ವಿಜಯ ಸಂಘರ್ಷ
ಭದ್ರಾವತಿ: ಅಕ್ರಮ ಗೋಮಾಂಸ ಸಾಗಾಟ ವಿಚಾರ ರಾಜಕೀಯ ಬಣ್ಣಪಡೆದುಕೊಂಡು ಪರ ಮತ್ತು ವಿರುದ್ಧದ ಪ್ರಕರಣಗಳು ದಾಖಲಾ ಗಿದೆ. ಅಕ್ರಮ ಗೋಸಾಗಾಟ ನಡೆಸುತ್ತಿದ್ದವನ ವಿರುದ್ಧ ದೂರು ದಾಖಲಾದರೆ ಹಿಂದೂ ಸಂಘಟನೆ ಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ವ್ಯಕ್ತಿ ಪ್ರತಿದೂರನ್ನ ದಾಖಲಿಸಿದ್ದಾನೆ.
ಹಲ್ಲೆಗೊಳಗಾದ ವ್ಯಕ್ತಿಯನ್ನ ಶಾಸಕ ಬಿ.ಕೆ.ಸಂಗಮೇಶ್ ಮಧ್ಯಪ್ರವೇಶಿಸಿ ಬಿಡಿಸಿಕೊಂಡು ಬಂದಿದ್ದರಿಂದ ಅಕ್ರಮ ಗೋಮಾಂಸ ಮಾರಾಟಕ್ಕೆ ಶಾಸಕರ ಬೆಂಬಲ ದೊರೆತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಅನ್ವರ್ ಕಾಲೋನಿಯಿಂದ ಮೊಪೆಡ್ ನಲ್ಲಿ ಬ್ಯಾಗ್ ನಲ್ಲಿ ಅಕ್ರಮ ಗೋಮಾಂ ಸ ಕವರ್ ನಲ್ಲಿ ಕಟ್ಟಿಕೊಂಡು ಬರುತ್ತಿದ್ದ ವೇಳೆ ಹಿಂದೂ ಸಂಘಟನೆಯ ಯುವ ಕರು ಆತನನ್ನ ತಡೆಯಲು ಮುಂದಾಗಿ ದ್ದಾರೆ. ಆದರೆ ಯುವಕ ವಾಹನ ನಿಲ್ಲಿ ಸದೆ ಅಡ್ಡಹಾಕಲು ಬಂದ ಯುವ ಕರ ಮೇಲೆ ವಾಹನ ಚಲಾಯಿಸಲುಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಯುವಕನಿಗೆ ತಡೆದ ಸಂಘಟನೆ ಕಾರ್ಯಕರ್ತರ ನಡುವೆ ಗಲಾಟೆ ಆಗಿವೆ. ತಕ್ಷಣ ಪೊಲೀಸರಿಗೆ ಕರೆ ಮಾಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಠಾಣೆಗೆ ಕರೆದೊಯ್ದಿ ದ್ದಾರೆ. ವಿಷಯ ತಿಳಿದ ಶಾಸಕ ಬಿ.ಕೆ.ಸಂಗಮೇಶ್ ಪೊಲೀಸ್ ಠಾಣೆಗೆ ಬಂದು ಹಲ್ಲೆ ನಡೆಸಿದ ಹಿಂದೂ ಸಂಘಟನೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಅಕ್ರಮ ಗೋ ಮಾಂಸ ಸಾಗಾಣಿಕೆ ಪ್ರಕರಣ ರಾಜಕೀಯ ಬಣ್ಣಪಡೆದು ಕೊಂಡ ಕಾರಣ ದೂರು ಪ್ರತಿದೂರು ದಾಖಲಾಗಿದೆ. ಹಳೇ ನಗರ ಪೊಲೀಸ್ ದೂರು ಸ್ವೀಕರಿಸಿದ್ದು ಈ ಪ್ರಕರಣವನ್ನ ಹೇಗೆ ನಿಭಾಯಿಸ್ತಾರೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795