ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಮದ್ಯ ಬಾಗದ ವಾರ್ಡ್ ನಂಬರ್ 16 ರಲ್ಲಿ ಸುರುಭಿ ಭವನದ ಮುಂಭಾಗ ಹಾಲಪ್ಪ ಬಿಲ್ಡಿಂಗ್ ನ ಮಳಿಗೆ ಯಲ್ಲಿ ಹಲವು ವರ್ಷಗಳಿಂದ ಯಾವುದೇ ಪರವಾನಿಗಿ ಇಲ್ಲದ , ಎಫ್ಎಸ್ಐಎಎಸ್ ನ ಪರವಾನಿಗಿ ಇರದ ಶುದ್ದಿಕರಿಸಿದ ನೀರು ಎಂದು ಹೇಳಿಕೊಂಡು ಕಾನೂನು ಬಾಹಿರ ವಾಗಿ ಪುರಸಭಾ ಪರವಾನಿಗೆ ಇಲ್ಲದೇ ಎನ್ ಎ ಬಿ ಎಲ್ ನಿಂದ ನೀರಿನ ಪರೀಕ್ಷೆ ನಡೆಸದೇ ಬೋರ್ ನೀರನ್ನು ಶುದ್ಧ ನೀರು ಎಂದು ನೀರು ಮಾರಾಟ ಮಾಡುತ್ತಿದ್ದ ರಾಜು ಎಂಬುವ ವನಿಗೆ ಸೇರಿದ್ದು ಎನ್ನಲಾದ ನೀರಿನ ಶುದ್ಧ ಘಟಕದ ಬಗ್ಗೆ ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಪುರಸಭೆಯ ಮುಖ್ಯಧಿಕಾರಿಗಳಿಗೆ ದೂರು ಅರ್ಜಿ ನೀಡಿದ ತಕ್ಷಣ ಕಾರ್ಯಪ್ರವ್ರತರಾಗಿ ಮುಖ್ಯಾಧಿಕಾರಿ ಭರತ್ ಆರೋಗ್ಯ ನಿರೀಕ್ಷಕ ಪ್ರವೀಣ್ ಹಾಗೂ ನವಾಜ್ ರವರಲ್ಲಿ ಈ ಬಗ್ಗೆ ಕ್ರಮ ವಹಿಸದ ಬಗ್ಗೆ ಹಾಗೂ ಪುರಸಭೆ ಪರವಾನಿಗೆ ಪಡೆಯದಿರದ ಬಗ್ಗೆ ಹಾಗೂ ಎಷ್ಟು ಬಾರಿ ಅನ ಧಿಕೃತ ವಾಗಿ ನೀರಿನ ಘಟಕ ನಡೆಸ ದಂತೆ ತಿಳಿಸಿ ಹೇಳಿದರೂ ಕೂಡ ಯಾವುದೇ ಪರವಾನಿಗೆ ಪಡೆಯದೇ ರಾಜ ರೋಷವಾಗಿ ದಂದೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಭರತ್ ರವರು ತಕ್ಷಣ ಆರೋಗ್ಯ ನೀರಿಕ್ಷಕ ರೊಂದಿಗೆ ಅನ ಧಿಕೃತ ನೀರಿನ ಘಟಕದ ಬಳಿ ಖುದ್ದಾಗಿ ಆಗಮಿಸಿ ಬಂದ್ ಮಾಡಿಸಿರುತ್ತಾರೆ.
ಆದರೆ ಹಣ ಬಲ ರಾಜಕೀಯ ಬಲ ದಿಂದ ಯಾವುದೇ ಲೈಸನ್ಸ್ ಇಲ್ಲದೇ ಪುನಃ ನೀರಿನ ಘಟಕದ ಅಂಗಡಿ ಯನ್ನು ಮಾರನೇ ದಿನವೇ ಓಪನ್ ಮಾಡಿದ್ದು ಸ್ಥಳೀಯ ಆಡಳಿತಕ್ಕೆ ತಲೆ ನೋವಾಗಿ ಪರಿಣಾಮಿಸಿದ್ದಾನೆ.
