ವಿಜಯ ಸಂಘರ್ಷ
ಶಿಕಾರಿಪುರ: ಕಾಂಗ್ರೆಸ್ ಪಕ್ಷದ ಮತದಾರ ರಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್ ಪಕ್ಷದ ಮತದಾರರನ್ನು ವಿಭಜನೆ ಮಾಡಿ ಬಿಜೆಪಿ ಗೆಲುವು ಸಾಧಿಸಲು ತಮ್ಮ ಅನುಯಾಯಿ ಗಳನ್ನು ಪಕ್ಷೇತರ ಅಭ್ಯರ್ಥಿಗಳನ್ನಾಗಿ ಚುನಾವಣೆಯಲ್ಲಿ ಕಣಕ್ಕೆ ಇಳಿಸಿದೆ. ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಪಕ್ಷದ ಬಿ ಟೀಮ್ ರವರಾಗಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಆರೋಪಿಸಿದರು.
ಬಿಜೆಪಿ ಪಕ್ಷದಲ್ಲಿ ಅಧಿಕಾರ ಸಿಗಲಿಲ್ಲ ವೆಂದು ಕಾಂಗ್ರೆಸ್ ಪಕ್ಷಕ್ಕೆ ಬಂದು ಮತ್ತೆ ಅಧಿಕಾರ ಕ್ಕಾಗಿ ಬಿಜೆಪಿ ಪಕ್ಷಕ್ಕೆ ಹೋಗುವ ಮುಖಂಡರಿಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸು ವವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಉಚ್ಚಾಟನೆಯ ಕ್ರಮ ಜರುಗಿಸಿದೆ ಇದನ್ನು ನಾವು ಸ್ವಾಗತಿಸುತ್ತೇವೆ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಪಡಿತರದಾರರಿಗೆ 10 ಕೆಜಿ ಅಕ್ಕಿ, ಉಚಿತ 200 ಯೂನಿಟ್ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿಯರಿಗೆ 2000 ಮಾಶಾಸನ ಯೋಜನೆಗಳು ಜನರನ್ನು ಮತದಾರರನ್ನು ಆಕರ್ಷಿಸಿದೆ. ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾ ರದ ಬಗ್ಗೆ ಮಹಿಳೆಯರು ಮತದಾರರು ಆಕರ್ಷಕರಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆ. ಕೆಲವು ಕಿಡಿಗೇಡಿಗಳು ಪಕ್ಷದ್ರೋಹಿಗಳು ಬಿಜೆಪಿ ಪಕ್ಷದವರೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಪರ ಅಪಪ್ರಚಾರ ಮಾಡುತ್ತಿದ್ದಾರೆ.
ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಹೊರಡಿಸಿರುವ ಪ್ರಣಾಳಿಕೆಯಲ್ಲಿ ಆರ್ ಎಸ್ ಎಸ್ ನ ಸಿದ್ದಾಂತವಿದೆ, ಕೇವಲ ಮತದಾರರನ್ನು ಸೆಳೆಯಲು ಪೊಳ್ಳು ಭರವಸೆಗಳ ಪ್ರಣಾಳಿಕೆಯನ್ನು ಹೇಳುತ್ತಿ ದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿ ಸುವ ಮೂಲಕ ಪಕ್ಷ ನಿಷ್ಠೆ ತೋರಲಿದ್ದಾರೆ. ಎಂದರು.
ಈಗಲೂ ಕೆಲವು ಪಕ್ಷೇತರರು ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿ ಗಳನ್ನು ಹಿಡಿದು ಮತ ಕೇಳುತ್ತಿರುವುದು ಕಂಡು ಬಂದಿದೆ. ಕೆಲವು ಬೂತ್ ಮಟ್ಟದ ಕಾರ್ಯಕರ್ತರಿಗೆ ಮುಖಂಡರಿಗೆ ಹೆದರಿಸಿ ಬೆದರಿಸಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗದಂತೆ ತಡೆಹಿಡಿಯಲಾಗುತ್ತಿದೆ. ಕಾರ್ಯಕರ್ತರು ಯಾವುದೇ ಬೆದರಿಕೆಗೆ ಅಂಜದೆ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಹಾಗೂ ನಮಗೆ ದೂರು ಹೇಳಿದ್ದಲ್ಲಿ ಕಾರ್ಯಕರ್ತರ ರಕ್ಷಣೆಗೆ ನಾವು ಸಿದ್ದರಿದ್ದೇವೆ. ತಾಲೂಕಿನ ಮತದಾರರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗೋಣಿ ಪ್ರಕಾಶ್, ಜಗದೀಶ್ ನಾಯ್ಕ್, ಸಂಧಿ ಮನೆ ಶಿವು, ಗೋಣಿ ಸಂದೀಪ್, ಪ್ರಕಾಶ್, ರೂಬಿ ಸೈಫು, ಶ್ರೀಕಾಂತ್ ಜಕ್ಕಿನಕೊಪ್ಪ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
Shikaripura News