ವಿಜಯ ಸಂಘರ್ಷ
ಶಿವಮೊಗ್ಗ: ಸಕಾಲದಲ್ಲಿ ತಪಾಸಣೆ ಮಾಡಿಸಿ ಕೊಂಡಲ್ಲಿ ಕ್ಯಾನ್ಸರ್ ಗುಣಪಡಿ ಸಲು ಸಾಧ್ಯವಿದೆ. ಕ್ಯಾನ್ಸರ್ ಬಗ್ಗೆ ಭಯ ಬೇಡ, ಆದರೆ ಪ್ರತಿಯೊಬ್ಬರು ಕ್ಯಾನ್ಸರ್ ಕುರಿತು ಜಾಗೃತಿ ಹೊಂದಬೇಕು ಎಂದು ಮಣಿಪಾಲ್ ಆಸ್ಪತ್ರೆ ಕ್ಯಾನ್ಸರ್ ತಜ್ಞ ಡಾ. ದೇವರಾಜ್ ಹೇಳಿದರು.ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಆರೋಗ್ಯ ಜಾಗೃತಿ ವಿಷಯ ಕುರಿತು ಮಾತನಾಡಿ, ಸಾರ್ವಜನಿಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ತಿಳವ ಳಿಕೆ ಅವಶ್ಯಕ. ಕಾಯಿಲೆ ಬಂದ ಸಂದರ್ಭ ಗಳಲ್ಲಿ ಜಾಗೃತಿ ಇದ್ದಲ್ಲಿ ಶೀಘ್ರದಲ್ಲೇ ಗುಣ ಪಡಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಸಾರ್ವಜನಿಕರು ಆರೋಗ್ಯ ಸದೃಢವಾಗಿ ಟ್ಟುಕೊಳ್ಳಲು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು. ದೈಹಿಕ ವ್ಯಾಯಾಮ, ಯೋಗ, ಪ್ರಾಣಾಯಾಮ ಮಾಡುವುದ ರಿಂದ ಆರೋಗ್ಯ ಚೆನ್ನಾಗಿರುತ್ತದೆ. ಇತ್ತೀಚೀನ ಆರೋಗ್ಯ ವರದಿ ಪ್ರಕಾರ ಯುವಜನರಲ್ಲಿನ ದುಶ್ಚಟಗಳಿಂದ ಕ್ಯಾನ್ಸರ್ ಕಾಯಿಲೆ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.
ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಿ ತಪಾಸಣೆ ಮಾಡಿಸಿಕೊಂಡರೆ ಗುಣಪಡಿಸಲು ಸಾಧ್ಯವಿದೆ. ಮಹಿಳೆಯರ ಲ್ಲಿಯೂ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿದೆ. ವೈದ್ಯಕೀಯ ಕ್ಷೇತ್ರದ ತಂತ್ರಜ್ಞಾನದಲ್ಲಿ ಮಹತ್ತರ ಅಭಿವೃದ್ಧಿ ಆಗಿದ್ದು, ಕ್ಯಾನ್ಸರ್‌ಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಿದೆ. ರೋಗಿಗಳು ಆತ್ಮವಿಶ್ವಾಸದಿಂದ ಇದ್ದಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾಹಬಹುದು ಎಂದು ಹೇಳಿದರು.
ಪ್ರತಿಯೊಬ್ಬರು ಆರೋಗ್ಯ ಜಾಗೃತಿ ಹೊಂದುವ ಜತೆಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಪ್ರಯತ್ನಿಸಬೇಕು. ಉತ್ತಮ ಆಹಾರ ಕ್ರಮ ಹಾಗೂ ಜೀವನ ಶೈಲಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಟಿವಿ ನಿರೂಪಕ ಜಿ.ವಿಜಯ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಕಾನೂರು, ಕ್ಯಾಮೆರಾ ಮಾನ್ ಶ್ರೀಕಾಂತ್, ನಿರೂಪಕಿ ಗೌತಮಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
Cancer camp Shivamogga