ವಿಜಯ ಸಂಘರ್ಷ
ಶಿಕಾರಿಪುರ : ಲಿಂಗಸೂರಿನಲ್ಲಿ ಐಶ್ವರ್ಯ ಎಂಬ ಅಪ್ರಾಪ್ತ ವಿದ್ಯಾರ್ಥಿ ನಿ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣದ ಆರೋಪಿಗಳನ್ನು ಹಿಡಿದು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಗುರು ವಾರ ಗೋರ ಸೇನಾ ಸಂಘಟನೆ ವತಿ ಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು.
ಇತ್ತೀಚಿಗೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ಜಾರಿ ಮಾಡಲು ಒತ್ತಾ ಯಿಸಿ ಮಾತನಾಡಿ 17 ವರ್ಷ ವಯ ಸ್ಸಿನ ಅಪ್ರಾಪ್ತ ಬಾಲಕಿ ಲಿಂಗಸೂರಿನ ಸರ್ ಎಂ ವಿ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿನಿ ಆಗಿದ್ದು ಮಹಿಳಾ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಐಶ್ವರ್ಯಳ ಮೇಲೆ ಅಮಾನುಷವಾಗಿ ವರ್ತಿಸಿ ಅತ್ಯಾ ಚಾರ ಕೊಲೆ ಮಾಡಿರುವ ಆರೋಪಿ ಗಳನ್ನು ಗಲ್ಲಿಗೇರಿಸುವ ಶಿಕ್ಷೆಯ ಕಾನೂನು ರಚಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.
2021ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಬಂಜಾರ ಸಮಾಜದ ಅಪ್ರಾಪ್ತ ಬಾಲಕಿ ಕೂಲಿ ಕೆಲಸಕ್ಕೆ ಬಂದವಳ ಮೇಲೆ ಅತ್ಯಾ ಚಾರ ನಡೆಸಿ ಕೊಲೆ ಮಾಡಲಾಗಿತ್ತು, 2022 ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 10 ವರ್ಷದ ಬಾಲಕಿ ಮೇಲೆ ಕೂಡ ಅತ್ಯಾ ಚಾರ ಕೊಲೆ ನಡೆದಿತ್ತು ಮತ್ತು ಅದೇ 2022 ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾ ಳ್ ತಾಲ್ಲೂಕಿನ ಹುಲ್ಲೂ ರ್ ತಾಂಡಾ ದಲ್ಲಿ ರಂಜಿತಾ ಸುರೇಶ ರಾಥೋಡ್ ಮೇಲೆ ಕೂಡ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.
ಈ ಎಲ್ಲಾ ಕೊಲೆ ಪ್ರಕರಣ ಅತ್ಯಾಚಾರ ಪ್ರಕರಣ ನಮ್ಮ ಬಂಜಾರ್ ಸಮಾಜದ ಹೆಣ್ಣುಮಕ್ಕಳ ಮೇಲೆ ನಡೆದಿರುವುದು ದುರಂತ ಇದು ನಮ್ಮ ಸಮುದಾಯದ ಹೆಣ್ಣುಮಕ್ಕಳ ಮೇಲೆ ನಡೆದಿರುವು ದಷ್ಟೇ ಅಲ್ಲ ಯಾವ ಹೆಣ್ಣುಮಕ್ಕಳ ಮೇಲೆ ಕೂಡ ಇಂತಹ ಪ್ರಕರಣ ಮುಂದೆ ನಡೆಯದಂತೆ ಕಠಿಣ ಕಾನೂ ನು ಜಾರಿ ಮಾಡಿ ಪ್ರತಿ ಶಾಲೆ ಕಾಲೇಜು ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಲು ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿದರು. ಸಂಸ್ಥೆ ಅಥವಾ ಮುಖ್ಯಸ್ಥರು, ಪ್ರಾಚಾ ರ್ಯರು ನಿಗಾ ವಹಿಸಿ ನಿರ್ವ ಹಣೆ ಮಾಡಬೇಕು, ತಪ್ಪಿತಸ್ಥರು ಕಂಡು ಬಂದಲ್ಲಿ ಕೂಡಲೇ ಕಾನೂನು ಕ್ರಮಕ್ಕೆ ವಹಿಸಬೇಕು, ಲೈಂಗಿಕ ಕಿರುಕುಳಗಳ ಬಗ್ಗೆ ಸಮಿತಿ ರಚಿಸಬೇಕು, ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು , ಹೆಣ್ಣುಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸಿ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿಗೊಳಿಸದಿದ್ದರೆ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಸಂಘಟನೆಯ ಮುಖಂಡರಾದ ಸಂಘಟನೆಯ ಅಧ್ಯಕ್ಷ ಚಂದ್ರನಾಯ್ಕ್ , ಮಂಜ ನಾಯ್ಕ, ಲೋಹಿತ್ ನಾಯ್ಕ, ಕುಮಾರ್ ನಾಯ್ಕ, ಶಾಂತನಾಯ್ಕ, ಗಜೇಂದ್ರ ನಾಯ್ಕ,ಜಗದೀಶ್ ನಾಯ್ಕ, ಚೇತನ್ ಕುಮಾರ್, ವಿಶ್ವನಾಥ್, ಮಂಜುನಾಯ್ಕ್, ಅರುಣ್ ನಾಯ್ಕ್ ಸೇರಿದಂತೆ ಬಂಜಾರ ಸಮಾಜದ ವಿದ್ಯಾರ್ಥಿಗಳಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+929743225795