ವಿಜಯ ಸಂಘರ್ಷ
ಭದ್ರಾವತಿ: ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಮತ್ತು ಬಯೋಮೆಟ್ರಿಕ್ ಅಳವಡಿಸುವಂತೆ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ಆಗ್ರಹಿಸಿದ್ದಾರೆ.
ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ, ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಶಾಲೆಗಳು ಆರಂಭ ಗೊಂಡು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಶಾಲೆಗಳಲ್ಲಿ ಶಿಕ್ಷಕರು ಪಾಠ ಪ್ರವ ಚನ ಮಾಡದ ಶಿಕ್ಷಕರು ತಮ್ಮ ವೈಯ ಕ್ತಿಕ ಕೆಲಸ ನಿಮ್ಮಿತ್ತ ಶಾಲೆಯಿಂದ ಹೊರನಡೆದು ಪಾಠ ಮಾಡುವಲ್ಲಿ ನಿರಾಸಕ್ತಿ ತೋರುತ್ತಿರು ವುದು ವಿಪರ್ಯಾಸ. ಇಂತಹ ದುಸ್ಥಿತಿ ಯಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆ ಹೆಚ್ಚಾಗಿದೆ ಎಂದರು.
ಬಿಇಓ ಕಚೇರಿ ಸಮೀಪದಲ್ಲಿರುವ ಸಂಚಿಯ ಹೊನ್ನಮ್ಮ ಶಾಲೆಯ ಶಿಕ್ಷಕ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಇವರಿಗೆ ಶಿಕ್ಷಕ ವೃತ್ತಿ ಗಿಂತ ಸಂಘದ ಜವಾಬ್ದಾರಿ ಹೆಚ್ಚಾಗಿದೆ. ಸಂಘ ಸಂಸ್ಥೆಗಳು ಒಂದು ಖಾಸಗಿ ಸಂಸ್ಥೆಗಳಷ್ಠೆ ಎಂಬುದು ಸಿದ್ದಬಸಪ್ಪ ತಿಳಿಯಲಿ. ಅವರ ವೈಯಕ್ತಿಕ ಕೆಲಸ ಕಾರ್ಯಗಳನ್ನು ಶಾಲೆ ಸಮಯ ಮುಕ್ತಾಯ ವಾದ ನಂತರ ಗಮನಹರಿಸಲಿ ಎಂದು ಕಿಡಿಕಾರಿದರು.
ಎಲ್ಲಾ ಅವ್ಯವಸ್ಥೆ ಸರಿಪಡಿಸಲು ಕೂಡಲೆ ಸರ್ಕಾರಿ ಶಾಲೆಗಳು ಮತ್ತು ಪ್ರೌಢಶಾಲೆಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಮತ್ತು ಸಿಸಿಟಿವಿಗಳನ್ನು ಅಳವಡಿಸುವಂತೆ ಒತ್ತಾಯಿಸಿದರು.
ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಿ ಎಂದು ಅಗ್ರಹಿಸಿದ ರಾಜು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಕೂಡಲೇ ಗಮನ ಹರಿಸಿ ಶಾಲೆಗೆ ಬಂದು ಹೊರಹೋಗುವ ಶಿಕ್ಷಕರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :+919743225795
Tags:
Bhadravati News B.N.Raju