ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಳೆ ಆಗುವುದಿಲ್ಲ ಎಂಬ ಬಿಜೆಪಿಯವರ ಆರೋಪ ಸುಳ್ಳಾಗಿದೆ : ಹುಲ್ಮಾರ್ ಮಹೇಶ್

ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕಿನ ರೈತರ ಜೀವನದಿ ಅಂಜನಾಪುರ ಜಲಾಶಯವು ಮಳೆಯಿಂದ ತುಂಬಿ ತುಳುಕುತ್ತಿದ್ದು ಕೋಡಿ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಮಳೆ ಆಗುವುದಿಲ್ಲಾ ಬರಗಾಲ ಇರುತ್ತದೆ ಎಂಬ ಬಿಜೆಪಿಯವರ ಭವಿಷ್ಯ ಸುಳ್ಳಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್
ಹೇಳಿದರು.

ಗುರುವಾರ ಅಂಜನಾಪುರ ಜಲಾಶಯದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು
ಪ್ರಕೃತಿಯ ಮುಂದೆ ಯಾವುದೇ ರಾಜಕೀಯ ದೊಂಬರಾಟಗಳು ನಡೆಯುವುದಿಲ್ಲ. ಈ ಬಾರಿ ರೈತರ ಭರವಸೆಯ ಚಿಕ್ಕಪುಷ್ಯ ಮಳೆಯು ರಾಜ್ಯದೆಲ್ಲೆಡೆ ಧಾರಾಕಾರವಾಗಿ ಸುರಿದಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ತಾಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ರೈತರ ಹೊಲಗದ್ದೆಗಳಿಗೆ ಮಳೆಯ ನೀರು ತುಂಬಿ ಹರಿಯುತ್ತಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ಅಧಿಕಾರದಲ್ಲಿ ದ್ದಾಗ ಅತಿವೃಷ್ಟಿ ಅನಾವೃಷ್ಟಿ ಕೂಡ ಆಗಿದ್ದು ಅದು ಬಿಜೆಪಿಯವರ ಕಾಲ್ಗುಣ ಎಂದು ನಾವು ಬಿಜೆಪಿಯವರ ತರ ಆರೋಪಿಸು ವುದಿಲ್ಲ. ಪ್ರಕೃತಿ ಯಾವುದೇ ಸರ್ಕಾರವಿರಲಿ ಯಾರೇ ಆಡಳಿತ ನಡೆಸಲಿನೋಡುವುದಿಲ್ಲ. ಪ್ರಕೃತಿ ಮುನಿದರೆ ಮಾತ್ರ ಬರಗಾಲ ಎಂದರು.

ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ಭರವಸೆ ನೀಡಿದಂತೆ ತಮ್ಮ 5 ಗ್ಯಾರಂಟಿ ಗಳನ್ನು ಪೂರೈಸುತ್ತಿದ್ದು ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಸಾಕಷ್ಟು ಸಮಯಾವ ಕಾಶವಿದ್ದು ಎಲ್ಲಾ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದು. ಸರ್ಕಾರದ ಈ ಯೋಜನೆ ಉಚಿತವಾಗಿದ್ದು ಯಾರಾದರೂ ಹಣದ ಬೇಡಿಕೆ ಇಟ್ಟರೆ ದೂರು ನೀಡಬಹುದು ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಾಗಿಲ ಅರ್ಪಣೆಯ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಪುರಸಭಾ ಸದಸ್ಯರಾದ ಹುಲ್ಮಾರ್ ಕಮಲಮ್ಮ, ಜಯಶ್ರೀ, ಕಾಂಗ್ರೆಸ್ ಮುಖಂಡರಾದ ಪುಷ್ಪ ಶಿವಕುಮಾರ್ ಮತ್ತಿತರರು ವಿಶೇಷ ಗಂಗಾ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗೋಣಿ ಪ್ರಕಾಶ್, ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ಬಾಬು ಪಾಟೀಲ್, ಕಲ್ಮನೆ ಸುರೇಶ್, ಗಿರೀಶ್, ಸಿದ್ದಪ್ಪ, ಹನುಮಂತಪ್ಪ, ರೋಷನ್, ಮಹೇಂದ್ರ, ಯೋಗೀಶ್, ಪ್ರಕಾಶ್, ಮಂಜಪ್ಪ, ಶ್ರೀಕಾಂತ್ ಜಕ್ಕಿನಕೊಪ್ಪ ಸೇರಿದಂತೆ ಹಲವರಿದ್ದರು.

(ವರದಿ ಹುಲಿಗಿ ಕೃಷ್ಣ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು