ಸರ್ಕಾರಿ ನೌಕರರ ಮುಷ್ಕರಕ್ಕೆ ತಾಲೂಕಿನಲ್ಲಿ ಪೂರಕ ಸ್ಪಂದನೆ

 ವಿಜಯ ಸಂಘರ್ಷ



ಸರ್ಕಾರಿ ನೌಕರರು ೭ನೇ ವೇತನ ಆಯೋಗ ಜಾರಿಗೆ  ಹಾಗು ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಲು ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಲಾಗಿದ್ದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತಾಲೂಕಿನಲ್ಲಿ ಪೂರಕ ಸ್ಪಂದನೆ ವ್ಯಕ್ತವಾಯಿತು.


ತಾಲೂಕಿನ ಶಕ್ತಿ ಕೇಂದ್ರ ತಾಲೂಕು ಕಛೇರಿ ಮಿನಿವಿಧಾನಸೌಧ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೇರಿದಂತೆ ಬಹುತೇಕ ಕಛೇರಿಗಳು ಸ್ತಬ್ದಗೊಂಡಿದ್ದವು.


 ಕೆಲವು ಕಛೇರಿಗಳಿಗೆ ಬೀಗ ಜಡಿಯ ಲಾಗಿತ್ತು. ಇನ್ನೂ ಕೆಲ ಕಛೇರಿಗಳು ಅಧಿಕಾರಿಗಳು, ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿದ್ದವು. ಸರ್ಕಾರಿ ಶಾಲಾ- ಕಾಲೇಜುಗಳ ಶಿಕ್ಷಕರು, ಉಪನ್ಯಾಸಕ ರುಗಳು ಸಂಪೂರ್ಣವಾಗಿ ಗೈರು ಹಾಜರಾದ ಹಿನ್ನಲೆಯಲ್ಲಿ ಶಾಲಾ- ಕಾಲೇಜುಗಳು ಸಹ ಮುಚ್ಚಲ್ಪಟ್ಟಿ ದ್ದವು. ಸರ್ಕಾರಿ ಸೇವೆಗಳಿಗಾಗಿ ಜನರು ಪರದಾಡು ವಂತಾಯಿತು.


 ಜನಸಾಮಾನ್ಯರಿಗೆ ಮುಷ್ಕರದ ಬಿಸಿ ತಟ್ಟಿತು.ಹಳೇನಗರದ ಬಸವೇಶ್ವರ ವೃತ್ತದಲ್ಲಿ ರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಛೇರಿಯಲ್ಲಿ ನಿರ್ದೇಶಕರು ಸಭೆ ನಡೆಸಿ ದಿನದ ಬೆಳವಣಿಗೆಗಳನ್ನು ಗಮನಿಸಿದರು.


ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು