ಮತ ಎಣಿಕೆಗೆ ಸಜ್ಜು: ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ-ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭ

ವಿಜಯ ಸಂಘರ್ಷ
ಶಿವಮೊಗ್ಗ: ನಗರದ ಸಹ್ಯಾದ್ರಿ ಕಲಾ ಕಾಲೇಜು ಅವರಣದಲ್ಲಿ ಶನಿವಾರ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಯ ಮತ ಎಣಿಕೆ ನಡೆ ಯಲಿದ್ದು ಅದಕ್ಕಾಗಿ ಸಿದ್ಧತೆಗಳು ನಡೆದಿವೆ.

ಬುಧವಾರ ಸಂಜೆ 6 ಗಂಟೆಗೆ ಮತದಾನ ಅಂತ್ಯದ ಬಳಿಕ ಮತಯಂತ್ರಗಳನ್ನು ಸೀಲ್ ಮಾಡಿ ಆಯಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರಗಳಿಗೆ ತಡರಾತ್ರಿವರೆಗೆ ತರಲಾಗಿತ್ತು. ಎಲ್ಲ ಮತಗಟ್ಟೆಗಳ ಮತಯಂತ್ರಗಳು ಬಂದ ಬಳಿಕ ಕಂಟ್ರೋಲ್ ಯೂನಿಟ್‌ ಗಳನ್ನು ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಕಳುಹಿಸಲಾ ಯಿತು. ಗುರುವಾರ ಮಧ್ಯಾಹ್ನ ದವರೆಗೆ ಕಂ ಟ್ರೋಲ್‌ ಯೂನಿಟ್‌ಗಳನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ಇಡಲಾಯಿತು.

ಎಲ್ಲ ಏಳು ಸ್ಟ್ರಾಂಗ್ ರೂಂಗಳನ್ನು ಸೀಲ್ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ಗಳು ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಚುನಾ ವಣಾಧಿಕಾರಿ ನೇತೃತ್ವದಲ್ಲಿ ನಡೆದವು. ಅಲ್ಲದೆ ಇಡೀ ಸಹ್ಯಾದ್ರಿ ಕಲಾ ಕಾಲೇಜು ಕಟ್ಟಡಕ್ಕೆ ಅಧಿಕ ಭದ್ರತೆಯನ್ನು ಒದಗಿಸ ಲಾಗಿದೆ. ಶನಿವಾರ ಮತ ಎಣಿಕೆ ಅಂತ್ಯ ದವರೆಗೆ ಮುಂದುವರಿಯಲಿದೆ. ಮತ ಎಣಿಕೆ ಕೇಂದ್ರವಾದ ಸಹ್ಯಾದ್ರಿ ಕಾಲೇಜು ಅವರಣದ ಸುತ್ತಸೆಕ್ಷನ್ 144 ಜಾರಿಗೊಳಿ ಸಲಾಗಿದೆ. ಅಲ್ಲದೆ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನೂ ಬದಲಾವಣೆ ಮಾಡಲಾಗಿದೆ,

ಬೆಳಗ್ಗೆ 8ರಿಂದ ಮತ ಎಣಿಕೆ: ಮತ ಎಣಿಕೆ
ಮತ ಎಣಿಕೆಗೆ ಸಿದ್ಧವಾದ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ ನಡೆಯಲಿದೆ.

ಮತ ಎಣಿಕೆ ನಿಯಮ? ಯಾರು ಒಳಗೆ ಇರಬಹುದು?

ಮತ ಎಣಿಕೆ ಕಾರ್ಯವು ಬೆಳಗ್ಗೆ 8ರಿಂದ ಆರಂಭವಾಗಲಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟರು ಬೆಳಗ್ಗೆ 7ಗಂಟೆಗೆ ಮುನ್ನ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಬೇಕು. 7ಗಂಟೆಗೆ ಭದ್ರತಾ ಕೊಠಡಿಯ ಬಾಗಿಲು ತೆರೆಯಲಾಗುವುದು.

ಮತ ಎಣಿಕೆ ಸ್ಥಳದಲ್ಲಿ ಅಭ್ಯರ್ಥಿಗಳು, ಏಜೆಂಟರು ಪ್ರವೇಶಿಸಲು ಅವಕಾಶವಿ ರುತ್ತದೆ. ಆದರೆ, ಮತ ಎಣಿಕೆ ಕೊಠಡಿಯಲ್ಲಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ.

ಯಾವ ಕ್ಷೇತ್ರಕ್ಕೆ ಎಷ್ಟು ಸುತ್ತು ಮತ ಎಣಿಕೆ?

ಗ್ರಾಮಾಂತರ ಮತಗಟ್ಟೆಗೆ 19 ಸುತ್ತು, ಶಿವಮೊಗ್ಗ ನಗರ 284 ಮತಗಟ್ಟೆಗೆ 21 ಸುತ್ತು, ತೀರ್ಥಹಳ್ಳಿ 258 ಮತಗಟ್ಟೆಗೆ 19 ಸುತ್ತು, ಶಿಕಾರಿಪುರ 234 ಮತಗಟ್ಟೆಗೆ 17 ಸುತ್ತು ಸೊರಬ 239 ಮತಗಟ್ಟೆಗೆ 18 ಸುತ್ತು ಹಾಗೂ ಸಾಗರ 267 ಮತಗಟ್ಟೆಗೆ 20 ಸುತ್ತಿನಲ್ಲಿ ಮತ ಎಣಿಕ ಕಾರ್ಯ ನಡೆಯ ಲಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಮತ ಎಣಿಕೆಗೆ ಪ್ರತಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 6 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬ ಮೇಲ್ವಿ ಚಾರಕ, ಒಬ್ಬ ಸಹಾಯಕ ಮತ್ತು ಒಬ್ಬರಿರಲಿದ್ದಾರೆ. ಮೈಕ್ರೋ ಅಬ್ಸರ್ವರ್ ಇರುತ್ತಾರೆ. ಇವಿಎಂ ಮತ ಎಣಿಕೆ ಪೂರ್ಣಗೊಂಡ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿ ಪ್ಯಾಟ್ ಆಯ್ಕೆ ಮಾಡಿ ಎಣಿಕೆ ಮಾಡ ಲಾಗುವುದು.

ಮತ ಎಣಿಕೆ ದಿನ ವಾಹನಗಳ ಮಾರ್ಗ ಬದಲಾವಣೆ
- ಪಾರ್ಕಿಂಗ್ ಮಾಡಲು ಎಲ್ಲೆಲ್ಲಿ ಜಾಗ ನಿಗದಿ?
ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಅಂದು ತಾತ್ಕಾಲಿ ಕವಾಗಿ ಸಂಚಾರವನ್ನು ಬದಲಿ ಮಾರ್ಗ ದಲ್ಲಿ ಚಲಿಸಲು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗಗಳು : ಬೆಂಗಳೂರು, ಭದ್ರಾವತಿ, ನರಸಿಂಹರಾಜಪುರ ಕಡೆಯಿಂದ ಬರುವ ಮತ್ತು ಹೋಗುವ ಎಲ್ಲ ಭಾರಿ ವಾಹನ ಮತ್ತು ಬಸ್‌ಗಳು, ಕಾರು, ದ್ವಿಚಕ್ರ, ತ್ರಿಚಕ್ರ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸುವುದು. ಹಿರಿಯ ವ್ಯವಹಾರ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌ಸಿ. ಅನುಕೂಲಕ್ಕೆ ತಕ್ಕಂತೆ ಹೊರತು ಪಡಿಸಿರುತ್ತದೆ.
ಪಾರ್ಕಿಂಗ್ ಅವಕಾಶ: ನರಸಿಂಹರಾಜಪುರ ರಸ್ತೆಯ ಎಡಭಾಗ, ಬೈಪಾಸ್ ರಸ್ತೆಗೆ ಹೊಂದಿಕೊಂಡಂತಿರುವ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ಹತ್ತಿರ. ಸಾರ್ವಜ ನಿಕರ ಎಲ್ಲ ವಾಹನಗಳ ನಿಲುಗಡೆಗೆ ಅನುಮತಿ ನೀಡಿದೆ. ಸಂಚಾರ, ಪಾರ್ಕಿಂಗ್ ನಿಷೇಧ: ಎಂಆರ್ ಎಸ್ ಸರ್ಕಲ್ ನಿಂದ ಬಿ.ಎಚ್.ರಸ್ತೆ, . ವಿದ್ಯಾನಗರ, ಮತ್ತೂರು ಕ್ರಾಸ್ ವರೆಗೆ ಸಾರ್ವಜನಿಕರ ವಾಹನಗಳು ಓಡಾಡಿದಂತೆ ನಿಷೇಧಿಸಿದೆ. ಸಹ್ಯಾದ್ರಿ ಕಾಲೇಜಿನ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.
ಚುನಾವಣೆ ಏಜೆಂಟರು ಮತ್ತು ಎಲ್ಲ ಇಲಾಖೆ ಅಧಿಕಾರಿಗಳ ವಾಹನಗಳ ನಿಲು ಗಡೆಗೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು ಮತ್ತು ವಜ್ರ ಮಹೋತ್ಸವ ಕಟ್ಟಡದ ಎದುರು ಪಾರ್ಕಿಂಗ್‌ ಗೆ ಅನುಮತಿ ನೀಡಿದೆ. ಏಜೆಂಟರು ಮತ್ತು ಎಲ್ಲ ಇಲಾಖೆ ಯ ಅಧಿಕಾರಿಗಳ ವಾಹನಗಳ ನಿಲುಗಡೆಗೆ ಬಿ.ಎಚ್‌ ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ಅನುಮತಿ ನೀಡಿದೆ.

ಎಂಆರ್ .ಎಸ್.ಸರ್ಕಲ್ ಹತ್ತಿರವಿರುವ ಕೆಣಬಿ ಸಮುದಾಯ ಭವನ, ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ಮತ್ತು ಹೋಗುವ ಎಲ್ಲ ಭಾರಿ ವಾಹನ, ಬಸ್ ಮತ್ತಿತರೆ ವಾಹನಗಳು ಬಿ.ಎಚ್.ರಸ್ತೆ ಮಾರ್ಗವಾಗಿ ಬಸ್ ನಿಲ್ದಾಣ ಕಡೆ ಬಸ್‌ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲ ಬಸ್‌ ಗಳು ಎಎ ಸರ್ಕಲ್, ಗೋಪಿ ಸರ್ಕಲ್, ಕೆಇಬಿ ಸರ್ಕಲ್ ಮುಖಾಂತರವಾಗಿ ಹೋಗುವುದು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು