ವಿಜಯ ಸಂಘರ್ಷ
ಭದ್ರಾವತಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಭದ್ರಾವತಿ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ಹಾಗೂ 10,000 ದಂಡ ವಿಧಿಸಿದೆ.
ದಿನಾಂಕ 27-09-2020 ರಂದು ಗ್ರಾಮಾಂತರ ವೃತ್ತ ಸಿಪಿಐ ಈ.ಓ ಮಂಜುನಾಥ್ ರವರಿಗೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲೆಕಟ್ಟೆ ಹೆಲಿಪ್ಯಾಡ್ ಬಳಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಆರೋಪಿತರಾದ ಇಮ್ರಾನ್ ಪಾಷಾ ಮತ್ತು ಸೈಯದ್ ರೋಷನ್ ರವರನ್ನು ವಶಕ್ಕೆ ಪಡೆದು ಆರೋಪಿತರಿಂದ ಅಂದಾಜು ಮೌಲ್ಯ 6,000/- ರೂಗಳ 190 ಗ್ರಾಂ ತೂಕದ ಒಣ ಗಾಂಜಾ ವನ್ನು ಅಮಾನತ್ತು ಪಡಿಸಿಕೊಂಡು, ಗುನ್ನೆ ಸಂಖ್ಯೆ 0118/2020 ಕಲಂ 20(b) (ii) (A), 8C NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳ ಲಾಗಿರುತ್ತದೆ.
ಪ್ರಕರಣದ ತನಿಖಾಧಿಕಾರಿಗಳಾದ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶಿಲ್ಪಾ ನಾಯನೇಗಲಿ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾ ರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಸರ್ಕಾರಿ ಅಭಿಯೋಜಕ ಬಿ ಹೆಚ್ ರಂಗಪ್ಪ, ಪ್ರಕರಣದವಾದ ಮಂಡಿಸಿ ದ್ದು, ಪ್ರಧಾನ ಸಿ ಜೆ & ಜೆ ಎಂ ಎಫ್ ಸಿ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶರಾದ ಯತೀಶ್. ಆರ್ ರವರು ಮಾ:2 ರಂದು ಆರೋ ಪಿತರಾದ ಬೊಮ್ಮನಕಟ್ಟೆಯ ಇಮ್ರಾನ್ ಪಾಷಾ, (22) ಬೊಮ್ಮನ ಕಟ್ಟೆಯ ಸೈಯದ್ ರೋಷನ್, (38) ರವರ ವಿರುದ್ಧ ಕಲಂ 20(b) (ii) (A) NDPS ಕಾಯ್ದೆ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 6 ತಿಂಗಳು ಗಳ ಕಾಲ ಕಠಿಣ ಕಾರಾವಾಸ ಶಿಕ್ಷೆ ಮತ್ತು 10,000/- ರೂ ದಂಡ ವಿಧಿಸಿ ಆದೇಶ ನೀಡಿರುತ್ತಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+919743225795