ವಿಜಯ ಸಂಘರ್ಷ
ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ(ವಿಐಎಸ್ಪಿ) ಉಳಿಸುವ ನಿಟ್ಟಿನಲ್ಲಿ ರಾಜಕಾರ ಣದ ಪಾತ್ರ ಪ್ರಮುಖವಾಗಿದೆ.
ಚುನಾವಣಾ ಬಹಿಷ್ಕಾರ ಹಾಕುವು ದಾಗಿ ಹೇಳಿದರೆ ಎಲ್ಲಾ ರಾಜಕಾರಣಿ ಗಳು ಕಾರ್ಖಾನೆ ಉಳಿಸುವ ಚಿಂತನೆ ನಡೆಸಬಹುದು ಎಂದು ಶ್ರೀ ಆದಿಚುಂ ಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಬುಧವಾರ ನಗರದ ವಿಐಎಎಸ್ಪಿ ಕಾರ್ಖಾನೆ ಉಳಿಸಿ ಎಂದು ಅನುದಾನಿತ ಶಾಲಾ ಮಕ್ಕಳು ನಡೆಸಿದ ಪ್ರತಿಭಟನೆಯಲ್ಲಿ ಭಾಗಿ ಯಾಗಿ ಮಾತನಾಡಿ, ಕಾರ್ಖಾನೆಗೆ ನಾವೆಲ್ಲಾ ಸಂಬಂಧಪಟ್ಟವರಾದ ಕಾರಣ, ಕಾರ್ಖಾನೆ ಉಳಿವಿನ ಬಗ್ಗೆ ಹೋರಾಟ ಮಾಡುತ್ತೇವೆ. ಈ ಕಾರ್ಖಾನೆ ನಂಬಿಕೊಂಡು ಸಾಕಷ್ಟು ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಕಾರ್ಖಾನೆ ಮುಚ್ಚಿದರೆ ಕಾರ್ಮಿಕರು, ಮಕ್ಕಳು ಬೀದಿ ಪಾಲಾಗುತ್ತಾರೆ. ಇಂದು ಕೆಲವೇ ಕೆಲವು ಮಕ್ಕಳು ಮಾತ್ರ ಹೋರಾಟಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ಹೋರಾಟಕ್ಕೆ ಬರುತ್ತಾರೆ.
ಇಂದು ನಾವು ಕಾರ್ಮಿಕರ ಹೋರಾಟ ಕ್ಕೆ ಬೆಂಬಲ ನೀಡಲು ಬಂದಿದ್ದೇವೆ. ನಿನ್ನೆ ಉಡುಪಿಯ ಪೇಜಾವರ ಶ್ರೀಗಳು ಬಂದಿದ್ದರು. ಇದು ರಾಜಕೀ ಯ ಪ್ರೇರಿತವಿಲ್ಲ, ಮುಂದಿನ ಪೀಳಿಗೆಗೆ ಮತ್ತು ಕಾರ್ಮಿಕರ ಉಳಿವಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಮನ ಹರಿಸಿಬೇಕು. ಕಾರ್ಖಾನೆ ಉಳಿವಿಗಾಗಿ ಕನಿಷ್ಟ 500 ಕೋಟಿ ರೂ. ಬಂಡವಾಳ ಬೇಕಾಗುತ್ತದೆ. ಇದಕ್ಕೆ ರಾಜಕೀಯ ಇಚ್ಛಾ ಶಕ್ತಿ ಬಹಳ ಮುಖ್ಯ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರು ಕಟ್ಟಿದ ಕಾರ್ಖಾನೆಯನ್ನು ಉಳಿಸಬೇಕಿದೆ. ವಿಶ್ವೇಶ್ವರಯ್ಯನವರು ಸುಮಾರು ನಾಲ್ಕು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಉಕ್ಕಿನ ನಗರವಾಗಿದ್ದ ಭದ್ರಾವತಿ ಈಗ ಬೆಂಕಿ ನಗರವಾಗುತ್ತ ಸಾಗುತ್ತಿದೆ. ಭದ್ರಾ ನದಿ ದಂಡೆಯ ಮೇಲೆ ಇರುವ ಭದ್ರಾವತಿ ಕಾರ್ಖಾನೆ ಹಾಗೆಯೇ ಉಳಿಯಬೇಕಿದೆ.
ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲಾಗಿದೆ. ಈಗ ವಿಐಎಸ್ಪಿ ಕಾರ್ಖಾನೆ ಮುಚ್ಚಿದರೆ ಭದ್ರಾವತಿಯ ಗತಿ ಏನು ಎಂದು ಯೋಚಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ನೂರಾರು ಕಾರ್ಮಿಕರು, ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ನಂತರ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದ ಮೂಲಕ ಹಾಲಪ್ಪ ವೃತ್ತ, ಮಾಧವ ಚಾರ್ ವೃತ್ತ, ರಂಗಪ್ಪ ವೃತ್ತದ ಮೂಲಕ ಮಿನಿ ವಿಧಾನ ಸೌಧಕ್ಕೆ ಜಮಾಯಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಗ್ರೇಡ್ -2 ತಹಸೀಲ್ದಾರ್ ರಂಗಮ್ಮ ರವರ ಮೂಲಕ ಪ್ರಧಾನಿಗಳಿಗೆ ಮನವಿ ಸಲ್ಲಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795