ವಿಜಯ ಸಂಘರ್ಷ
ಶಿಕಾರಿಪುರ: ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಹಾಗೂ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರನಾಂದ ಸ್ವಾಮಿಗಳೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಮೆ ಪ್ರತಿಷ್ಠಾಪನೆಗೆ ನಿಗದಿ ಪಡಿಸಿದ್ದ ಹಳೆ ಸಂತೆ ಮೈದಾನಕ್ಕೆ ಭೇಟಿ ನೀಡಿ ಪ್ರತಿಷ್ಠಾಪನೆಯ ಸ್ಥಳ ಸೂಚಿಸಿ ಸಮಯ ನಿಗದಿಪಡಿಸುವ ಬಗ್ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸಚಿವ ಸಂಪುಟಕ್ಕೆ ಕಳುಹಿಸಿ ಅನುಮತಿ ಪಡೆಯಲಾಗಿದೆ. ಈಗಾಗಲೇ ಹತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ತಯಾರಾಗಿದೆ, ಸ್ವಾಮೀಜಿಯವರು ದಿನಾಂಕವನ್ನು ನಿಗದಿಪಡಿಸಿದರೆ ಪ್ರತಿಮೆ ಯನ್ನು ಅನಾವರಣ ಗೊಳಿಸುವುದಾಗಿ ತಿಳಿಸಿದರು.
ಪುರಸಭಾ ಸದಸ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ ಈಗ ನಿಗದಿ ಮಾಡಿರುವ ಸ್ಥಳ ಪ್ರತಿಮೆ ಪ್ರತಿಷ್ಠಾಪನೆ ಸೂಕ್ತವಾಗಿರುವುದಿಲ್ಲ. ಬದಲಿಗೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗ ಹೈ ಮಾಸ್ಕ್ ದೀಪದ ಕೆಳಗೆ ಪ್ರತಿಮೆ ಅನಾವರಣ ಮಾಡಿದರೆ ಸೂಕ್ತ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಂಸದರು ಈಗಾಗಲೇ ಸಚಿವ ಸಂಪುಟದಲ್ಲಿ ಸ್ಥಳ ನಿಗದಿಪಡಿಸಿ ಆಗಿದೆ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಎದ್ದು ಕಾಣುವಂತೆ ಈ ಸ್ಥಳದಲ್ಲಿಯೇ ಎತ್ತರ ಮಟ್ಟದಲ್ಲಿ ಜನತೆ ಹಾಗೂ ರಾಜ್ಯ ಹೆದ್ದಾರಿಗೆ ಕಾಣುವಂತೆ ಪ್ರತಿಮೆಯನ್ನು ಅನಾವರಣಗಳಿಸೋಣ ಪ್ರತಿಮೆ ಕಾಣಲು ಅಡ್ಡ ಇರುವ ವಿದ್ಯುತ್ ದೀಪಗಳನ್ನು ತೆರವುಗೊಳಿಸಿ ಅನಾವರಣಕ್ಕೆ ಸೂಕ್ತ ಎಂದರು.
ಈ ಸಂದರ್ಭದಲ್ಲಿ ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮಿಗಳು ಮಾತನಾಡಿ ನಮ್ಮ ಸಮುದಾಯದ ಬೇಡಿಕೆಯಂತೆ ಸಂಸದ ರಾಘವೇಂದ್ರರವರು ಆಸಕ್ತಿ ವಹಿಸಿ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಮುಂದಾಗಿ ದ್ದಾರೆ.ಇದೇ ಸ್ಥಳದಲ್ಲಿ ಎತ್ತರದಲ್ಲಿ ಕಟ್ಟೆ ಕಟ್ಟಿಸಿ ಪ್ರತಿಮೆ ಪ್ರತಿಷ್ಠಾಪಿಸಿ ಅನಾವರಣ ಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾಡ ಅಧ್ಯಕ್ಷ ನಗರದ ಮಾದೇವಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ,ಬಿಜೆಪಿ ಮುಖಂಡರಾದ ಟಿ.ಎಸ್.ಮೋಹನ್, ಪುರಸಭಾ ಸದಸ್ಯ ಗೋಣಿ ಪ್ರಕಾಶ್, ಪ್ರಶಾಂತ್, ರೇಣುಕಾ ಸ್ವಾಮಿ, ದುರ್ಗಾವರ್ ಶಿವಕುಮಾರ್ , ಹಾಲುಮತ ಮಹಾಸಭಾದ ಮುಖಂಡ ಡಾ: ಪ್ರಶಾಂತ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು, ಹರಳೆಣ್ಣೆ ಗಿಡ್ಡಪ್ಪ, ಬಿ.ಎಲ್.ರಾಜು ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
ವರದಿ: 'ಹುಲಿಗಿ ಕೃಷ್ಣ'
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795