ವಿಜಯ ಸಂಘರ್ಷ
ಸಾಗರ: ಜಗತ್ತಿನ ಕೆಲವೇ ಕೆಲವು ಕೃಷಿ ಆಧಾರಿತ ರಾಷ್ಟಗಳಲ್ಲಿ ಭಾರತವೂ ಒಂದು. ನಮ್ಮ ದೇಶದ ಸಮಗ್ರ ಪ್ರಗತಿ ದೇಶದ ಕೃಷಿ ಉತ್ಪನ್ನಗಳನ್ನು ಆಧರಿಸಿದೆ ಎಂದು ಕರ್ನಾಟಕದ ರಾಜ್ಯಪಾಲ ಥ್ಯಾವರ್ ಚಂದ್ ಗೆಲ್ಹೋಟ್ ತಿಳಿಸಿದರು.
ಅವರು ಶುಕ್ರವಾರ ಆನಂದಪುರಂ ಸಮೀಪದ ಇರುವಕ್ಕಿಯಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಆವರಣ ದಲ್ಲಿ 8 ನೇ ವರ್ಷದ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರಧಾನ ಮಾಡಿ ಮಾತನಾಡುತ್ತಿದ್ದರು.
ಕೃಷಿ ಪದವಿಧರರು ರೈತರಲ್ಲಿ ಜ್ಞಾನ ವಿಸ್ತರಿಸುವ ಕಾರ್ಯ ನಡೆಸಬೇಕು.ರೈತರು ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಉಪಕರಣ ಬಳಸಿ ಕೃಷಿ ನಡೆಸುವಂತೆ ಪ್ರೇರೇಪಿಸಬೇಕು ಎಂದರು. ಆರ್ಥಿಕವಾಗಿ ಜಗತ್ತಿನ ಮುಂದುವರೆದ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಭವಿಷ್ಯದಲ್ಲಿ ಭಾರತ ಪ್ರಥಮ ಸ್ಥಾನಕ್ಕೇರು ವುದು ಯುವಕರ ಶ್ರಮ ಮತ್ತು ಇಚ್ಛಾಶಕ್ತಿ ಯನ್ನು ಆಧರಿಸಿದೆ ಎಂದರು.
ಕೃಷಿ ವಿವಿ ಘಟಿಕೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪನವರ ಹೋರಾಟದ ಬದುಕು ಮತ್ತು ಶ್ರೇಷ್ಠ ಸಾಧನೆ ಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಡ್ಯೂರಪ್ಪ ಕೃಷಿ ಕೇತ್ರದಲ್ಲಿ ಇನ್ನಷ್ಟು ವೈಜ್ಞಾನಿಕ ಸಂಶೋಧನೆ ಅಗತ್ಯವಿದೆ. ರೈತರ ಶ್ರಮ ಕಡಿಮೆ ಮಾಡುವ ಮತ್ತು ರೈತರ ಉತ್ಪನ್ನಗಳಿಗೆ ಉತ್ಕೃಷ್ಟ ಬೆಲೆ ದೊರೆಯುವಂತಾಗಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ಕೃಷಿ ಪದವಿಧದರು ನಿರಂತರ ಶ್ರಮ ವಹಿಸಬೇಕು ಎಂದರು.
ಕೃಷಿ ಸಚಿವ ಚೆಲುವರಾಯ ಸ್ವಾಮಿ ಮಾತನಾಡಿ ಮಂಡ್ಯ ಜಿಲ್ಲೆಯಲ್ಲಿ ಜನಿಸಿ ಶಿವಮೊಗ್ಗ ಜಿಲ್ಲೆಯನ್ನು ಕಾರ್ಯ ಕ್ಷೇತ್ರ ವಾಗಿಸಿಕೊಂಡು ಯಡ್ಯೂರಪ್ಪನವರು ಸಾಧಿಸಿದ ಸಾಧನೆ ಶ್ಲಾಘಮೀಯ ಎಂದರು. ತಮ್ಮಿಬ್ಬರ ಪಕ್ಷ ಭಿನ್ನವಾಗಿದ್ದರೂ ಸಹ ರೈತ ಪರ ಕಾಳಜಿಯ ಕಾರ್ಯ ಮತ್ತು ಹೋರಾಟ ದಲ್ಲಿ ತಾತ್ವಿಕವಾಗಿ ಒಂದಾಗಿ ಶ್ರಮಿಸಿದ್ದನ್ನು ಸ್ಮಿರಿಸಿಕೊಂಡರು. ಈ ವಿ.ವಿ. ಮೂಲ ಸೌಕರ್ಯ ಹೆಚ್ಚಿಸಲು ಅಗತ್ಯ ಅನುದಾನ ವನ್ನು ಸರ್ಕಾರದಿಂದ ದೊರಕಿಸಿ ಕೊಡುವ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅನುಪ ಸ್ಥಿತಿಯಲ್ಲಿ ಅವರ ಧ್ವನಿ ಮುದ್ರಿತ ವಿಡಿಯೋ ಪ್ರದರ್ಶನ ಮೂಲಕ ಭಾಷಣ ಪ್ರಸಾರ ಮಾಡಲಾಯಿತು.
ವಿವಿ ಕುಲಪತಿ ಡಾ.ಆರ್.ಸಿ ಜಗದೀಶ ವಿವಿಯ ವಾರ್ಷಿಕ ವರದಿ ಮತ್ತು ವಿಶೇಷ ಸಾಧನೆಗಳ ಬಗ್ಗೆ ತಿಳಿಸಿದರು. ಕುಲಸಚಿವ ಡಾ.ಕೆ.ಸಿ.ಶಶಿಧರ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
(ವರದಿ ಎಸ್ ಡಿ. ಚಂದ್ರಶೇಖರ್)
Tags:
ಆನಂದಪುರಂ ಸುದ್ದಿ