ವಿಜಯ ಸಂಘರ್ಷ
ಸಾಗರ: ಪ್ರಸಿದ್ಧ ಪುಣ್ಯ ಸ್ಥಳ ಸಾಗರದ ಸಿಗಂದೂರು ಬೇಸಿಗೆ ರಜೆ ಎಂದು ನೀವೇನಾದರೂ ಅಲ್ಲಿಗೆ ತೆರಳುವುದಕ್ಕೆ ಯೋಜನೆ ಹಾಕಿಕೊಂಡಿದ್ದರೆ ಆ ದಿನದಂದು ದೇಗುಲದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಿ ರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.
ಈ ತಿಂಗಳ 10ನೇ ತಾರೀಖಿನಂದು ರಾಜ್ಯಾದ್ಯಂತ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಮತದಾನ ಮಾಡಬೇಕಾಗಿರುವುದು ನಮ್ಮೆಲ್ಲರ ಹಕ್ಕು. ಹಾಗಾಗಿ ಆ ದಿನದಂದು ಭಕ್ತರಿಗೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಗಂದೂರಿನ ಧರ್ಮದರ್ಶಿ ಡಾ.ಎಸ್. ರಾಮಪ್ಪ ಅವರು ತಿಳಿಸಿದ್ದಾರೆ.
ಜನರು ಚುನಾವಣೆಯ ರಜೆಯನ್ನು ಪ್ರವಾಸಕ್ಕೆಂದು ಹಾಳು ಮಾಡದೆಯೇ ತಪ್ಪದೇ ಮತದಾನ ವನ್ನು ಮಾಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯನ್ನು ಬಲಗೊಳಿ ಸಲು ಪ್ರತಿ ಮತದಾರನಿಗೂ ಹಕ್ಕಿದೆ.
ಚುನಾವಣೆ ಎಂಬುದು ಗಣತಂತ್ರದ ಹಬ್ಬವಿದ್ದಂತೆ. ಈ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು. ಯಾವುದೇ ಆಮಿಷ ಗಳಿಗೆ ಬಲಿಯಾಗದಂತೆ ಸರ್ವರೂ ಮತದಾನ ಮಾಡಬೇಕು. ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗು ತ್ತಿದೆ. ಅಂದಿನ ಪ್ರವಾಸವನ್ನು ರದ್ದು ಮಾಡಿ ಸರ್ವರೂ ಮತದಾನದಲ್ಲಿ ಭಾಗಿಯಾಗಿ ಸಂವಿಧಾನವನ್ನು ಬಲಗೊಳಿಸಬೇಕು” ಎಂದು ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ : +919743225795
Tags:
Siganduru ನ್ಯೂಸ್