ಅಭಿವೃದ್ಧಿ-ಜನಪರ ಕಾಳಜಿಗೆ ಬಿ.ಜೆ.ಪಿ. ಬೆಂಬಲಿಸಿ: ಹಾಲಪ್ಪ

ಸಾಗರ : ಹಿಂದೆ 2 ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸದನದೊಳಗೆ ಒಂದೇ ಒಂದು ಬಾರಿ ಮಾತನಾಡುವ ಧೈರ್ಯ ತೋರಿಯೇ ಇಲ್ಲ ಒಂದೇ ಒಂದು ಶಬ್ಧ ನುಡಿಯುವುದನ್ನು ಬಿಟ್ಟು ಈಗ ಜನರ ನಡುವೆ ಬಂದು ಟಾಟಾ ಮಾಡುವುದಲ್ಲ. ಕಾಗೋಡು ರವರನ್ನು ಹೀನಾಯವಾಗಿ ನಿಂದಿಸಿದವರು ಈಗ ಭೀಷ್ಮ ಎಂದು ಹೊಗಳುತ್ತಿದ್ದಾರೆ ಎಂದು ಬಿ.ಜೆ.ಪಿ. ಅಭ್ಯರ್ಥಿ ಶಾಸಕ ಹರತಾಳು ಹಾಲಪ್ಪ ವ್ಯಂಗ್ಯವಾಡಿದರು.

ಅವರು ಚುನಾವಣಾ ಪ್ರಚಾರ ಹಾಗೂ ನೂತನ ಕಾರ್ಯಕರ್ತರ ಸೇರ್ಪಡೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದರು ಕ್ರಿಕೇಟ್ ಆಟವಾಡುವ ಹುಡುಗರಿಗೆ ದುಡ್ಡು ಹಂಚಿ ಕನ್ನಡಕ ಹಾಕಿಕೊಂಡು ಬ್ಯಾಟ್ ಬೀಸಿ ಹೋದವರು ಇಂದು ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೆಸರು ಹೇಳದೇ ಗೋಪಾಲಕೃಷ್ಣರವರಿಗೆ ಟಾಂಗ್ ನೀಡಿದರು.

ಉಳುವವನೇ ಹೊಲದೊಡೆಯ ಎಂಬ ಹೋರಾಟ ಮತ್ತೊಮ್ಮೆ ಮಾಡಬೇಕಾದ ಸಂದರ್ಭ ಬಂದಿದೆ ಸದನ ಹೊರಗೆ ಮತ್ತು ಒಳಗೆ ಎರಡೂ ಕಡೆ ಹೋರಾಟ ಮಾಡು ತ್ತೇವೆ ಮುಂದೆಯೂ ಅಭಿವೃದ್ಧಿ ಮಾಡು ವುದರ ಜೊತೆಗೆ ರೈತರ ಸಮಸ್ಯೆಗೆ ಪರಿ ಹಾರವನ್ನು ಕೊಡಲಿದ್ದೇವೆ.

ಹಿರೇಹಾರಕ , ಉದ್ದನೂರು ಭಾಗದಲ್ಲಿ ನಾವೆಷ್ಟೇ ಕೇಳಿಕೊಂಡರೂ ಬಿ.ಜೆ.ಪಿ.ಗೆ ಜನರು ಮತ ಹಾಕಲಿಲ್ಲ ಆದರೂ ಯಾವುದೇ ತಾರತಮ್ಯ ಮಾಡದೇ ನಾವು ಅಭಿವೃದ್ಧಿಯನ್ನು ಮಾಡಿದ್ದೇವೆ ಈ ಬಾರಿ ರತ್ನಾಕರ್ ಹೊನಗೋಡು, ಪಟೇಲ್ ರೇವಪ್ಪ , ಭರ್ಮಪ್ಪ ನಾಯಕರು ಕಾಂಗ್ರೆಸ್ ತೊರೆದು ನಮ್ಮೊಂದಿಗಿದ್ದಾರೆ ಅತೀಹೆಚ್ಚಿನ ಮತಗಳ ಲೀಡ್ ಅನ್ನು ಈ ಭಾಗದ ಜನ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಹಿರೇಹಾರಕ, ಗೌತಮಪುರ, ಮದ್ಲೇಸರ, ಇರುವಕ್ಕಿ ಗ್ರಾಮಗಳಲ್ಲಿ ವಿವಿಧ ಪಕ್ಷಗಳ ಲ್ಲಿದ್ದ ಅನೇಕ ಕಾರ್ಯಕರ್ತರು ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಶಕ್ತಿಕೇಂದ್ರದ ಅಧ್ಯಕ್ಷ ಆಚಾಪುರಶಾಂತಕುಮಾರ್, ಮುಖಂಡ ರಾದ ಹೊನಗೋಡು ರತ್ನಾಕರ್, ಧನ್‌ ರಾಜ್, ರೇವಪ್ಪ ಪಟೇಲ್, ಭರ್ಮಪ್ಪ , ಹಾಗೂ ನೂರಾರು ಕಾರ್ಯಕರ್ತರಿದ್ದರು.
“ ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರ ಮೇಲೆ ನನಗೆ ಅಪಾರ ಗೌರವವಿದೆ ಆದರೆ ಈಗಿನ ಕಾಂಗ್ರೆಸ್ ಅಭ್ಯರ್ಥಿಯು ಬಂಗಾರಪ್ಪನವರು  ಸತ್ತಾಗ ಕನಿಷ್ಠ ಸಂತಾಪವನ್ನೂ ಸೂಚಿಸಲಿಲ್ಲ.  ಬಿ.ಎಸ್.ವೈಗೆ ತೊಂದರೆ ಕೊಟ್ಟು ಕಣ್ಣಲ್ಲಿ ನೀರು ತಂದಿದ್ದರು, ತಿಮ್ಮಪ್ಪನವರನ್ನು ಮುದಿಯ ಮುಂತಾಗಿ ನಿಂದಿಸಿದವರು ಈಗ ಭೀಷ್ಮ ಎಂದು ಹೊಗಳುತ್ತಿದ್ದಾರೆ. ತಿಮ್ಮಪ್ಪನವರಿಗೆ ಕಾಂಗ್ರೆಸ್‌ನ ಉಪ್ಪಿನ ಋಣ ಇರುವುದಕ್ಕಾಗಿ ಅಲ್ಲಿದ್ದಾರೆ ಅಷ್ಟೆ. ಆದರೆ ಅವರ ಮಗಳು ನಮಗೆ ಬೆಂಬಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು