ಪ್ರವಾಸದಿಂದ ವೈವಿಧ್ಯಮಯ ಸಂಸ್ಕೃತಿ ಪರಂಪರೆಯ ಅರಿವು

ವಿಜಯ ಸಂಘರ್ಷ
ಶಿವಮೊಗ್ಗ: ಪ್ರವಾಸ ಕೈಗೊಳ್ಳುವು ದರಿಂದ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯ ಪರಿಚಯ ಹಾಗೂ ತಿಳವಳಿಕೆ ಮೂಡು ತ್ತದೆ. ವಿವಿಧ ರಾಜ್ಯಗಳ ಜನರ ಜೀವನಶೈಲಿ ತಿಳಿಯುತ್ತದೆ ಎಂದು ಶಿವಮೊಗ್ಗ ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ಹೇಳಿದರು.

ಯೂತ್ ಹಾಸ್ಟೆಲ್ಸ್ ಅಸೋಸಿಯೇ ಷನ್ ಆಫ್ ಇಂಡಿಯ ತರುಣೋ ದಯ ಘಟಕದ ವತಿಯಿಂದ "ನೇಪಾಳ ದಿಂದ ಶಿವಮೊಗ್ಗದ ಗೋಪಾಳ" ದ ವರೆಗೆ ಆಯೋಜಿಸಿರುವ ಬೈಕ್ ರ‍್ಯಾಲಿ ನಡೆಸುತ್ತಿರುವ ಸಾಹಸಿಗರಿಗೆ ಬೀಳ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಬೈಕ್ ಮೂಲಕ ಶಿವಮೊಗ್ಗ ದಿಂದ ಜಮ್ಮು ಕಾಶ್ಮೀರ, ಕನ್ಯಾಕು ಮಾರಿ, ಅಸ್ಸಾಂನಿAದ ಗುಜರಾತ್ ಹೀಗೆ ದೇಶಾ ದ್ಯಂತ ಸಂಚರಿಸಿದ್ದೇವೆ. ಇದೀಗ ನೇಪಾಳ ದಿಂದ ಶಿವಮೊಗ್ಗದ ವರೆಗೂ ಬೈಕ್ ರ‍್ಯಾಲಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಥಮವಾಗಿ ಅಂತರರಾಷ್ಟ್ರೀಯ ಬೈಕ್ ಸವಾರಿಯ ಮುಂದಾಳತ್ವ ವಹಿಸಿರುವ ಅ.ನಾ.ವಿಜಯೇಂದ್ರ ಮಾತನಾಡಿ, ಅಂತರಾಷ್ಟಿಯ ರೋಟರಿ ಕ್ಲಬ್, ವಾಣಿಜ್ಯ ಸಂಘ, ಯೂತ್ ಹಾಸ್ಟೆಲ್ಸ್ ಸಹಕಾರ ನೀಡುತ್ತಿದೆ. ಪ್ರವಾಸೋದ್ಯಮ ಉನ್ನತೀ ಕರಣಕ್ಕಾಗಿ ಶಿವಮೊಗ್ಗಕ್ಕೆ ಬನ್ನಿ, ಸೇಫ್ ಡ್ರೈವಿಂಗ್, ಮಹಿಳಾ ಸಬಲೀಕರಣ ವಿಚಾರದ ಜಾಗೃತಿ ರ‍್ಯಾಲಿಯಲ್ಲಿ ಮಾಡಲಾ ಗುತ್ತದೆ ಎಂದು ಹೇಳಿದರು.

ಯೂತ್ ಹಾಸ್ಟೆಲ್ಸ್ ಚರ‍್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಎಲ್ಲ ಹನ್ನೊಂದು ಸವಾರರು ನಮ್ಮ ತರುಣೋದಯ ಘಟಕದ ಅಜೀವ ಸದಸ್ಯರು. ನಮಗೆ ಹೆಮ್ಮೆ ತರುವ ವಿಚಾರ ಎಲ್ಲರ ಪ್ರಯಾಣ ಸುಖಕ ರವಾಗಿರಲಿ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸದಸ್ಯರು ಎನ್.ಗೋಪಿನಾಥ್ ಮಾತನಾಡಿ, ಉದ್ದಿಮೆ ದಾರರಿಗೆ ಧೈರ್ಯ ಅತೀ ಮುಖ್ಯ. ಈ ರೀತಿಯ ಸಾಹಸ ಮಾಡುವ ಪ್ರವೃತಿಯವರು ಎಲ್ಲಾ ಸಂದರ್ಭದಲ್ಲಿಯೂ ಎದೆಗುಂದದೆ ಮುನ್ನಡೆಯುತ್ತಾರೆ. ನಮ್ಮ ವಾಣಿಜ್ಯ ಸಂಘದ 60ನೇ ವರ್ಷದ ಸಂಭ್ರಮ ಆಚರಣೆಯ ಪ್ರಥಮ ಕಾರ್ಯಕ್ರಮ ವಾಗಿ ಅಂತರರಾಷ್ಟಿಯ ಸಾಹಸ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ಮೂಲಕ, ಉದ್ದಿಮೆ ದಾರರು ಸಾಹಸ ಕಾರ್ಯಗಳಲ್ಲಿ ತೊಡಗಿ ಸಿಕೊಳ್ಳಲು ಸಹಕಾರ ನೀಡುವುದಾಗಿ ತಿಳಿಸಿದರು.

ಪ್ರಮುಖರಾದ ನಾಗರಾಜ್, ಜಿ.ವಿಜಯ ಕುಮಾರ್, ರಮೇಶ್ ಬಾಬು, ಶ್ರೀಕಾಂತ್, ಗಿಡ್ಡಪ್ಪ, ಮಂಜುನಾಥ್, ಗಿರೀಶ್ ಕಾಮತ್, ವಿಜಯೇಂದ್ರ, ರವೀಂದ್ರ, ವಿನಾಯಕ್ ಬಾಯರಿ, ಮಮತಾ, ಭಾರತಿ, ಪ್ರಕೃತಿ, ನಾಗರಾಜ್ ಮುಂತಾದವರಿದ್ದರು.

 ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : +919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು