ವಿಜಯ ಸಂಘರ್ಷ
ಭದ್ರಾವತಿ : ಬದಲಾವಣೆ ಜಗದ ನಿಯಮ ಎಂಬoತೆ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಕಾರ್ಖಾನೆಗಳ ಪುನಶ್ಚೇತನ, ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣ ಸೇರಿದಂತೆ ಹತ್ತಾರು ಜನಪರ ಯೋಜನೆಗಳು ಹಾಗೂ ಬಡವರು, ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಯಲ್ಲಿ ನನಗೆ ಒಂದು ಮತ ನೀಡುವ ಮೂಲಕ ಕರ್ತವ್ಯ ಮಾಡಲು ಅವಕಾಶ ಮಾಡಿಕೊಡಿ ಎಂದು ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮತದಾರರಿಗೆ ಮನವಿ ಮಾಡಿದರು.ಇಂದು ಸಂಜೆ ಅಪ್ಪರ್ ಹುತ್ತಾ, ನಂದೀಶ್ವರ iuದೇವಸ್ಥಾನ, ಸಂಜಯ್ ಕಾಲೋನಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಂಗೋಟೆ ರುದ್ರೇಶ್ ಪ್ರಚಾರ ನಡೆಸಿ ಮತ ಯಾಚಿಸಿದರು.7
ಈ ಬಾರಿ ಹೇಗಾದರೂ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಪಕ್ಷ ಆಯಾ
ಭಾಗದ ಪಕ್ಷದ ಶಕ್ತಿ ಕೇಂದ್ರಗಳಲ್ಲಿ, ಬೂತ್‌ಗಳಲ್ಲಿ ವ್ಯಾಪಕ ಪ್ರಚಾರಕ್ಕೆ ಗಮನ ನೀಡಿದೆ. ಬಿಜೆಪಿ ಪಕ್ಷದ ಮುಖಂಡರು,
ಹಿತೈಷಿಗಳು, ಕಾರ‍್ಯಕರ್ತರೊಂದಿಗೆ ವ್ಯಾಪಕ ಪ್ರಚಾರ ಕಾರ‍್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
+919743225795 0 ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
Tags
BJP Road show news