ಮುಖ್ಯಧಿಕಾರಿ ಭರತ್ ಯಾವುದೇ ಒತ್ತಡಕ್ಕೂ ಮಣಿಯದೆ ಈ ಸಂಬಂಧ ಕೂಡಲೇ ಪರವಾನಿಗೆ ಪಡೆಯುವಂತೆ ಜ:24 ರಂದು ನೀರಿನ ಘಟಕದ ಮಾಲೀಕ ರಾಜು ರವರಿಗೆ ಪುರಸಭೆ ವತಿಯಿಂದ ತಿಳುವಳಿಕೆ ನೋಟಿಸ್ ಜಾರಿ ಮಾಡಿ ಉದ್ದಿಮೆ ಪರವಾನಿಗೆ ಪಡೆದು ನೀರು ಮಾರಾಟ ಮಾಡು ವಂತೆ ಕಠಿಣ ವಾಗಿ ತಿಳುವಳಿಕೆ ನೀಡಿ ದ್ದಾರೆ ಮತ್ತು ಸಾಂಕ್ರಾಮಿಕ ರೋಗ ಹರಡಿದರೆ ನಿನ್ನನ್ನೇ ಜವಾ ಬ್ದಾರಿ ಆಗಿ ಮಾಡಲಾಗು ವುದು ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.
ಆದರೂ ಕೂಡ ಯಾವ ನೋಟೀಸ್ ಗಳಿಗೂ ತಲೆ ಕೆಡಿಸಿಕ್ಕೊಳದೆ ಪುನಃ ಅನಧಿಕೃತ ನೀರಿನ ಘಟಕ ತೆರೆದು 20 ಲೀಟರ್ ಬಾಟಲ್ ನೀರಿಗೆ 50 ರೂ 20 ರೂ 80 ರೂ ಹಣ ಪಡಿಯುತ್ತಿ ದ್ದೂ ಸಾರ್ವಜನಿಕರು ವಿಧಿ ಇಲ್ಲದೇ ಅನಧಿಕೃತ ಎಂದು ಗೊತ್ತಿಲ್ಲದ ಮುಗ್ದ ಜನತೆ ನೀರು ಖರೀದಿ ಮಾಡಿ ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ಇಡಿ ಶಾಪ ಹಾಕುತ್ತಿದ್ದಾರೆ.
ಶುದ್ಧ ನೀರಿನ ಘಟಕ ತೆರಿದಿರುವ ರಾಜು ಹಿನ್ನೆಲೆ :
ಈ ಹಿಂದೆ ಯಡಿಯೂರಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆಗಾಗಿ ಜಯ ಕರ್ನಾಟಕ ಜನಪರ ವೇದಿಕೆ ವತಿ ಯಿಂದ ಪ್ರತಿಭಟನೆ ನಡೆಸ ಲಾಗಿತ್ತು ಆಗ ಸಂಸದರಾದ ಬಿ.ವೈ. ರಾಘ ವೇಂದ್ರ ರವರು ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ್ದರು. ಈ ಘಟಕವನ್ನು ಇದೇ ರಾಜು ಯಾವು ದೇ ಶುದ್ದಿಕರಿಸದೇ ಬೋರ್ ನೀರನ್ನು ಅನಾಧಿಕೃತವಾಗಿ ವಿದ್ಯುತ್ ಪಡೆದು ಗಲೀಜು ನೀರು ಮಾರಾಟ ಮಾಡು ತ್ತಿದ್ದ ಈತನನ್ನು ಸ್ಥಳೀಯ ಬಸ್ ನಿಲ್ದಾಣದ ಮಳಿಗೆಯ ಮಾಲೀಕರು, ಬಸ್ ಏಜೇಂಟರು , ಸ್ಥಳೀಯರು ಖಾಲಿ ಮಾಡಿಸಿ ಘಟಕ ಬಂದ್ ಮಾಡಿಸಿದ್ದರು.
ನಂತರ ಈತ ಭದ್ರಾಪುರ ಹಾಲಪ್ಪ ರವರಿಗೆ ಸೇರಿದ್ದು ಎನ್ನಲಾದ ಮಳಿಗೆ ಯಲ್ಲಿ ಹಲವು ವರ್ಷಗಳಿಂದ ನೀರಿನ ಘಟಕವನ್ನು ಯಾವುದೇ ಪರವಾನಿಗೆ ಪಡೆಯದೇ ಪುನಃ ಕಾನೂನು ಬಾಹಿರ ವಾಗಿ ಆರಂಭಿಸಿದನು. ಹಾಗೂ ಕಾನೂ ನು ಬಾಹಿರವಾಗಿ ಟಾಟಾ ಎಸಿ ಯಲ್ಲಿ ನಗರ ಹಳ್ಳಿ ಹಳ್ಳಿಗಳಲ್ಲಿ ನೀರು ಮಾರಾಟದ ದಂದೆ ಪ್ರಾರಂಭ ಮಾಡಿದ್ದನು. ಸಾರ್ವಜನಿಕರು ನೀರಿನ ಶುದ್ಧತೆ ಬಗ್ಗೆ ಆರೋಗ್ಯ ಇಲಾಖೆಗೆ 2018 ರಲ್ಲಿ ಮೌಕಿಕ ದೂರು ನೀಡಿದ್ದರು.
