ತಲೆ ಬುರುಡೆ ಇಲ್ಲದ ಬಂಡಲ್ ಬಜೆಟ್ : ಗೋಣಿ ಮಾಲತೇಶ್ ಆರೋಪ...!

 ವಿಜಯ ಸಂಘರ್ಷ



           ಗೋಣಿ ಮಾಲತೇಶ್ 

ಶಿಕಾರಿಪುರ : ಈ ಬಾರಿಯ 2023 -24 ರ ಬಜೆಟ್ ಚುನಾವಣೆ ಲೆಕ್ಕದಲ್ಲಿ ಮಂ ಡಿಸಿರುವ ತಲೆ ಬುರುಡೆ ಇಲ್ಲದ ಬಜೆಟ್ ಆಗಿದೆ. ಈ ಹಿಂದೆ ಚುನಾವಣೆ ಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜನತೆಗೆ ತಲುಪಿಸಿದ, ಜಾರಿಗೆ ತರದ 40 ಪರ್ಸೆಂಟ್ ಸರ್ಕಾರ ಎಂದು ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ವ್ಯಂಗ್ಯವಾಡಿದರು.



ಚುನಾವಣೆ ಸಂದರ್ಭದಲ್ಲಿ ಸೋಲುವ ಭೀತಿಯಿಂದ, ಇಷ್ಟು ವರ್ಷ ಸುಮ್ಮನಿ ದ್ದ ಸರಕಾರ ಜನತೆಗೆ ಅದು ನೀಡುವೆ, ಇದು ನೀಡುವೆ ಎಂದು ಮೂಗಿಗೆ ತುಪ್ಪ ಸವರಿ ವಾಸನೆ ತೋರಿಸುತ್ತಿದೆ ಎಂದು ಕಿಡಿಕಾರಿದರು.


ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ನೀಡುತ್ತಿದ್ದ 10 ಕೆಜಿ ಅಕ್ಕಿಯನ್ನೇ ನೀಡದ ಇವರು ಈಗ ಏಕಾಏಕಿ ಮಹಿಳಾ ಸಬಲೀಕರಣ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ 4600 ಕೋಟಿ ಘೋಷಿಸಿ ರುವುದು ನಗೆ ಪಾಟಲಾಗಿದೆ ಎಂದು ಆರೋಪಿಸಿದರು.


ಅಧಿಕಾರ ಮುಗಿಯುವ ಸಂದರ್ಭ ದಲ್ಲಿ ಬಿಪಿಎಲ್ ಪಡಿತರರಿಗೆ ಅಮರ ಜ್ಯೋತಿ 75 ಯೂನಿಟ್ ಉಚಿತ ಎಂದು ಘೋಷಣೆ ಮಾಡಿರುವುದು ಮನೆಮನೆಗೆ ಆರೋಗ್ಯ ಎಂಬ ಘೋಷಣೆ ಮಾಡುತ್ತಿರುವುದು, ಸಾರಿಗೆ ಇಲಾಖೆಗೆ 14509 ಕೋಟಿ ಅನುದಾನ ಶಿಕ್ಷಣ ಇಲಾಖೆಗೆ 37,960 ಕೋಟಿ ಘೋಷಣೆ ಇಷ್ಟು ವರ್ಷ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಹಂಚದೇ ವಿದ್ಯಾರ್ಥಿ ವೇತನವನ್ನೇ ನೀಡದ ಇವರಿಗೆ ಈಗ ಏಕಾಏಕಿ ಚುನಾವಣೆಯ ಗಿಮಿಕ್ ಮಾಡಲು ಮತದಾರರಿಗೆ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡು ವ ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣವೇ ಇಲ್ಲ ಎಂದ ಅವರು ಏಕಾಏಕಿ ಸಾವಿರಾರು ಕೋಟಿಯ ಹಣದ ಭರ ವಸೆಯ ಘೋಷಣೆ ಇದಾಗಿದ್ದು ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಕರೆಂಟ್ ಬಿಲ್ ಕಟ್ಟಿಸಲು ಹೊರಟಿದ್ದ ಇವರಿಗೆ ಈಗ ರೈತರ ಮೇಲೆ ಪ್ರೀತಿ ಬಂದಿದೆ,


 ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವೆ ಎಂದು ಭರವಸೆ ನೀಡಿದ್ದ ಸರ್ಕಾರದ ಪ್ರಣಾಳಿಕೆ ಅಂದು ಮೈಸೂರು ಮಹಾರಾಜರ ಕಾಲದಲ್ಲಿ ಉದ್ಯೋಗ ಸೃಷ್ಟಿಗಾಗಿ ಸರ್ ಎಂ ವಿಶ್ವೇಶ್ವರಯ್ಯನವರು ನಿರ್ಮಿಸಿದ ಭದ್ರಾವತಿಯ ವಿಐಎಸ್ಎಲ್ ನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಎಂಪಿಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆಗಳನ್ನೇ ಮುಚ್ಚಿ ನೌಕರರನ್ನು ಬೀದಿ ಪಾಲು ಮಾಡಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡೆ ಬಂಡವಾಳ ಕೂಡದೆ ಕಾರ್ಖಾನೆಗಳೆ ಲಾಸ್ ಆಗಿದೆ ಎಂದು ಬಂಡವಾಳವೇ ಇಲ್ಲ ಎಂದು ಹೇಳಿಕೆ ನೀಡಿ ಗಣಿ ಕಂಪನಿಗೆ ನೀಡದೇ ಲೂಟಿಕೋರರಿಗೆ ಗಣಿಗಾರಿಕೆ ನೀಡಿದ್ದು ಏಕೆ ಎಂದು ಪ್ರಶ್ನಿಸಿಸಿದರು. 


ಈಗ ಸಾವಿರ ಲಕ್ಷ ಕೋಟಿಯ ರೂಪದ ಲ್ಲಿ ಹಣ ಬಿಡುಗಡೆ ಮಾಡುವೆವು ಅನು ದಾನ ಮಾಡುವವೆಂದು ಮತದಾರ ರನ್ನು ಬಾಯಿ ಮಾತಿನಲ್ಲಿ ಓಲೈಕೆ ಮಾಡುತ್ತಿದ್ದಾರೆ ಮತದಾರರು ಮೂ ರ್ಖರಲ್ಲ. ಇದು ಬಿಜೆಪಿ ಸರ್ಕಾರ ದ ಕೊನೆಯ ಬಜೆಟ್ ಆಗಲಿದೆ, ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯಲಿದೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಬರವಸೆಯಂತೆಯೇ ನಡೆಯಲಿದೆ ಎಂದರು.

(ವರದಿ ಹುಲಿಗಿ ಕೃಷ್ಣ)


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು