನ್ನು ಆಸ್ಪತ್ರೆ ಕಟ್ಟಡದ ತೊಲೆಗೆ ಕಟ್ಟಿ ಜನಪ್ರತಿ ನಿಧಿಗಳು, ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದ್ದಾನೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795