ವಿಜಯ ಸಂಘರ್ಷ
ಶಿಕಾರಿಪುರ : ಚುನಾವಣೆ ನೀತಿ ಸಂಹಿತೆಯ ಜಾರಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಜಿಲ್ಲಾ ಆಡಳಿತ ರಾಜಕೀಯ ಪಕ್ಷಗಳಿಗೆ ರಾಜಕಾರ ಣಿಗಳಿಗೆ ಕಡಿವಾಣ ಮಾಡಲಿ, ಆದರೆ ಪ್ರತಿ ವರ್ಷದಂತೆ ಜರುಗುವ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯ ಸ್ವಾಮಿಯ ಜಾತ್ರೆಗೆ ಪೂಜೆ ಪುನಸ್ಕಾರಕ್ಕೆ ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಭಕ್ತಾದಿಗಳಿಗೆ ದಾಸೋಹಕ್ಕೆ ಅಡಚಣೆ ಮಾಡದಂತೆ ಆಗ್ರಹಿಸಿ ಮಂಗಳವಾರ ನಗರದ ಸುದ್ದಿ ಮನೆಯ ಸುದ್ದಿಗೋಷ್ಠಿ ಯಲ್ಲಿ ಸಂಘಟನೆಯ ಮುಖಂಡರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಚುನಾವಣಾ ನೀತಿ ಸಂಹಿತೆಯು ರಾಜಕೀಯ ರಾಜಕಾರಣಿಗಳಿಗಿರಲಿ. ದೇವರು ದೇವರ ಪೂಜೆ ದಾಸೋಹ ಗಳಿಗೆ ಬೇಡ ಧಾರ್ಮಿಕ ದತ್ತಿ ಇಲಾಖೆ ಯಿಂದ ಜಾತ್ರಾ ಮಹೋತ್ಸವ ಪ್ರತಿ ವರ್ಷ ಜರುಗುವಂತೆ ಈ ಬಾರಿಯೂ ಕೂಡ ವಿಜ್ರಂಬಣೆಯಿಂದ ನಡೆಯ ಬೇಕು ತಾಲೂಕು ಜಿಲ್ಲಾ ಆಡಳಿತವು ಯಾವುದೇ ರಾಜಕೀಯ ನಾಯಕರ ಬಳಿ, ಸಂಸದ ಶಾಸಕರ ಬಳಿ, ಜನ ಪ್ರತಿನಿಧಿಗಳ ಬಳಿ ದಾಸೋಹಕ್ಕೆ ಹಣ ಕೇಳದೆ ದೇವಸ್ಥಾನದ ದತ್ತಿ ಇಲಾಖೆ ಯಲ್ಲಿ ಇರುವ ಆದಾಯದಲ್ಲಿ ದೂರದ ಊರುಗಳಿಂದ ಹಳ್ಳಿಗಳಿಂದ ಬರುವ ಭಕ್ತರಿಗೆ ತಾಲೂಕು ಆಡಳಿತವೇ ಮುಂದೆ ನಿಂತು ಅನ್ನ ಸಂತರ್ಪಣೆ ವಿನಿಯೋಗ ಮಾಡುವ ಮೂಲಕ ಭಕ್ತರ ಹಸಿವು ನೀಗಿಸಬೇಕು ಎಂದರು.
ಆರ್ ಪಿ.ಮಂಜುನಾಥ್ ಮಾತನಾಡಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಬೆಳಿಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತರೆ ದರ್ಶನವು ಮಧ್ಯಾಹ್ನ ಅಥವಾ ಸಂಜೆಯವರೆಗೂ ಆಗಬಹುದು ಆಗ ಬಿಸಿಲಿನ ಬೇಗೆಯಿಂದ ಬಳಲಿದ ಭಕ್ತ ರಿಗೆ ಅನ್ನ ನೀರು ಸಿಗದೇ ಶಿಕಾರಿಪುರಕ್ಕೆ ಇಡಿ ಶಾಪ ಹಾಕಬಾರದು ಎಂದರು.
ಮುಖಂಡ ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ಧಾರ್ಮಿಕತೆಗೆ ರಾಜಕೀಯ ಬೆರೆಸುವುದು ಸರಿಯಲ್ಲ ಚುನಾವಣಾ ನೀತಿ ಸಂಹಿತೆಯ ರಾಜಕೀಯದ ರಾಜಕಾರಣಿಗಳು ಮತಗಳಿಗಾಗಿ ಜನರ ಓಲೈಕೆಗಾಗಿ ಬಾಡೂಟ ಹಾಕಿಸುವುದು, ಹಣ ಕೊಡುವುದು ಉಡುಗೊರೆ ಕೊಟ್ಟು ಮತ ಹಾಕಿಸಿಕೊಳ್ಳುತ್ತಾರೆ ಎಂದು ಚುನಾವಣೆ ನೀತಿ ಸಂಹಿತೆ ಜಾರಿ ಆಗಿರುತ್ತದೆ. ಆದರೆ ಪ್ರತಿ ವರ್ಷ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ತಾಲೂಕ್ ಆಡಳಿತ ನಡೆಸುವ ಧಾರ್ಮಿಕ ಕಾರ್ಯಕ್ರಮ ಜಾತ್ರಾ ಮಹೋತ್ಸವಕ್ಕೆ ಚುನಾವಣೆ ಯ ನೆಪವಡ್ಡಿ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ನಿಲ್ಲಿಸುವುದು ಸರಿ ಅಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರೇ ತಾಲೂಕು ಆಡಳಿತವೇ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಿ ದೈವ ಕೃಪೆಗೆ ಪಾತ್ರರಾಗಿರಿ, ನಿಮಗೆ ಆಗದಿದ್ದರೆ ನಮ್ಮ ಸಂಘಟನೆಗೆ ಜವಾಬ್ದಾರಿ ನೀಡಿ ನಾವೇ ಪಕ್ಷಾತೀತ ವಾಗಿ ಜಾತ್ಯಾತೀತವಾಗಿ ಬರುವ ಭಕ್ತರಿಗೆ ಅನ್ನಸಂಪರ್ಪಣೆಯ ಪ್ರಸಾದವನ್ನು ನೀಡುತ್ತೇವೆ ಎಂದು ಈ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಟ್ಟಿಕೋಟೆ ಮಾಲತೇಶ್ ,ಇಮ್ರಾನ್, ಯೋಗೀಶ್ , ಯಮುನಪ್ಪ, ಮುಕ್ರಂ , ಸನಾವುಲ್ಲಾ, ದೇವು ಸೇರಿದಂತೆ ಹಲವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ
+919743225795