ಶಿಕಾರಿಪುರ ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾ ಅಧಿಕಾರಿಗಳಾದ ಗುರು ರವರು ಅನೇಕ ಬಾರಿ ಕಾನೂನು ರೀತಿಯಲ್ಲಿ ಶುದ್ದಿ ಕರಿಸಿ ನೀರು ಸರಬರಾಜು ಮಾಡುವ ಬಗ್ಗೆ ಪರವಾನಿಗೆ ಬಗ್ಗೆ ಮಾಹಿತಿ ಕೇಳಿದ್ದು ದಿನಾಂಕ 04 -06 2019 ರಲ್ಲಿ ನೀರು ಶುದ್ದಿಕರಿಸದೇ ಪರವಾನಿಗೆ ಇರದ ಬಗ್ಗೆ ಪರಿಶೀಲಿಸಿ ಐ ಎಸ್ ಐ /ಬಿ ಐ ಎಸ್ ಇರುವುದಿಲ್ಲ, ಎಫ್ ಎಸ್ ಎ ಐ ಪರವಾನಿಗೆ ಪಡೆದಿಲ್ಲ , ಪುರಸಭೆ ಪರ ವಾನಿಗೆ ಕೂಡ ಪಡೆಯದೇ ಇರುವ ಬಗ್ಗೆ ನೋಟೀಸ್ ನೀಡಿರುತ್ತಾರೆ.
ಆದರೆ ತನ್ನ ಹಣ ರಾಜಕೀಯ ಪ್ರಭಾವದಿಂದ ಅಕ್ರಮದಂದೆ ಮುಂದುವರಿಸಿದಾಗ ಪುನಃ ಸಾರ್ವಜ ನಿಕರ ದೂರಿನ ಮೇರೆಗೆ ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾ ಅಧಿಕಾರಿ ಗುರು ರವರು ದಿನಾಂಕ 22 -04 2020 ರಲ್ಲಿ ನೀರಿನ ಶುದ್ದಿಕರಿ ಸದೇ ಮಾರಾಟ ಮಾಡು ತ್ತಿರುವ ಬಗ್ಗೆ ನೋಟೀಸ್ ಜಾರಿ ಮಾಡಿರು ತ್ತಾರೆ. ಆರೋಗ್ಯ ಇಲಾಖೆಯ ಆಹಾರ ಸಂರಕ್ಷಣಾ ಅಧಿಕಾರಿಗಳಿಗೂ, ಪುರಸಭೆಯ ಆರೋಗ್ಯ ನಿರೀಕ್ಷಿಕರಿಗೂ ಯಾವುದೇ ಉತ್ತರ ಕೊಡದೇ ಲೈಸನ್ಸ್ ಪಡೆಯದೇ ಇದ್ದ ಬಗ್ಗೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯ ಪದಾಧಿಕಾರಿಗಳಾದ ಹುಲಿಗಿಕೃಷ್ಣ,ಸುರೇಶ್,ಇಮ್ರಾನ್, ಯೋಗೀಶ್, ಮಂಜುನಾಥ್ ಆರ್ ಪಿ, ಮುಖ್ಯಧಿಕಾರಿಗಳಿಗೆ , ಆರೋಗ್ಯ ನಿರೀಕ್ಷಿಕರಿಗೆ ದೂರು ನೀಡಿದ್ದು ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕೆಗೆ ನೋಟೀಸ್ ಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯಧಿಕಾರಿಗಳು ಕ್ರಮ ಜರುಗಿಸಿ ಸಾರ್ವಜನಿಕರಿಗೆ ರೋಗ ರೂಜಿನಗಳು ಹರಡದಂತೆ ಕ್ರಮ ಜರುಗಿಸುವ ವಿಶ್ವಾಸ ಸಂಘಟನೆ ಹೊಂದಿದೆ ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
(ವರದಿ ಹುಲಿಗಿ ಕೃಷ್ಣ)
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795