ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಮುಖ್ಯ: ಅರವಿಂದ ಶರ್ಮಾ


ವಿಜಯ ಸಂಘರ್ಷ
ಶಿವಮೊಗ್ಗ; ಪ್ರತಿ ನಿತ್ಯ ನಮ್ಮ ವೃತ್ತಿಯ ಜತೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳು ಮುಂದಾ ಗಬೇಕು. ಪ್ರತಿಯೊಬ್ಬರು ಸೇವಾ ಮನೋ ಭಾವ ಬೆಳೆಸಿಕೊಳ್ಳಬೇಕು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇ ಜರ್ ಅರವಿಂದ ಶರ್ಮಾ ಹೇಳಿದರು.

ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಬ್ಯಾಂಕ್‌ನ 129ನೇ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಸಹಕಾರ ದೊಂದಿಗೆ ಬ್ಯಾಂಕ್ ನೌಕರರು ಮತ್ತು ಗ್ರಾಹಕರು ರಕ್ತದಾನ ಮಾಡಿದರು.

ಬ್ಯಾಂಕ್ ವತಿಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ರಕ್ತದಾನದಂತಹ ಸೇವಾ ಕಾರ್ಯ ಆಯೋಜಿಸಲಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಅನೇಕರು ರಕ್ತದಾನ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸಮಾಜದಲ್ಲಿ ಅವಶ್ಯಕತೆ ಇರುವ ರಕ್ತದ ಕೊರತೆ ನೀಗಿಸುವಲ್ಲಿ ರಕ್ತದಾನ ಶಿಬಿರಗಳು ಸಹಕಾರಿ ಆಗುತ್ತವೆ. ರಕ್ತದಾನ ಶಿಬಿರಗಳಲ್ಲಿ ಹೆಚ್ಚು ಜನರು ರಕ್ತದಾನ ಮಾಡಲು ಮುಂದಾಗಬೇಕು. ಆರೋಗ್ಯವಂತ ಯುವಜನತೆ ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠದಾನ. ಆರೋಗ್ಯ ವಂತ ಯುವಜನರು ಮೂರು ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದು. ಅಮೂಲ್ಯ ಜೀವ ಉಳಿಸುವ ಮಹಾತ್ಕಾ ರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

110 ಬಾರಿ ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಮಾತನಾಡಿದರು. ಡಾ. ದಿನಕರ್ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಅಜಯ್‌ಕುಮಾರ್ ಸಿಂಗ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : +919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು