ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚರ್ಮದ ತಮಟೆಗಳು

 ವಿಜಯ ಸಂಘರ್ಷ



ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ಹಬ್ಬಗಳ ಸಂದರ್ಭದಲ್ಲಿ ಅನೇಕ ಸಾಂಪ್ರದಾಯಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಹೋಳಿ ಹುಣ್ಣಿ ಮೆಯ ಸಂದರ್ಬದಲ್ಲಿ ಚರ್ಮದ ಹಲಿಗೆಗಳನ್ನು ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಫೈಬರ್ ಹಲಗೆಗಳ ಮಾರಾಟ ಜೋರಾಗಿರು ವುದರಿಂದ ಚರ್ಮದ ಹಲಗೆಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.


ಫೈಬರ್ ಹಲಗೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಚರ್ಮದ ಹಲಗೆಗಳ ಮಾರಾಟ ಕಡಿಮೆಯಾ ಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಸಹಿತ ಆಧುನಿಕ ಪೈಬರ್ ಹಲಗೆಗಳನ್ನು ಖರೀದಿಗೆ ಮಾರು ಹೋಗಿರುವುದರಿಂದ ಚರ್ಮದ ಹಲಗೆಯನ್ನು ಕೇಳುವವರೇ ಇಲ್ಲದಂತಾಗಿದೆ.


ಮೂರು ತಲೆಮಾರುಗಳಿಂದ ಚರ್ಮ ವಾದ್ಯಗಳನ್ನು ತಯಾರು ಮಾಡುವು ದನ್ನು ತಮ್ಮ ಕುಟುಂಬದ ವೃತ್ತಿಯ ನ್ನಾಗಿಸಿಕೊಂಡಿರುವ ನಗರದ ಕೆಲವು ಕುಟುಂಬಗಳು ಇಂದು ಕೂಡಾ ತಮ್ಮ ಮನೆಯಲ್ಲಿ ಚರ್ಮದ ಹಲಗೆಗಳನ್ನು ತಯಾರು ಮಾಡಿ ತಮ್ಮ ಉಪಜೀವನ ವನ್ನು ಸಾಗಿಸುತ್ತಿದ್ದಾರೆ. ಈ ಬಾರಿ ಚರ್ಮದ ಹಲಗೆಗಳನ್ನು ಕೇಳುವವರೆ ಇಲ್ಲ ಎನ್ನುತ್ತಾರೆ.


ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದು, ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆಯನ್ನು ನುಡಿಸುತ್ತಾ ಹೋಳಿ ಸಂಭ್ರಮ ದಲ್ಲಿದ್ದಾರೆ. ಮೊದಲು ಹಲಗೆಗಳು ಕಡಿಮೆ ಇದ್ದವು ಈಗ ಪ್ರತಿಯೊಂದು ಮನೆಯಲ್ಲಿಯೂ ಪೈಬರ್ ಹಲಗೆ ಎರಡ ರಿಂದ ಮೂರು ಹಲಗೆಗಳು ಕಂಡು ಬರುತ್ತವೆ.


ಆಧುನಿಕತೆಯ ಪೈಬರ್ ಹಲಗೆಗಳು ಈಗಾಗಲೇ ಚರ್ಮದ ಹಲಗೆಗಳ ಮರುಕಟ್ಟೆಯನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದು, ಬಣ್ಣ ಬಣ್ಣದ ಚರ್ಮದ ಹಲಗೆಯ ಸುಮಧುರ ನಾದ ಇಂದು ಪೈಭರ ಹಲಗೆಗಳ ಕರ್ಕಷ ನಾದಕ್ಕೆ ಕರಗಿ ಹೋಗುತ್ತಿದೆ. ಮುಂದೊಂದು ದಿನ ಸಂಪ್ರದಾಯದ ಚರ್ಮದ ಹಲಗೆಗಳು ಹೊಳಿ ಹುಣ್ಣಿಮೆಯ ನೆನಪುಗಳಾಗಿ ಉಳಿಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು