ಸಾರ್ವಜನಿಕರ ನೀರಿಕ್ಷೆಯಂತೆ ಅಭಿವೃದ್ಧಿ ಕೆಲಸ: ಎಸ್.ಎನ್.ಚನ್ನಬಸಪ್ಪ

ವಿಜಯ ಸಂಘರ್ಷ
ಶಿವಮೊಗ್ಗ: ಮುಂದಿನ ಐದು ವರ್ಷ ಗಳಲ್ಲಿ ಶಿವಮೊಗ್ಗದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಸಾರ್ವಜನಿ ಕರ ನೀರಿಕ್ಷೆ ಯಂತೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಸಂಯೋ ಜಿತ ಸಂಘ ಸಂಸ್ಥೆಗಳ ಸಹಯೋಗ ದಲ್ಲಿ ಆಯೋಜಿಸಿದ್ದ ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ಅಭಿವೃದ್ಧಿ ಕೆಲಸಗಳ ಕಾರ್ಯ ಎಲ್ಲ ಶಾಸಕ ರಿಂದಲೂ ನಿರಂತರವಾಗಿ ಮುಂದುವರೆ ಯುತ್ತದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಠಿ ಯಿಂದ ಎಲ್ಲ ಶಾಸಕರು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಿವಿಧ ರೀತಿಯ ಸಮಸ್ಯೆಗಳಿದ್ದು, ಎಲ್ಲ ಶಾಸ ಕರು ಪರಸ್ಪರ ಒಟ್ಟಾಗಿ ಬೆಂಬಲಿಸಿ ರಾಜ್ಯಮಟ್ಟ ದಲ್ಲಿ ಜಿಲ್ಲೆಯ ಬಗ್ಗೆ ಗಮನ ಸೆಳೆಯುತ್ತೇವೆ. ಜಿಲ್ಲೆಯ ಅವಶ್ಯಕತೆ ಹಾಗೂ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತ ದಲ್ಲಿ ಸಕಲ ರೀತಿ ಪ್ರಯತ್ನ ನಡೆಸುತ್ತೇನೆ ಎಂದರು.

ನಗರ ವಿಧಾನಸಭಾ ದೃಷ್ಠಿಯಿಂದ ಸಾರ್ವ ಜನಿಕರ ಅಭಿಪ್ರಾಯ ಸಂಗ್ರ  ಹಿಸುತ್ತಿದ್ದು, ಆಗಬೇಕಿರುವ ಕೆಲಸಗಳ ಬಗ್ಗೆ ಸಮಗ್ರ ಸಮಾಲೋಚನೆ ನಡೆ ಸುತ್ತೇನೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿ ಗಳೊಂದಿಗೆ ಶೀಘ್ರದಲ್ಲಿಯೇ ಚರ್ಚಿ ಸುತ್ತೇನೆ. ಶಿವಮೊಗ್ಗ ಕೈಗಾರಿಕಾ ಹಾಗೂ ಉದ್ಯಮ ದೃಷ್ಠಿಯಿಂದ ಆಗಬೇಕಿರುವ ಕೆಲಸಗಳಿಗೆ ಆದ್ಯತೆ ನೀಡಲಾಗು ವುದು ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನೇಕ ನಾಯಕರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಪ್ರತಿ ಕ್ಷೇತ್ರದ ಶಾಸಕರು ಜಿಲ್ಲೆಯ ಸಮಗ್ರ ದೃಷ್ಠಿಕೋನ ಗಮನ ದಲ್ಲಿಸಿಕೊಡು ಕೆಲಸ ಮಾಡುವುದ ರಿಂದ ಜಿಲ್ಲೆಯ ಅಭಿವೃದ್ಧಿವೇಗ ಪಡೆ ದುಕೊಳ್ಳು ತ್ತದೆ ಎಂದು ತಿಳಿಸಿದರು.

ಉದ್ಯಮ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಉತ್ತಮ ಅವಕಾಶಗಳಿದ್ದು, ಎಲ್ಲ ಶಾಸಕರು ಒಟ್ಟಾಗಿ ರಾಜ್ಯ ಸರ್ಕಾರಕ್ಕೆ ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಡ ಹಾಕಬೇಕು. ಎಲ್ಲರು ಒಟ್ಟಾಗಿ ಕೆಲಸ ಮಾಡುವುದರಿಂದ ಜಿಲ್ಲೆಯು ರಾಜ್ಯದಲ್ಲಿಯೇ ಅತ್ಯಂತ ವೇಗಗವಾಗಿ ಅಭಿವೃದ್ಧಿಯಾಗುವ ಜಿಲ್ಲೆಯಾಗಲಿದೆ ಎಂದರು.

ಜಿಲ್ಲೆಯ ಬೇರೆ ಬೇರೆ ವಿಧಾನಸಭಾ ಕ್ಷೇತ್ರ ದಲ್ಲಿ ಬೇರೆ ಬೇರೆ ಪಕ್ಷಗಳಿಂದ ಬೇರೆ ಬೇರೆ ರೀತಿಯ ತತ್ವ-ಸಿದ್ಧಾಂತ ಗಳನ್ನು ಇಟ್ಟು ಕೊಂಡು ಚುನಾವಣೆ ಯಲ್ಲಿ ವಿಜಯಗಳಾಗಿದ್ದಾರೆ ಅವರ ವರ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಿ ಜನತೆಯ ಆಶೋತ್ತರ ಗಳಿಗೆ ಸ್ಪಂದಿಸುವ ಜವಾಬ್ದಾರಿ ಆಯಾ ಕ್ಷೇತ್ರದ ವಿಧಾನಸಭಾ ಸದಸ್ಯರಾದ್ದ ಗಿರುತ್ತೆ ಆದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಪ್ರಶ್ನೆ ಬಂದಾಗ ಎಲ್ಲಾ ಶಾಸಕರು ಒಂದಾಗಿ ಕೆಲಸ ಮಾಡಿ ಯಶಸ್ಸು ಗಳಿಸ ಬೇಕಾಗುತ್ತದೆ ಎಂದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾ ರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿ ನಾಥ್, ಕಾರ್ಯದರ್ಶಿ ವಸಂತ ಹೋಬಳಿ ದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ ಕುಮಾರ್, ಮಾಜಿ ಅಧ್ಯಕ್ಷ ಡಿ.ಎಂ. ಶಂಕರಪ್ಪ, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ, ರಮೇಶ್ ಹೆಗಡೆ, ಬಿ.ಆರ್.ಸಂತೋಷ್, ಗಣೇಶ್ ಎಂ.ಅಂಗಡಿ, ಪ್ರದೀಪ್, ಮಧುಸೂದನ್ ಐತಾಳ್, ಉದಯ್‌ ಕುಮಾರ್, ಮರಿ ಸ್ವಾಮಿ, ಇ.ಪರಮೇ ಶ್ವರ್, ಸುಕುಮಾರ್, ಸಂಯೋಜಿತ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ +919743225795

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು