ಗುತ್ತಿಗೆ ಕಾರ್ಮಿಕರ ಸಂಘ ದಿಂದ ಬೈಕ್ ರ್‍ಯಾಲಿ : ಪ್ರಧಾನಿ ಗೆ ಮನವಿ

 ವಿಜಯ ಸಂಘರ್ಷ



ಭದ್ರಾವತಿ: ವಿಐಎಸ್ ಎಲ್ ಉಳಿಸಿ ಹೋರಾಟಕ್ಕೆ ಶುಕ್ರವಾರ ಕರೆಯ ಲಾಗಿದ್ದ ಭದ್ರಾವತಿ ಬಂದ್ ಯಶಸ್ವಿ ಯಾದ ಬೆನ್ನಲ್ಲೇ ಶನಿವಾರ ಗುತ್ತಿಗೆ ನೌಕರರು ಸುದ್ದಿ ಗೋಷ್ಠಿ ನಡೆಸಿ ಯಶಸ್ವಿಗೆ ಸಹಕರಿಸಿದ ಜನತೆಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.


ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿ ರುವ ಪ್ರಧಾನಿ ನರೇಂದ್ರ ಮೋದಿಯ ವರಿಗೆ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವುದು, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಒತ್ತಾ ಯಿಸಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.


ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿ ರುವುದರಿಂದ ಅವರನ್ನ ಭೇಟಿಯಾ ಗಲು ಗುತ್ತಿಗೆ ನೌಕರರ ಸಂಘ ತೀರ್ಮಾನಿಸಿದೆ ಕಾರ್ಖಾನೆಯಿಂದ ಬೈಕ್ ರ್ಯಾಲಿ ಮೂಲಕ ತೆರಳಲು ನಿರ್ಧರಿಸಿದೆ. ಇದಕ್ಕೆ ಭದ್ರಾವತಿ ಜನಪ್ರತಿನಿಧಿಗಳು, ಇತರೆ ಸಂಘ ಸಂಸ್ಥೆಗಳು ಬೆಂಬಲಿಸುವಂತೆ ಕೋರಲಾಗಿದೆ.


ಮೋದಿಯವರಿಗೆ ಖುದ್ದಾಗಿ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸ ಲಾಗಿದ್ದು, ಕೋರಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದು, ಅಲ್ಲಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.


ಫೆ.27ರಂದು ಬೆಳಿಗ್ಗೆ 7 ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಬೈಕ್ ರ್‍ಯಾಲಿ ನಡೆಸಲಿದ್ದು, ನಂತರ ವಿಮಾನ ನಿಲ್ದಾಣ ತಲುಪಿ ಮನವಿ ಸಲ್ಲಿಸಲಾಗು ವುದು ಎಂದು ಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಪದಾಧಿಕಾರಿಗಳಾದ ಎಸ್. ವಿನೋದ್‌ ಕುಮಾರ್, ಪಿ. ರಾಕೇಶ್, ಅಂತೋಣಿ ದಾಸ್, ಜಿ. ಆನಂದ್, ಆರ್. ಅರುಣ್‌ ಕುಮಾರ್, ಜೆ. ಕಿರಣ್, ಮುಖಂಡ ರಾದ ಕುಮಾರ ಸ್ವಾಮಿ, ಧನಂಜಯ, ಐಸಾಕ್ ಮತ್ತಿತರಿದ್ದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು