ವಿಜಯ ಸಂಘರ್ಷ
ಸಾಗರ : ತಾಲೂಕಿನ ಆನಂದಪುರ
ಇತಿಹಾಸ ಪ್ರಸಿದ್ಧಿಯ ಶ್ರೀಕಡ್ಲೆಹಂಕ್ಲು ಮಾರಿಕಾಂಬಾ ಜಾತ್ರಾ ಮಹೋತ್ಸ ವವನ್ನು ಅತ್ಯಂತ ವ್ಯವಸ್ಥಿತವಾಗಿ ಯಶಸ್ವಿಯಾಗಿ ನಡೆಸುವ ಕುರಿತಾಗಿ ಜಾತ್ರಾಸಮಿತಿ, ಗ್ರಾಮಾಡಳಿತ, ನಾನಾ ಇಲಾಖಾ ಅಧಿಕಾರಿಗಳೊಂದಿಗೆ ಪೂರ್ವಭಾವಿಸಭೆ ನಡೆಸಿತು.
ಪ್ರತಿನಿತ್ಯ 30 ಸಾವಿರದಿಂದ 50 ಸಾವಿರ ಜನರು ಸೇರುವ ಸಾಧ್ಯತೆ ಇದ್ದು ತುಂಬಾ ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ನಿರ್ವಹಿಸಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.
ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ರಕ್ಷಣೆ, ವಾಹನ ನಿಲುಗಡೆ, ಶುಚಿಯಾದ ಆಹಾರ ತಯಾರಿ, ವಿತರಣೆ, ಭಕ್ತರಿಗೆ ಅತ್ಯಗತ್ಯ ಮೂಲಭೂತ ಸೌಕರ್ಯ, ವಿದ್ಯುತ್ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಸಮಗ್ರವಾಗಿ ಯೋಜನೆ ರೂಪಿಸಲಾಯಿತು.
ಗ್ರಾಮಾಡಳಿತವು ಜಾತ್ರಾ ಸಮಿತಿಗೆ ಎಲ್ಲಾ ರೀತಿಯ ಸಹಕಾರ ನೀಡುವು ದಾಗಿ ಪಂಚಾಯತಿ ಗ್ರಾಮಾಭಿವೃದ್ಧಿ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಮತ್ತು ಜಾತ್ರಾ ಸಮಿತಿಯ ಅಧ್ಯಕ್ಷರು, ಉಫಾಧ್ಯಕ್ಷರು, ಸದಸ್ಯರು,ಪೋಲಿಸ್, ಕಂದಾಯ , ವಿದ್ಯುತ್, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
“ ಫೆ: 28ರಿಂದ ಮಾರ್ಚ್6 ರವರೆಗೆ ಏಳು ದಿನಗಳ ಕಾಲ ಜಾತ್ರೆ ನಡೆಯ ಲಿದ್ದು. ವಾಹನಗಳ ಪಾರ್ಕಿಂಗ್‌ಗೆ ೩ಕಡೆ ವ್ಯವಸ್ಥೆ ಮಾಡಲಾಗಿದ್ದು. ಶಿವಮೊಗ್ಗದ ಕಡೆಯಿಂದ ಬರುವವರು ರತ್ನಾಕರ್‌ರವರ ಖಾಲಿ ಜಾಗ, ಸಾಗರದ ಕಡೆಯಿಂದ ಬರುವವರು ಪೆಟ್ರೋಲ್ ಬಂಕ್ ಪಕ್ಕ, ಶಿಕಾರಿಪುರ ದ ಕಡೆಯಿಂದ ಬರುವವರು ವಾಸು ಲಾಯರ್ ಮನೆ ಪಕ್ಕದ ಸ್ಥಳದಲ್ಲಿಯೇ ವಾಹನಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡಿ ದೇವಸ್ಥಾನ ಹಾಗೂ ಜಾತ್ರಾ ಸ್ಥಳಕ್ಕೆ ಆಗಮಿಸಬೇಕು. ಬಿ.ಹೆಚ್ ರಸ್ತೆಯ ಅಕ್ಕಪಕ್ಕ ಯಾವು ದೇ ವಾಹನಗಳನ್ನು ನಿಲ್ಲಿಸುವಂತಿಲ್ಲ. ಇದಕ್ಕೆ ಸಾರ್ವಜನಿಕರು ಸಹಕರಿಸ ಬೇಕೆಂದು ಜಾತ್ರಾಸಮಿತಿ ಕಾರ್ಯ ದರ್ಶಿ ಉಮೇಶ್ ಮನವಿ ಮಾಡಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795