ವಿಜಯ ಸಂಘರ್ಷ
ಶಿಕಾರಿಪುರ: ವಿಧಾನಸಭಾ ಚುನಾ ವಣೆ ಯಲ್ಲಿ ಎಪ್ಪತ್ತು ಸಾವಿರಕ್ಕೂ ಅಧಿಕ ಮತಗಳನ್ನು ನೀಡಿದ ಸ್ವಾಭಿ ಮಾನಿ ಮತದಾರರಿಗೆ ಮುಖಂಡರಿಗೆ ಚಿರಋಣಿ ಆಗಿದ್ದೇನೆ ಎಂದು ಪಕ್ಷೇತರ ಪರಾಜಿತ ಅಭ್ಯರ್ಥಿ ನಾಗರಾಜ್ ಗೌಡ ಹೇಳಿದರು.
ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಮತದಾರರಿಗೆ ಏರ್ಪಡಿ ಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಬಿಜೆಪಿಗರು ಭ್ರಷ್ಟಾ ಚಾರದ ಹಣಬಲದಲ್ಲಿ ಚುನಾವಣೆ ನಡೆಸಿದರೆ ಸ್ವಾಭಿಮಾನಿ ಮತದಾರರು ಚುನಾವಣೆಯಲ್ಲಿ ನನಗೆ ದೇಣಿಗೆ ನೀಡುವ ಮೂಲಕ 71 ಸಾವಿರ ಮತಗಳನ್ನು ನೀಡಿ ಆಶೀರ್ವದಿಸಿ ದ್ದಾರೆ. ನಾವು ಸೋತಿಲ್ಲ ಜನರ ಸ್ವಾಭಿಮಾನ ಉಳಿದಿದೆ, ಬಿಜೆಪಿಯ ಹಣದ ದುರಹಂಕಾರ ಇಳಿದಿದೆ, ಸಂಸತ್ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.
ವಿರೋಧ ಪಕ್ಷಗಳ ಅಪಪ್ರಚಾರದಿಂದ ಕಡಿಮೆ ಅಂತರದಲ್ಲಿ ಜಯಗಳಿಸಿದ್ದೀವಿ ಎಂದು ಸಂಸದರು ಹೇಳುತ್ತಿದ್ದಾರೆ ಆದರೆ ತಾಲೂಕಿನಲ್ಲಿ ಯಾವ ಅಭಿ ವೃದ್ಧಿ ಮಾಡಿ ದ್ದೀರಿ ಚುನಾವಣೆಯ ಗಿಮಿಕ್ ಗಾಗಿ ನೀರಾವರಿ ಯೋಜನೆ ಗಳನ್ನು ಮಾಡಿದ್ದೇವೆ ಎಂದು ಚುನಾ ವಣೆಯ ವೇಳೆ ಕೆರೆ ನೀರನ್ನು ಬಿಟ್ಟು ಮತದಾರರ ಮೂಗಿಗೆ ತುಪ್ಪ ಸವರಿದ ನೀವು ಚುನಾವಣೆ ಮುಗಿದ ನಂತರ ವೇ ನೀರು ಬಂದ್ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ತಾಲೂಕಿನ ಜನತೆ ಯು ಪಕ್ಷಾತೀತವಾಗಿ ಜಾತ್ಯಾತೀತ ವಾಗಿ ಸಹಕಾರ ನೀಡಿದ ನಿಮ್ಮೆಲ್ಲರ ಋಣ ನನ್ನ ಮೇಲಿದೆ ನಿಮ್ಮ ಋಣ ತೀರಿಸಲು ನಿಮ್ಮೆಲ್ಲರ ಸೇವೆಗೆ ನಾನು ಬದ್ಧ. ಸಾರ್ವಜನಿಕ ಕಚೇರಿಗಳಲ್ಲಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಸಾರ್ವಜ ನಿಕರ ಸೇವೆಗಳಿಗೆ ನಮ್ಮ ಕಚೇರಿ 24 ಗಂಟೆಯ ಸೇವೆಗೆ ಸದಾ ತೆರೆದಿರುತ್ತದೆ.
ಶೀಘ್ರದಲ್ಲಿಯೇ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಬರಲಿದೆ ನಾವೆಲ್ಲರೂ ಸಮರ್ಥವಾಗಿ ಚುನಾವಣೆ ಎದುರಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿ ಕಾರಕ್ಕೆ ಬಂದಿದೆ. ಮಧು ಬಂಗಾರಪ್ಪ ರವರು ಸಚಿವರಾಗಿದ್ದಾರೆ ಕಾರ್ಯಕ ರ್ತರಿಗೆ ಬಿಜೆಪಿ ಹಿಂಸೆ ನೀಡಿದರೆ ಬಿಜೆಪಿಯ ಕಚೇರಿಯ ಮುಂದೆ ಪ್ರತಿಭಟಿಸುತ್ತೇವೆ ಎಂದು ಬಿಜೆಪಿಗೆ ಎಚ್ಚರಿಸಿದರು.
ಮತದಾರರನ್ನು ಹಣದಿಂದ ಖರೀದಿಸು ತ್ತೇವೆ ಎಂಬ ಭ್ರಮೆಯಿಂದ ಅಪ್ಪ ಮಕ್ಕಳು ಇನ್ನಾದರೂ ಹೊರಬರಬೇಕು 1983 ರಿಂದ 2023ರ ವರೆಗೆ ಕ್ಷೇತ್ರದ ಜನತೆಗೆ ಏನು ಅಭಿವೃದ್ಧಿ ಮಾಡಿದ್ದೀರಿ, ಶಿಕಾರಿಪುರಕ್ಕೆ ಬಂದಾಗ ಹೇಗೆ ಇದ್ದೀರಿ ಈಗ ಹೇಗಿದ್ದೀರಿ? ಎಂದು ಆತ್ಮವಲೋ ಕನ ಮಾಡಿಕೊಳ್ಳು ವಂತೆ ಬಿಎಸ್ ವೈ ಮತ್ತು ಪುತ್ರರಿಗೆ ಸಲಹೆ ನೀಡಿದರು.
ಮುಖಂಡ ರಾಘವೇಂದ್ರ ನಾಯ್ಕ್ ಮಾತನಾಡಿ ಬಿಜೆಪಿಯವರ ದಬ್ಬಾಳಿಕೆ ಯ ಬಗ್ಗೆ ಕಿಡಿಕಾರಿದರು, ಚುನಾವಣೆ ಯಲ್ಲಿ ಸಮಾಜದ ಬಾಂಧವರು ಸೇರಿದಂತೆ ಎಲ್ಲಾ ವರ್ಗದವರು ಚುನಾವಣೆಯಲ್ಲಿ ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡಿದ ಮತದಾ ರರಿಗೆ ಅಭಿನಂದನೆ ತಿಳಿಸಿದರು.
ಸಮಾರಂಭದಲ್ಲಿ ತಾಲೂಕಿನ ಸಹಸ್ರಾರು ಸಂಖ್ಯೆಯ ಕಾರ್ಯಕರ್ತ ರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಪಾರಿವಾಳದ ಶಿವರಾಂ, ನಗರದ ರವಿಕಿರಣ್, ಶಿವು ಹುಲ್ಮಾರ್, ಉಮೇಶ್ ಮಾರವಳ್ಳಿ, ಅಂಬಾರ ಗೊಪ್ಪದ ರಾಜಣ್ಣ, ಗಂಗಾನಾಯ್ಕ್, ನಿಂಗಪ್ಪ ವಕೀಲ, ಮತ್ತಿತರರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+91 9743225795
Tags:
Shikaripura News