ಗದ್ದೆಗೆ ಇಳಿದು ನಾಟಿ ಮಾಡಿದ ವಿದ್ಯಾರ್ಥಿಗಳು

ವಿಜಯ ಸಂಘರ್ಷ
ಸಾಗರ :ಶಾಲಾ ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಇತರ ಕೆಲವೊಂದು ಚಟು ವಟಿಕೆಗಳು ಅಷ್ಟೇ ಮುಖ್ಯವಾಗಿರುತ್ತದೆ. ಈಗಿನ ಮಕ್ಕಳಿಗೆ ರೈತರ ಬಗ್ಗೆ ಅಥವಾ ರೈತರು ಕೆಲಸ ಮಾಡುವ ಬಗ್ಗೆ ತಿಳಿದಿರು ವುದಿಲ್ಲ. ಈ ಕಾರಣಕ್ಕೆ ಶಿಕ್ಷಕರಿಂದಲೇ ಮಕ್ಕಳಿಗೆ ಭತ್ತದ ನಾಟಿ ಮಾಡುವ ಪಾಠ ಮಾಡಲಾಯಿತು.

ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಸಮೀಪವಿರುವ ಗದ್ದೆಗೆ ಕರೆದೋಯ್ದು ನಾಟಿ ಕಾರ್ಯ ಮಾಡಿಸುವ ಮೂಲಕ ಮಕ್ಕಳಿಗೆ ಜೀವನ ಪಾಠವನ್ನು ಶಿಕ್ಷಕರು ಹೇಳಿಕೊಟ್ಟರು. ಪಠ್ಯ ಚಟುವಟಿಕೆಯಲ್ಲಿ ಸದಾ ತೊಡಗಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬದುಕಿನ ಪಾಠ ತಿಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು