ವಿಜಯ ಸಂಘರ್ಷ
ಸಾಗರ: ಶಿಕ್ಷಣ, ರಸ್ತೆ, ಕುಡಿವ ನೀರು ಹೀಗೆ ಅಭಿವೃದ್ಧಿಯ ಜತೆಗೆ ಜನ ಸಾಮಾನ್ಯ ರನ್ನು ವಿಶ್ವಾಸದಿಂದ ನೋಡುವ ಅಜೆಂಡಾ ವನ್ನು ಹೊಂದಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸೇವೆಗೆ ನನಗೆ ಪಕ್ಷ ಅವಕಾಶ ಕೊಟ್ಟಿದೆ. ಇನ್ನು ಜನ
ಆಶೀರ್ವದಿಸಬೇಕು. ಈಗಾಗಲೆ ಬಿಜೆಪಿ ರಾಜ್ಯ ಸರಕಾರದ ವಿಫಲತೆ ಒಂದು ಕಡೆ ಯಾದರೆ ಸಾಗರ ಕ್ಷೇತ್ರದಲ್ಲಿ ದೌರ್ಜನ್ಯ,
ಸಮುದಾಯ, ಸಮುದಾಯಗಳ ನಡುವೆ ಜಗಳ ತಂದಿಟ್ಟು ರಾಜಕಾರಣ ಮಾಡುವ ಕೆಟ್ಟ ಪ್ರವೃತ್ತಿಯಿರುವ ವ್ಯಕ್ತಿಯನ್ನು ದೂರ ಕಳಿಸಬೇಕಿದೆ. ಸ್ವತ; ಬಿಜೆಪಿ ಪಕ್ಷದವರೇ ಅನೇಕರು ತಮ್ಮ ಪಕ್ಷದ ಶಾಸಕ ಭ್ರಷ್ಟಾ ಚಾರಿ, ನಮ್ಮ ಪಕ್ಷದಲ್ಲಿ ಒಡಕು ತರುವ ಕಾರ‍್ಯ ಮಾಡಿದ್ದಾರೆ ಎಂದು ಹೇಳುತ್ತಿರು ವುದು ಅವರ ವ್ಯಕ್ತಿತ್ವದ ಏನು ಎನ್ನು ವುದು ತಿಳಿಯಲಿದೆ ಎಂದರು.
ಎಲ್ಲ ಕಡೆಯಲ್ಲಿಯೂ ಜನತೆ ಬೆಂಬಲ ನೀಡುತ್ತಿರುವುದು, ಸಾಗರ ಕ್ಷೇತ್ರವೂ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್
ಬಹುಮತದಿಂದ ಆಡಳಿತಕ್ಕೆ ಬರುವುದು ಖಚಿತ ಎನಿಸುತ್ತಿದೆ ಎಂದರು.
ನಗರ ಘಟಕದ ಅಧ್ಯಕ್ಷ ಸುರೇಶ್ ಬಾಬು, ಜಿಲ್ಲಾ ಮಹಿಳಾ ಅಧ್ಯಕ್ಷೆ ಅನಿತಾಕುಮಾರಿ, ತಾಲೂಕು ಮಹಿಳಾ ಅಧ್ಯಕ್ಷೆಸುಮಂಗಲಾ, ಮಧುಮಾಲತಿ, ಲಲಿತಮ್ಮ, ಚೇತನರಾಜ್ ಕಣ್ಣೂರು, ಹೊಳೆಯಪ್ಪ, ಮಂಡಗಳಲೆ ಗಣಪತಿ ಮತ್ತಿತರರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಳಿಗಾಗಿ ಸಂಪರ್ಕಿಸಿ :-919743225795