ವಿಜಯ ಸಂಘರ್ಷ
ಸಾಗರ : ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸುತ್ತಮುತ್ತಲಿನ ಹಳ್ಳ ಕೊಳ್ಳಗಳಲ್ಲಿ ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಸುರಿದ ಭಾರಿ ಮಳೆಯಿಂದಾಗಿ ಆನಂದಪುರ ಹೋಬಳಿಯ ಹೊಸೂರು ಗ್ರಾ ಪಂ ವ್ಯಾಪ್ತಿಯ ನೇದರಹಳ್ಳಿ ಗ್ರಾಮದಲ್ಲಿ ಮನೆ ಸಂಪೂರ್ಣ ಕುಸಿದಿದೆ.
ನೇದರಳ್ಳಿ ಗ್ರಾಮದ ವಾಸಿ ರವಿ ಗೀತಾ ಎಂಬ ದಂಪತಿಗಳ ಮನೆ ಮಳೆಗೆ ಸಂಪೂರ್ಣ ಕುಸಿದಿದೆ.
ವಿಪರೀತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿದ್ದ ಕಾರಣ. ಸಾಗರ ಕಾಲೇಜಿಗೆ ತೆರಳಬೇಕಾಗಿದ್ದ ವಿದ್ಯಾರ್ಥಿನಿ ರಶ್ಮಿತಾ ಮನೆಯಲ್ಲಿ ಇದ್ದು ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ಶಬ್ದ ಕೇಳಿ ಬಂದಿದ್ದು ತಕ್ಷಣವೇ ಹೊರ ಓಡಿ ಬರುತ್ತಿದ್ದಂತೆ ಮನೆ ಸಂಪೂರ್ಣ ನೆಲಸಮವಾಗಿದೆ ವಿದ್ಯಾರ್ಥಿನಿ ಅಪಾಯ ದಿಂದ ಪಾರಾಗಿದ್ದಾಳೆ. ವಿಷಯ ತಿಳಿದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸ್ಥಳಕ್ಕೆ ಭೇಟಿ ನೀಡಿ ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ತಕ್ಷಣವೇ ಬಾಡಿಗೆ ಮನೆ ವ್ಯವಸ್ಥೆ ಮಾಡಿ ಕೊಡಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದರು. ಮನೆಯಲ್ಲಿ ಇದ್ದಂತಹ ದಿನಸಿ ಬಟ್ಟೆ ಹಾಗೂ ವಿದ್ಯಾರ್ಥಿಯ ಪಠ್ಯಪುಸ್ತಕಗಳು ಸಂಪೂರ್ಣ ನಾಶವಾಗಿದ್ದು. ವಿದ್ಯಾರ್ಥಿನಿಗೆ ಪಠ್ಯಪುಸ್ತಕ ಹಾಗೂ ಬಟ್ಟೆಗಾಗಿ ಶಾಸಕರು ಧನಸಹಾಯ ಮಾಡಿದರು. ವಿದ್ಯಾರ್ಥಿಯ ಓದಿಗೆ ತೊಂದರೆಯಾಗದಂತೆ. ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಿದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ ಹರಟೆ, ನಾಗರತ್ನ, ಪಕ್ಷದ ಮುಖಂಡರಾದ ಸೋಮಶೇಖರ್, ಉಮೇಶ್, ಗಜೇಂದ್ರ ಯಾದವ್, ಮಂಜುನಾಥ್ ದಾಸನ್, ಚೇತನ್ ರಾಜ್ ಕಣ್ಣೂರ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
Tags:
ಆನಂದಪುರಂ ಸುದ್ದಿ