ವಿಜಯ ಸಂಘರ್ಷ
ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ, ಕೆಲಸ ಕಳೆದು ಕೊಳ್ಳುವ ಆತಂಕವು ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿದೆ.
ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಚೇತನ್ ಕುಮಾರ್ (32) ಎಂಬವರು ತಮ್ಮ ತಂಗಿಯ ಮದುವೆ ಶಾಸ್ತ್ರದ ನಡುವೆಯೇ ನೇಣಿಗೆ ಶರಣಾಗಿದ್ದಾರೆ. ನಗರದ ದೈವಜ್ಞ ಕಲ್ಯಾಣ ಮಂಟಪದ ಹಿಂದೆ ಮರಕ್ಕೆ ಸೀರೆ ಬಿಗಿದು ನೇಣಿಗೆ ಕೊರಳೊಡ್ಡಿದ್ದಾರೆ. ಇದೇ ಕಲ್ಯಾಣ ಮಂಟಪದಲ್ಲಿ ತಂಗಿಯ ಮದುವೆ ನಡೆಯುತ್ತಿತ್ತು. ಸಾವಿನ ನಡುವೆಯೇ ಹಿರಿಯರು ಮದುವೆ ಶಾಸ್ತ್ರ ಮುಗಿಸಿದ್ದಾರೆ.
ವಿಶ್ವೇಶ್ವರಯ್ಯ ಕಬ್ಬಿಣ- ಉಕ್ಕು ಕಾರ್ಖಾನೆ ನಷ್ಟದಿಂದಾಗಿ ಮುಚ್ಚುತ್ತಿದೆ. ಕಾರ್ಮಿಕ ವಲಯದಲ್ಲಿ ಇದು ಆತಂಕ ಸೃಷ್ಟಿಸಿದೆ. ಕಳೆದ 19 ದಿನಗಳಲ್ಲಿ ಮೂರನೇ ಕಾರ್ಮಿಕ ಸಾವಿಗೀಡಾ ಗುತ್ತಿದ್ದು, ಇನ್ನಿಬ್ಬರು ಹೃದಯಾ ಘಾತದಿಂದ ನಿಧನರಾಗಿದ್ದರು. ಹೇಮಗಿರಿ, ನಾಗರಾಜ್ ಈ ಹಿಂದೆ ಮೃತಪಟ್ಟವರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795