ಸಂತ ಸೇವಾಲಾಲ್ ರವರ ಹೆಸರು ಇತಿಹಾಸ ಪುಟದಲ್ಲಿ ದಾಖಲಾಗಬೇಕು

 ವಿಜಯ ಸಂಘರ್ಷ



ಶಿಕಾರಿಪುರ : ಶಿಕ್ಷಣ ಕ್ರಾಂತಿ ಧಾರ್ಮಿಕ ಕ್ರಾಂತಿಯ ಹರಿಕಾರರಾದ ಪವಾಡ ಪುರುಷ ಸಂತ ಸೇವಾಲಾಲ ರವರ 184ನೇ ಜಯಂತೋತ್ಸವಕ್ಕೆ ರಾಜ್ಯ ಹಾಗೂ ದೇಶದ ನಾನಾ ಮೂಲೆ ಗಳಿಂದ ಭಕ್ತರು ದಾವಣಗೆರೆ ಜಿಲ್ಲೆಯ ಸುರಗೊಂಡನ ಕೊಪ್ಪದ ಜನ್ಮಸ್ಥಳಕ್ಕೆ ಆಗಮಿಸಿ ದರ್ಶನ ಪಡೆದು ಪುನೀತ ರಾಗಿದ್ದಾರೆ ಎಂದು ಬಂಜಾರ ಸಮಾಜ ದ ಮುಖಂಡ ರಾಘವೇಂದ್ರ ನಾಯ್ಕ ಹೇಳಿದ್ದಾರೆ.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನಕದಾಸರು, ಕಬೀರ ದಾಸ ರು ರಾಮಕೃಷ್ಣ ಪರಮಹಂಸರ ಸಾಲಿ ನಲ್ಲಿ ನಿಲ್ಲುವಂತಹ ಮಹಾನ್ ದೈವ ಸಂಬೂತರು ಪವಾಡ ಪುರುಷ ರು ಹಾಗೂ ಸಮುದಾ ಯವನ್ನು ಒಟ್ಟು ಗೂಡಿಸಿ ಶಿಕ್ಷಣ ಕ್ರಾಂತಿ ಯೊಂದಿಗೆ ಸಮುದಾಯದ ಉನ್ನತಿಗೆ ಕಾರಣ ಕರ್ತರಾದ ದೈವ ಪುರುಷರ ಬಗ್ಗೆ ಇತಿಹಾಸ ಪುಟಗಳಲ್ಲಿ ದಾಖಲಾಗದೆ ಇರುವುದು ವಿಪರ್ಯಾಸ, ಇವರ ಭಕ್ತಿ ಸೇವೆ ಸಮಾಜ ಸೇವೆ ದಾರ್ಶನಿಕ ಸೇವೆಯ ಭಕ್ತಿ ಮಾರ್ಗ ಶಿಕ್ಷಣ ಮಾರ್ಗ ತೋರಿಸಿಕೊಟ್ಟಂ ತಹ ಸೇವಾಲಾಲ್ ರವರ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶಿಕ್ಷಣ ಸಚಿವಾಲಯ ಎಲ್ಲಾ ಶಾಲಾ ಕಾಲೇಜು ಪಠ್ಯಪುಸ್ತಕ ಗಳಲ್ಲಿ ಪಠ್ಯವನ್ನು ಅಳವಡಿ ಸಬೇಕು, ಸಂತ ಸೇವಾಲಾಲರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸಮೀ ಪದ ಸುರಗೊಂಡನ ಕೊಪ್ಪದಲ್ಲಿ 1739 ಫೆಬ್ರವರಿ 15 ರಂದು ಭೀಮ ನಾಯ್ಕ್ ಭೀಮನಿ ದಂಪತಿಗಳಿಗೆ ಜನಿಸಿದರು.


ಹುಟ್ಟುವಾಗಲೇ ಪವಾಡಗಳಿಂದ ಹೆಸರು ಮಾಡಿದ್ದ, ಇವರು ಅಲೆಮಾರಿ ಯಾಗಿ ಶಿಕ್ಷಣ ವಿಲ್ಲದೇ ಇದ್ದ ಬಂಜಾರ್ ಸಮುದಾಯವನ್ನು ಒಗ್ಗೂಡಿಸಲು ಶಿಕ್ಷಣ ಕ್ರಾಂತಿಯನ್ನು ಕೈಗೊಂಡರು ತನ್ನ ಕುಟುಂಬದೊಂದಿಗೆ ತೋಳ ರಾಮ ಕುದುರೆಯನ್ನೇರಿ ಛಾಯಿಗಡ ಆಂಧ್ರದ ಗುತ್ತಿ, ಬಳ್ಳಾರಿ ಮಹಾರಾಷ್ಟ್ರ ದ ವಾಸಿಂ ಪ್ರದೇಶಗಳಲ್ಲಿ ಸಮಾಜ ಸುಧಾ ರಣೆಯ ಕೆಲಸವನ್ನು ಕೈಗೆತ್ತಿ ಕೊಂಡರು ಪರಾಗಾಡ್ ದೆಹಲಿಯ ಲಕ್ಕಿಗಾಡ್ ಸೇರಿದಂತೆ ನಾಲ್ಕು ಕಡೆ ಚಾರ್ ದಾಮ್ ಮಾದರಿಯಲ್ಲಿ ಕ್ಷೇತ್ರ ಸ್ಥಾಪಿಸಿದರು.


ಹೈದರಾಬಾದ್ ಜಿಜಾಮರಲ್ಲಿ ಭಕ್ತಿ ಸುದೆ ಹರಿಸಿ ಬಂಜಾರ ಹಿಲ್ ಅನ್ನು ಬಳುವಳಿ ಯಾಗಿ ಪಡೆಯುತ್ತಾರೆ ಕಾಲಕ್ರಮೇಣ ಭಕ್ತಿ ಕ್ರಾಂತಿಯ ಸಂತ ರಾಗುತ್ತಾರೆ ಉತ್ತರದ ವಿದ್ಯಾಚಲ ದಿಂದ ಹಿಡಿದು ದಕ್ಷಿಣ ಭಾರತದವ ರೆಗೂ ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ ಸಮುದಾಯ ದಲ್ಲಿದ್ದ ಮೂಢನಂಬಿಕೆ ತೆಗೆದುಹಾಕಲು ಶ್ರಮಿಸುತ್ತಾರೆ.


ಪ್ರತಿಯೊಬ್ಬರಿಗೂ ಶಿಕ್ಷಣ ಬೇಕೆಂದು ಶಿಕ್ಷಣ ಕ್ರಾಂತಿಯನ್ನೇ ಉಂಟು ಮಾಡಿ ಆಧ್ಯಾತ್ಮ ಬೋಧನೆಗಳಿಂದ ಮತ್ತು ಚಿಂತನೆಗಳಿಂದ ಸಮುದಾಯವನ್ನು ಕಟ್ಟಿಸುವ ಇವರ ಶ್ರಮವೂ ದೇಶದ ಉದ್ದ ಅಗಲದಲ್ಲೂ ಇರುವ ಬಂಜಾರ ಸಮುದಾಯ ಈಗಲೂ ಕೂಡ ಏಕತೆ ಯ ನೃತ್ಯ ಉಡುಗೆ ತೊಡುಗೆಯ ದಿರಿಸುಗಳನ್ನು ನಾವು ಕಾಣಬಹು ದಾಗಿದೆ ಇವರ ಕೊಡುಗೆ ಕೇವಲ ಬಂಜಾರ ಸಮುದಾಯಕ್ಕೆ ಮಾತ್ರ ವಲ್ಲದೆ ಎಲ್ಲಾ ಸಮುದಾಯದವರು ಶಿಕ್ಷಣ ಭಕ್ತಿ ಸುದಾರಣೆ ಮೂಲಕ ಉನ್ನತಕ್ಕೆ ಏರುವ ಬಗ್ಗೆ ದಾರಿ ತೋರಿ ದವರಾಗಿದ್ದಾರೆ, ಇಂದಿಗೂ ಕೂಡ ಜಾನಪದಗಳಲ್ಲಿ ಮಾತ್ರ ಇವರ ಇತಿ ಹಾಸವನ್ನು ತಿಳಿಯುವ ಆಗಾಗಿದ್ದು ಶಾಲಾ ಪಠ್ಯಗಳಲ್ಲಿ ಇವರ ಜೀವನ ಚರಿತ್ರೆ ಓದುವಂತಾಗಬೇಕು.


ಬಂಜಾರ್ ಸಮುದಾಯವನ್ನು ಕೇವಲ ರಾಜಕೀಯ ಹಿತಾಸಕ್ತಿಗಳಿಗೆ ಮಾತ್ರ ಉಪಯೋಗಿಸಿಕೊಳ್ಳದೆ ಬಂಜಾರ್ ಸಮುದಾಯದ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನ ನಿರ್ಮಾಣ ಮಾಡಬೇಕು ಶೈಕ್ಷಣಿಕವಾಗಿ ರಾಜಕೀಯ ವಾಗಿ ಆರ್ಥಿಕವಾಗಿ ಹಿಂದುಳಿದ ತಾಂಡಾ ಗಳಿಗೆ, ಸಮುದಾಯಕ್ಕೆ ಸರ್ಕಾರದಿಂದ ಮಾನ್ಯತೆ ದೊರೆಯಬೇಕು,


ಸುರಗೊಂಡನ ಕೊಪ್ಪದ ಶ್ರೀ ಕ್ಷೇತ್ರದಲ್ಲಿ ಬರುವ ಪ್ರವಾಸಿಗರಿಗೆ ಭಕ್ತರಿಗೆ ತೊಂದರೆ ಆಗದಂತೆ ಮೂಲಭೂತ ಸೌಲಭ್ಯಗಳನ್ನು ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು ಮಹಾನ್ ದಾರ್ಶನಿಕ ಪವಾಡ ಪುರುಷ ಸಂತ ಲಾಲ್ ರವರ ಆಧ್ಯಾತ್ಮಿಕ ಚಿಂತನೆ ಧರ್ಮ ಬೋಧನೆ ಪಠ್ಯಪುಸ್ತಕ ಇತಿಹಾಸ ಪುಟಗಳಲ್ಲಿ ದಾಖಲಾಗ ಬೇಕಾಗಿದೆ ಎಂದರು.


ಈ ಸಂದರ್ಭದಲ್ಲಿ ವಕೀಲ ರಾಜು ನಾಯ್ಕ್, ಲೋಕೇಶ್ ನಾಯ್ಕ್, ಮಂಜುನಾಯ್ಕ್ ಸೇರಿದಂತೆ ಸಮಾಜದ ಹಲವರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು