ಫೆ: 28 ರಿಂದ ಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರಾ ಮಹೋತ್ಸವ

 ವಿಜಯ ಸಂಘರ್ಷ



ಪ್ರತಿ ವರ್ಷಗಳಿಗೊಮ್ಮೆ ತಾಲ್ಲೂಕಿನ ಅನಂದಪುರದ ಸುತ್ತ ಮುತ್ತಲಿನ 18 ಕ್ಕೂ ಹೆಚ್ಚು ಗ್ರಾಮಗಳ ಗ್ರಾಮದೇವತೆಯಾದ ಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರಾಮಹೋತ್ಸವ ಸಡಗರ ಗ್ರಾಮಸ್ಥರಲ್ಲಿ ಮನೆಮಾಡಿದೆ.

ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಮಾರಿಕಾಂಬಾ ಮಹೋತ್ಸವ ನಿಗದಿತ ದಿನಕ್ಕಿಂತ ಮುಂಚೆಯೇ ಪರಿ ಸಮಾಪ್ತಿ ಯಾಗಿ ತ್ತು. ಈ ಬಾರಿ ನಿರಾತಂಕವಾಗಿ ಫೆ: 28 ರಿಂದ ಮಾರ್ಚ್ 6 ರ ವರೆಗೆ 7 ದಿನ ಗಳ ಕಾಲ ವೈಭವದ ಜಾತ್ರೆ ನಡೆಯಲಿದೆ.

28ರಂದು ಸಂಜೆ ಶ್ರೀಮಾರಿಕಾಂಬೆಯ ತವರುಮನೆಯಲ್ಲಿ ಗೋಧೂಳಿ ಲಗ್ನದಲ್ಲಿ ದೇವಿಯ ಉತ್ಸವಮೂರ್ತಿ ಸ್ಥಾಪನೆ, ಪ್ರಾಣಪ್ರತಿಷ್ಠೆ, ನೇತ್ರೋನ್ಮಿ ಲನ, ವೀಳ್ಯ ಶಾಸ್ತ್ರ, ಉಡಿಶಾಸ್ತ ಕಂಕಣಶಾಸ್ತ ಮತ್ತು ಮಾಂಗಲ್ಯ ಧಾರಣೆ ಮಹಾಪೂಜೆ ರಾತ್ರಿ 10 ರಿಂದ ಉತ್ಸವ ಮೂರ್ತಿಯ ರಾಜಬೀದಿ ಉತ್ಸವ ಆರಂಭವಾಗಲಿದೆ.

ಮಾ1ರ ಬೆಳಗಿನ ಜಾವ ಇಲ್ಲಿನ ಹಳೆ ಸಂತೆ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀಮಾರಿಕಾಂಬಾ ದೇವಾಲಯದ ಆವರಣಕ್ಕೆ ಉತ್ಸವ ಮೂರ್ತಿಯ ಪ್ರವೇಶ ಮಂಟಪದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ, ನೈವೇದ್ಯ, ಮಹಾ ಪೂಜೆ, ವಿವಿಧ ಬಗೆಯ ಹರಕೆ ಸೇವೆಗಳು ನಡೆಯಲಿದೆ. 

ಮಾ.1ರ ಬುಧವಾರ ಸಂಜೆ 7ರಿಂದ ಸಾಂಸ್ಕöತಿಕ ಸೌರಭ ಉದ್ಘಾಟನೆ ಯನ್ನು ಡಾ.ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿ ಗಳವರ ಸಾನಿಧ್ಯದಲ್ಲಿ ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಲಿದ್ದು ಜಾತ್ರಾ ಸಮಿತಿಯ ಅಧ್ಯಕ್ಷ ಬಸವ ರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿವೈ ರಾಘವೇಂದ್ರ ಇನ್ನಿತರರು ಉಪಸ್ಥಿತರಿರಲಿದ್ದಾರೆ.

ಸಾಂಸ್ಕöತಿಕ ಕಾರ್ಯಕ್ರಮಗಳು: ಪ್ರತಿದಿನ ಸಂಜೆ 6.30 ರಿಂದ 7ರವರೆಗೆ ವಿವಿಧ ಭಜನಾಮಂಡಳಿಯವರಿದ ಭಜನಾ ಕಾರ್ಯಕ್ರಮ, ಮಾರ್ಚ್ 1 ರ ಬುಧವಾರ ರಾತ್ರಿ ಚಂದ್ರಾವಳಿ ವಿಲಾ ಸ, ಅಭಿಮನ್ಯು, ಮೀನಾಕ್ಷಿಕಲ್ಯಾಣ ಯಕ್ಷಗಾನಪ್ರಸಂಗ, ಗುರುವಾರ ರಾತ್ರಿ9 ರಿಂದ ಸ್ವರಸಂಗಮ, ಶುಕ್ರವಾರ ಕಂಸಾಳೆ, ಭರತನಾಟ್ಯ, ಅಂತಾರಾಷ್ಟಿಯ ಖ್ಯಾತಿಯ ಅರುಣೋದಯ ಕಲಾತಂಡದಿಂದ ಜೋಗುತಿನೃತ್ಯ, ಶನಿವಾರ ಸಂಜೆ7 ರಿಂದ ಯೋಗಪ್ರದರ್ಶನ, ಕುಣಿತಭಜನೆ, ಜಾನಪದಗೀತೆಗಳು, ಸುಗ್ಗಿಕುಣಿತ. ಶನಿವಾರ ಸಂಜೆ 7.30 ರಿಂದ ಭರತನಾಟ್ಯ, ಲೈವ್ ಆರ್ಕೇಸ್ಟಾ ಭಾನುವಾರ ಸಂಜೆ ವೆಸ್ಟನ್‌ಡ್ಯಾನ್ಸ್, 8.30 ರಿಂದ ಗುಬ್ಬಿ ನಾಟಕ ಕಂಪೆನಿಯಿಂದ ರೈತಮನೆತನ ನಾಟಕ ಪ್ರದರ್ಶನ ಸೇರಿದಂತೆ ಪ್ರತಿನಿತ್ಯ ವಿಶೇಷ ಸಾಂಸ್ಕöತಿಕ ಕಾರ್ಯಕ್ರಮ ಗಳು, ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಕಡ್ಲೆಹಂಕ್ಲುಮಾರಿಕಾಬಾದೇವಿಪೂಜಾ ವಿಧಿ ವಿಧಾನ, ಸಾಂಸ್ಕöತಿಕ ಕಾರ್ಯಕ್ರ ಮಗಳು ಯಶಸ್ವಿಯಾಗಿ ನೆರವೇರಲು ಹಾಗೂ ಸ್ವಚ್ಛತೆ ನೈರ್ಮಲ್ಯತೆಗೆ ಪ್ರಾಧಾ ನ್ಯತೆ ನೀಡಿದ್ದು ಮೂಲಭೂತ ಸೌಕ ರ್ಯಕಲ್ಪಿಸಲು ಗ್ರಾಮಸ್ಥರ ಸಹಕಾರ ದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಸಹಸ್ರಾರು ಸಂಖ್ಯೆ ಯಲ್ಲಿ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದು ಎಲ್ಲರಿಗೂ ದೇವಿ ದರ್ಶನಕ್ಕೆ ಸೌಕರ್ಯ ಕಲ್ಪಿಸಲಾ ಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.


(ವರದಿ ಚಂದ್ರಶೇಖರ್ ಎಸ್ ಡಿ, ಆನಂದಪುರ)

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು