ವಿಜಯ ಸಂಘರ್ಷ
ಸಾಗರ: ಕಾಂಗ್ರೆಸ್ ಪಕ್ಷದಿಂದ ಗೋಪಾಲ ಕೃಷ್ಣ ಬೇಳೂರು ಜಯಗಳಿಸಿದ ಹಿನ್ನೆಲೆ ಯಲ್ಲಿ ಕ್ಷೇತ್ರದಾದ್ಯಂತ ವಿಜಯೋತ್ಸವಆಚರಿಸಲಾಯಿತು.
ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆಲುವನ್ನು
ಸಂಭ್ರಮಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಕೈ ಬಾವುಟ ದ ಜೊತೆಗೆ ಕೇಸರಿ ಬಾವುಟ ವನ್ನು ಸಹ ಹಾರಿಸಿ ಗೆಲು ವನ್ನು ಸಂಭ್ರಮಿಸಿದ್ದು ವಿಶೇಷವಾಗಿತ್ತು.
ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ
ಬಹುತೇಕ ಕಾಂಗ್ರೇಸ್ ಕಾರ್ಯಕರ್ತ ರು ಕೇಸರಿ ಶಾಲು ಧರಿಸಿ ಕಾಂಗ್ರೇಸ್ ಪಕ್ಷಕ್ಕೆ ಮತ್ತು ಗೋಪಾಲಕೃಷ್ಣ ಬೇಳೂರಿಗೆಜಯಕಾರ ಹಾಕಿದರು.
ಕಾಂಗ್ರೇಸ್ ಕಚೇರಿ ಎದುರು ಸೇರಿದ್ದ ಅಪಾರಸಂಖ್ಯೆಯ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸುವ ಜೊತೆಗೆ
ಕಾಂಗ್ರೇಸ್ ಕಾರ್ಯಕರ್ತರು ಕೇಸರಿ
ಶಾಲು ಧರಿಸಿ ವಿಜಯೋತ್ಸವ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಕೆಲವು ಪ್ರಮುಖರು ಭೇಟಿ ನೀಡಿ ಶುಭಾಶಯ ಕೋರಿದರು.
ಹರತಾಳು ಹಾಲಪ್ಪ ಅವರ ನಡೆಯಿoದ ಬೇಸತ್ತು ಬಿಜೆಪಿಯಿಂದ ದೂರ ಉಳಿದು ಗೋಪಾಲಕೃಷ್ಣ ಬೇಳೂರು ಪರವಾಗಿ ನೇರವಾಗಿಯೆ ಪ್ರಚಾರಕ್ಕೆ ಇಳಿದಿದ್ದ ಸಮಾನ ಮನಸ್ಕ ನಾಗರೀಕ ವೇದಿಕೆ ಬೇಳೂರು ಗೆಲುವನ್ನು ಸಂಭ್ರಮಿಸಿದೆ. ನಗರದ ರಾಣಿ ಚೆನ್ನಮ್ಮಾಜಿ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಿದ ತಂಡವು ಹರತಾಳು ಹಾಲಪ್ಪ ಅವರ ನಡೆಯೆ
ಸೋಲಿಗೆ ಕಾರಣವಾಗಿದೆ.
ರಾಜ್ಯದಲ್ಲಿ ನಿಷ್ಟಾವಂತ ಕಾರ್ಯಕರ್ತ ರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ್ ಕುಂಠೆ, ಕೃಷ್ಣ ಮೂರ್ತಿ ಎಸ್.ವಿ.ಸುದರ್ಶನ್, ಕಸ್ತೂರಿ ಸಾಗರ್, ಅರುಣಾ ವಿನಾಯಕ್, ಸತೀಶ್ ಹಕ್ರೆ, ಮಂಕಳಲೆ ರವಿ, ಸಮರ್ಥ ಕಲ್ಮನೆ, ರಾಘವೇಂದ್ರ ಕಾಮತ್ ಇನ್ನಿತರರು ಹಾಜರಿದ್ದರು.
ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಅವರ ದುರಹಂಕಾರ ವರ್ತನೆಯೆ ಅವರ ಸೋಲಿಗೆ ಕಾರಣವಾಗಿದೆ. ಮತದಾರರುನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಸಮಗ್ರ ಅಭಿವೃದ್ದಿಗೆ ಅವಕಾಶ ನೀಡಿದ್ದಾರೆ.
ಕ್ಷೇತ್ರವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡುವ ಜೊತೆಗೆ ಶಿಕ್ಷಣ,ಆರೋಗ್ಯಕ್ಕೆ ವಿಶೇಷ ಆದ್ಯತ ನೀಡಲಾಗು ತ್ತದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಶ್ರಮ ನನ್ನ ಗೆಲುವಿನಲ್ಲಿಗಮನಾರ್ಹವಾಗಿದೆ. ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಪ್ರಯತ್ನ ನಡೆಸುತ್ತೇನೆ.
ಅಧಿಕಾರದ ಆಸೆಗಾಗಿ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದವರಿಗೆ ಮತದಾರ ತಕ್ಕ ಉತ್ತರ ನೀಡಿದ್ದಾನೆ ಎಂದು ವಿಜೇತ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು
ಅಭಿಪ್ರಾಯಿಸಿದ್ದಾರೆ.
ಕಾಂಗ್ರೇಸ್ ಪಕ್ಷ ಪ್ರಮುಖವಾದ ಗ್ಯಾರೆಂಟಿ ಯನ್ನು ರಾಜ್ಯದ ಮತದಾರರಿಗೆ ನೀಡಿದ್ದು
ಚುನಾವಣೆಯಲ್ಲಿ ಗೆಲ್ಲಲು ಪ್ರಮುಖ
ಕಾರಣವಾಗಿದೆ. ಸುಮಾರು 130 ಸ್ಥಾನ ಗಳನ್ನು ಕಾಂಗ್ರೇಸ್ ಗೆಲ್ಲುವ ಹಂತಕ್ಕೆ ಬಂದಿದ್ದು ಆಡಳಿತ ರೂಢ ಬಿಜೆಪಿ ತನ್ನ ಆಡಳಿತ ವೈಫಲ್ಯದಿಂದ ತೀರ ಕಡಿಮೆ ಸ್ಥಾನ ಪಡೆದಿದೆ ಎಂದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :+919743225795