ಮೃತ ಕುಟುಂಬಸ್ಥರಿಂದ ಮೆಸ್ಕಾಂ ಇಲಾಖೆಯ ಮುಂಭಾಗ ಪ್ರತಿಭಟನೆ

 ವಿಜಯ ಸಂಘರ್ಷ



ಶಿಕಾರಿಪುರ : ತಾಲ್ಲೂಕಿನ ಕಾಳೆನಹಳ್ಳಿ ಬಳಿ ಮೇಲಾಧಿಕಾರಿಗಳಿಂದ ಅನು ಮತಿ ಪಡೆದು ವಿದ್ಯುತ್ ಟ್ರಾನ್ಸಫಾ ರ್ಮೆರ್ ಮೇಲೆ ಕಾರ್ಯನಿರ್ವಹಿಸು ತ್ತಿದ್ದ ಶ್ರೀಶೈಲ್ ಗೆ ವಿದ್ಯುತ್ ಶಾರ್ಟ್ ವಿದ್ಯುತ್ ಕಂಬದ ಮೇಲೆಯೇ ಸಾವಿಗೀಡಾಗಿದ್ದರು. ಇವರ ಕುಟುಂಬ ಕ್ಕೆ ತಪ್ಪಿತಸ್ಥ ಅಭಿಯಂತರ ಪ್ರಮೋದ್ ಹಾಗೂ ಇಲಾಖೆ ವತಿಯಿಂದ ಪರಿಹಾ ರ ನೀಡಲು ಆಗ್ರಹಿಸಿ ಭಾನುವಾರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಮುಖಂಡ ರಾಘವೇಂದ್ರ ನಾಯ್ಕ್ ನೇತೃತ್ವದಲ್ಲಿ ರೈತರು ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು.


ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್, ಡಿ ವೈ ಎಸ್ ಪಿ ಶಿವಾನಂದ ಭೇಟಿ ನೀಡಿ ಮೆಸ್ಕಾಂ ಅಧಿಕಾರಿಗ ಳೊಂದಿಗೆ ಮಾತುಕತೆ ನಡೆಸಿ 5 ಲಕ್ಷ ಪರಿಹಾರ ಕೊಡಿಸುವ ಮೂಲಕ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಸಂಧರ್ಭದಲ್ಲಿ ಗ್ರಾಮಪಂಚಾ ಯತ್ ಅಧ್ಯಕ್ಷೆ ಗಂಗಮ್ಮ, ಡಿ ಎಸ್ ಎಸ್ ಸಂಘಟನೆಯ ಜಗದೀಶ್ ಚುರ್ಚಿಗುಂಡಿ, ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್, ಜಯಕರ್ನಾಟಕ ಜನಪರ ವೇದಿಕೆಯ ಇಮ್ರಾನ್ ಖಾನ್, ಮಂಜುನಾಥ್, ಮೃತ ಕುಟುಂಬದ ಸದಸ್ಯರಾದ ರಮೇಶ್, ಶಿವಲಿಂಗಪ್ಪ , ಪ್ರಕಾಶ್, ಕಪ್ಪನಹಳ್ಳಿ , ಲೈನ್ ಮ್ಯಾನ್ ಗಳು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

(ವರದಿ ಹುಲಗಿ ಕೃಷ್ಣ )

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು