ದಾಸರಕಲ್ಲಹಳ್ಳಿ ಪಿಡಿಓ ಅಮಾನತ್ತಿಗೆ ದಸಂಸ ಅಗ್ರಹ

ವಿಜಯ ಸಂಘರ್ಷ
ಭದ್ರಾವತಿ: ಮಳೆಯಿಂದ ಹಾನಿಗೊಳ ಗಾದ ಮನೆಗಳ ನಿರ್ಮಾಣದಲ್ಲಿ ಮನೆಗಳನ್ನು ಕ್ರಮಬದ್ಧವಾಗಿ ನಿರ್ಮಿಸದೆ ಫಲಾನುಭವಿಗಳೊಂದಿಗೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿ ಬಿಲ್ ಮಾಡಿಸಿ ಅಕ್ರಮ ವೆಸಗಿರುವ ತಾಲೂಕಿನ ದಾಸರ ಕಲ್ಲಹಳ್ಳಿ ಗ್ರಾ ಪಂ ಪಿಡಿಓ ರವರನ್ನು ಅಮಾನತುಗೊಳಿಸುವಂತೆ ಹಾಗು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಸಂಸ ವತಿಯಿಂದ ಗ್ರಾ ಪಂ ಮುಂಭಾಗ ಪ್ರತಿಭಟನೆ ನಡೆಸಿ ತಾ ಪಂ ಕಾರ್ಯ ನಿರ್ವಹಣಾಧಿಕಾರಿಗೆ ಮನವಿಸಲ್ಲಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಹಾನಿ ಯಿಂದ ಒಟ್ಟು 62 ಮನೆಗಳು ಹಾನಿಗೊಳ ಗಾಗಿವೆ ಎಂದು ಸರ್ಕಾರಕ್ಕೆ ವರದಿ ನೀಡಿ ಅನುದಾನ ಪಡೆಯ ಲಾಗಿದೆ. ಒಂದು ಗೋಡೆ ಬಿದ್ದ ಮನೆಗೂ ಬಿ2 ವರದಿ ನೀಡಿ 5 ಲಕ್ಷ ಅನುದಾನ ಮಂಜೂರಾತಿ ಮಾಡಿಸಲಾಗಿದ್ದು, ಫಲಾನುಭವಿಗಳ ಜೊತೆ ಶಾಮೀಲಾಗಿ ಫೋರ್ಜರಿ ಜಿಪಿಎಸ್ ಮಾಡಿಸಿ ನಿಯಮಾನುಸಾರ ಮನೆಗಳನ್ನು ನಿರ್ಮಿಸದೇ ಬಿಲ್ ಪಾಸ್ ಮಾಡಿಸಲಾಗಿದೆ ಎಂದು ಆರೋಪಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
ಸರ್ಕಾರಕ್ಕೆ ವಂಚಿಸಿದ್ದು, ಕರ್ತವ್ಯ ಲೋಪಎಸಗಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಕರ್ತವ್ಯದಿಂದ ಅಮಾನತುಗೊಳಿಸಬೇಕು. 62 ಮನೆಗಳ ಸಂಪೂರ್ಣತನಿಖೆ ನಡೆಸಬೇಕು. ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ ಬರುವ ಆಗಸನಹಳ್ಳಿ,
ಎಮ್ಮೆಹಟ್ಟಿ, ಅರದೊಟ್ಲು ಗ್ರಾಮಗಳಲ್ಲಿ ರುವ ಸ್ಮಶಾನ ಭೂಮಿಯಲ್ಲಿ ಮೃತದೇಹ ಸುಡಲು ಬರ್ನಿಂಗ್ ಶೆಡ್ ಹಾಗು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಾಯಿತು.

ಅರದೊಟ್ಲು ಗ್ರಾಮದ ಅಂಗನವಾಡಿ ಕೇಂದ್ರಗಳ ಕಿಟಿಕಿ ಹಾಗು ಬಾಗಿಲು ಗಳನ್ನು ದುರಸ್ತಿಪಡಿಸಿ ಸುಣ್ಣ ಬಣ್ಣ ಮಾಡಿಸು ವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ಗ್ರಾಮ ಗಳಲ್ಲಿ ಎಸ್.ಸಿ/ಎಸ್.ಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವುದು. ರಾಷ್ಟ್ರೀಯ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ಕುಟುಂಬಕ್ಕೆ 150 ದಿನ ಕೆಲಸ ನೀಡುವಂತೆ ಒತ್ತಾಯಿಸಲಾಯಿತು.

ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್, ಡಿಎಸ್‌ಎಸ್ ಗ್ರಾಮಾಂತರ ಪ್ರಧಾನ ಸಂಚಾಲಕ ಟಿ.ಹನುಮಂತಪ್ಪ, ಸಂಘಟನಾ ಸ0ಚಾಲಕ ಬಿ. ನವೀನ್‌ ಕುಮಾರ್ , ವಸಂತ ಕಲ್ಲಜ್ಜನಹಾಳ್,
ರವಿಕುಮಾರ್ ಅರಕೆರೆ, ಮಲ್ಲೇಶ್
ಕೆರೆಬೀರನಹಳ್ಳಿ, ಮೋಹನ್ ನಿಂಬೆಗು0ದಿ, ದೇವರಾಜ ಬೊಮ್ಮನಕಟ್ಟೆ, ಹರೀಶ್
ಕಲ್ಲಿಹಾಳ್ ಮತ್ತು ಇಮ್ರಾನ್ ಬಾಷಾ
ಕಲ್ಲಿಹಾಳ್ ಸೇರಿದಂತೆ ಇನ್ನಿತರರು
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು