ವಿಜಯ ಸಂಘರ್ಷ
ಭದ್ರಾವತಿ: ಬೇಸಿಗೆ ಕಾಲದಲ್ಲಿ ಸಹಜವಾಗಿ ಅಧಿಕ ಪ್ರಮಾಣದಲ್ಲಿ ಎಲ್ಲ ಬಗೆಯ ವಿದ್ಯುತ್ ಬಳಕೆ ಯಾಗುವುದು, ಉತ್ಪಾದನೆಯಲ್ಲಿ ಕುಂಠಿತವಾಗಿ ವಿದ್ಯುತ್
ಸರಬರಾಜಿನಲ್ಲಿ ವ್ಯತ್ಯಯ ಉoಟಾಗು ವುದು ಸಹಜ.ಆದರೆ ಉತ್ತಮವಾಗಿ ಸುರಿದಮಳೆಯಿಂದಾಗಿ ಶರಾವತಿ ಜಲವಿದ್ಯುದಾಗಾರದಲ್ಲಿ ಉತ್ತಮ ವಿದ್ಯುತ್ಉತ್ಪಾದನೆ ಯಾಗುತ್ತಿದ್ದು , ಯಾವುದೇ ರೀತಿಯ ಕೊರತೆ ಇರುವುದಿಲ್ಲ.
ಮಳೆ-ಗಾಳಿಯಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಎಲ್ಲಿಯೂ ಹಾನಿ ಸಹ ಆಗಿರುವುದಿಲ್ಲ. ಆದಾಗ್ಯೂಕಳೆದ ಒಂದು ತಿಂಗಳಿನಿoದ ನಗರ ಪ್ರದೇಶದಲ್ಲಿ ದಿನಕ್ಕೆ ಮೂರ‍್ನಾಲ್ಕು ಬಾರಿವಿದ್ಯುತ್ ಕಡಿತವಾಗುತ್ತಿರುವುದು
ಆಶ್ಚರ್ಯಕರವಾಗಿದ್ದು, ನಾಗರಿಕರ ಹಾಗೂ ವರ್ತಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಜೆ ವೇಳೆ ನಗರದ ಮುಖ್ಯ ರಸ್ತೆಗಳಲ್ಲಿ , ಜನ ನಿಬಿಡ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗುತ್ತಿರುವಕಾರಣ ಆಸ್ಪತ್ರೆ ಮುಂತಾದ ತುರ್ತು ಕೆಲಸಗಳಿಗೆ ಹೋಗಬೇಕಾದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿ, ಮೆಸ್ಕಾಂಗೆ ಹಿಡಿ ಶಾಪ ಹಾಕುವಂತಾಗಿದೆ.
ಬಲ್ಲ ಮೂಲಗಳ ಪ್ರಕಾರ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಅಧಿಕ ಒತ್ತಡವನ್ನು ನಿಭಾಯಿಸಲು ಕೆಲವೊಮ್ಮೆ ಕಡಿತದ ಕ್ರಮ ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆ ಸಂಬಂಧಿತ ಇಲಾಖೆ ನಿರ್ಲಕ್ಷ್ಯದಿಂದಾಗಿ ಗ್ರಾಹಕರು ತೊoದರೆ ಅನುಭವಿಸುವಂತಾಗಿದೆ.
ವಿದ್ಯುತ್ ಕಡಿತದ ಕುರಿತಾಗಿ ಮೆಸ್ಕಾಂ ಇಲಾಖೆ ಯಾವುದೇ ಪ್ರಕಟಣೆ ನೀಡದೆ ಬೇಸಿಗೆಯಲ್ಲಿ ಕಡಿತಗೊಳಿಸುವ ಮಾದರಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಇಲಾಖೆ ಸಾರ್ವಜನಿಕ ರಿಗೆ ಮಾಹಿತಿ ನೀಡದಿರುವುದು ದುರಂತ ಇದರಿಂದ ಉಚಿತ ವಿದ್ಯುತ್ ಘೋಷಿಸಿರುವ ಸರ್ಕಾರ ಕೆಟ್ಟ ಹೆಸರು ಪಡೆಯುವಂತಾಗಿದೆ.
ಅಧಿಕಾರಿಗಳು ಕೂಡಲೇ ಗಮನ ಹರಿಸದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಬಗ್ಗೆ ಎಚ್ಚರಿಸಲಾಗಿದೆ.