ವಿಜಯ ಸಂಘರ್ಷ
ಭದ್ರಾವತಿ: ವಿ.ಐ.ಎಸ್.ಎಲ್ ಆಸತ್ರೆ, ನಾರಾಯಣ ಆಸ್ಪತ್ರೆ ಹಾಗೂ ಮಜುಂದಾರ್ ಷಾ ಕ್ಯಾನ್ಸರ್ ಸಂಸ್ಥೆ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ನ್ಯೂಟೌನ್ ವಿಐಎಸ್ಎಲ್ ಆಸ್ಪತ್ರೆಯಲ್ಲಿ ಮಹಿಳೆಯರಿ ಗಾಗಿ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಖಾನೆಯ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಶೋಭಾ ಶಿವಶಂಕರನ್ ಉದ್ಘಾಟಿಸಿದರು. ವಿಐಎಸ್ಎಲ್ ಆಸ್ಪತ್ರೆಯ ಚೀಪ್ ಕನ್ಸಲ್‌ಟೆಂಟ್ ಗಳಾದ ಡಾ:ಎಚ್. ಶೋಭಾ, (ಮೆಡಿಕಲ್), ಡಾ: ಟಿ.ಎನ್. ಸುಷ್ಮಾ, (ಮೆಡಿಕಲ್) ಮತ್ತು ಸಹಾಯಕ ಪ್ರಬಂಧಕರಾದ ಕೆ.ಎಸ್. ಶೋಭಾ, (ಸಿಬ್ಬಂದಿ), ನಾರಾಯಣಣ ಆಸ್ಪತ್ರೆಯ
ಡಾ:ಕೀರ್ತನ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಕೆ.ಸಿ. ಆಕಾಶ್ ಎಕ್ಸ್ ರೇ-ತಂತ್ರಜ್ಞರಾದ ನಿರ್ಮಲ, ಕ್ಯಾನ್ಸರ್ ನರ್ಸಿಂಗ್ ತಂಡದ ಲಲಿತ ಭಾಗವಹಿಸಿದ್ದರು.
ವಿಐಎಸ್‌ಎಲ್ ಆಸ್ಪತ್ರೆಯ ವೈದ್ಯರಾದ ಡಾ:ಕೆ.ಎಸ್.ಸುಜೀತ್ ಕುಮಾರ್ ಮತ್ತು ಡಾ: ಎಸ್.ಎನ್. ಸುರೇಶ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮಹಿಳೆಯರು ತಪಾಸಣೆಗೆ ಒಳಪಟ್ಟು ಸದುಪಯೋಗ ಪಡಿಸಿಕೊಂಡರು.